ಗುಡೇಕೋಟೆಯಲ್ಲಿ ಅಖಿಲ ಭಾರತ ಕಿಸಾನ್ ಸಭಾ ಗ್ರಾಮ ಘಟಕ ಉದ್ಘಾಟನೆ
ವಿಜಯನಗರ ಜಿಲ್ಲೆ. ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಸಂಘದ ನೂತನ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಅಧ್ಯಕ್ಷರಾದ ವಕೀಲ ಟಿ.ಪರುಶಪ್ಪ
ರೈತರು ಸರಳ ಬದುಕನ್ನು ಮೈಗೂಡಿಸಿಕೊಂಡು ಅಜ್ಞಾನ ಮತ್ತು ಮೌಢ್ಯದಿಂದ ಹೊರಬಂದಾಗ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಪ್ರಸ್ತುತ ದೇಶದೆಲ್ಲೆಡೆ ವಿವಿಧ ಕಾರಣಗಳಿಂದಾಗಿ ರೈತರು ಆತ್ಯಹತ್ಯೆಗೆ ಶರಣಾಗುತ್ತಿದ್ದಾರೆ ಇದಕ್ಕೆ ಆಡಳಿತ ನಡೆಸುವ ಸರ್ಕಾರಗಳೇ ನೇರ ಹೊಣೆ ರೈತರ ನೋವು ಯಾರಿಗೂ ಅರ್ಥವಾಗುತ್ತಿಲ್ಲಾ
ಈ ದೇಶವನ್ನಾಳಿದ ಯಾವುದೇ ರಾಜಕೀಯ ಪಕ್ಷಗಳು ರೈತರ ಹಿತಕಾಯುವಲ್ಲಿ ವಿಫಲವಾಗಿವೆ ಹಾಗಾಗಿ ಗ್ರಾಮ ಮಟ್ಟದಿಂದ ರೈತರನ್ನು ಸಂಘಟಿಸುವ ಸಲುವಾಗಿ ಐತಿಹಾಸಿಕ ವೀರ ಕಲಿಗಳ ನಾಡಾದ ಗುಡೇಕೋಟೆ ಯಿಂದಲೇ ಅಖಿಲ ಭಾರತ ಕಿಸಾನ್ ಸಭಾ ಘಟಕವನ್ನು ಸ್ಥಾಪಿಸಲಾಗಿದೆ ಎಂದರು
ಈ ಭಾಗದಲ್ಲಿ ರೈತರಿಗೆ ಸಿಗುವ ಸೌಲಭ್ಯಗಳು ಸಮರ್ಪಕವಾಗಿ ರೈತರಿಗೆ ಸಿಗಬೇಕು ಎಲ್ಲಾ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಸಿಗುವ ಸೌಲಭ್ಯಗಳು ಅನ್ಯರ ಪಾಲಾಗುತ್ತಿವೆ ರೈತರು ಜಾಗೃತರಾಗಬೇಕು ಎಂದು ಎಚ್ಚರಿಸಿದರು
ಅಖಿಲ ಭಾರತ ಕಿಸಾನ್ ಸಭಾ ನಾಮಫಲಕ ಅನಾವರಣವನ್ನು ರಾಜ್ಯ ಉಪಾಧ್ಯಕ್ಷರಾದ ಹೋಸಳ್ಳಿ ಮಲ್ಲೇಶ್ ನೆರವೇರಿಸಿದರು
ಈ ಸಂದರ್ಭದಲ್ಲಿ ಸಿಪಿಐ ತಾಲೂಕು ಪ್ರಧಾನ ಕಾರ್ಯದರ್ಶಿ ಹೆಚ್.ವೀರಣ್ಣ, ಹೋಬಳಿ ಅಧ್ಯಕ್ಷ ತಿಪ್ಪೇಸ್ವಾಮಿ, ಅಖಿಲ ಭಾರತ ಯುವಜನ ಫೆಡರೇಷನ್ ತಾಲೂಕು ಉಪಾಧ್ಯಕ್ಷ ಮಂಜುನಾಥ್, ಗುಡೇಕೋಟೆ ಗ್ರಾಮ ಘಟಕದ ಅಧ್ಯಕ್ಷರಾದ ಎಂ.ಯರ್ರೀಸ್ವಾಮಿ, ಗುಡೇಕೋಟೆ ಗ್ರಾಮ ಘಟಕದ ಉಪಾಧ್ಯಕ್ಷ ಜಿ.ನಾಗರಾಜ್, ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಉಪಾಧ್ಯಕ್ಷರಾದ ಹಾಡಿದೋಡ್ಡ ಚಿತ್ತಪ್ಪ, ಎಸ್.ಎನ್.ಮಲ್ಲಿಕಾರ್ಜುನ, ಗುಡೇಕೋಟೆ ಸಂಚಾಲಕರಾದ ಪಂಚಾಕ್ಷರಿ,ನಾಗೇಶ್, ಕೃಷ್ಣಪ್ಪ, ಸಿದ್ದಪ್ಪ,ಈಶಣ್ಣ ,ವೆಂಕಟೇಶ್, ಆರ್.ರಮೇಶ್ಗೌಡ,ಹೇಮಣ್ಣ, ಪ್ರಭು ಸೇರಿದಂತೆ ಗುಡೇಕೋಟೆ ಹೊಬಳಿಯ ಎಲ್ಲಾ ಅಖಿಲ ಭಾರತ ಕಿಸಾನ್ ಸಭಾ ಸಂಘದ ಸದಸ್ಯರು ಭಾಗವಹಿಸಿದ್ದರು…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
