ಸಂಡೂರು ಬಿಇಓ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು.?! ಶಿಕ್ಷಕರು ಆದೇಶ ಪಾಲಿಸುತ್ತಿಲ್ವಾ..ಯಾಕೇ..?
ಸಂಡೂರು:ಆಕ್ಟೊಬರ್:16:-ಸಂಡೂರು ತಾಲೂಕಿನ ಬಂಡ್ರಿ ಕೆಪಿಎಸ್ ಶಾಲೆಯ ಶಿಕ್ಷಕರ ನಿಯೋಜನೆಗೆ ಸಂಬಂಧಿಸಿದಂತೆ ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢ ಶಾಲೆಗಳಿಂದ ಶಿಕ್ಷಕರನ್ನು ತಾತ್ಕಾಲಿಕವಾಗಿ ಬೋಧನಾ ಹೊಂದಾಣಿಕೆಯನ್ನು ದಿನಾಂಕ:23.09.2021 ರಂದು ಮಾನ್ಯ ಸಂಡೂರುನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ.ಐ.ಆರ್ ಅಕ್ಕಿ,ಯವರು ಬಂಡ್ರಿ ಕೆಪಿಎಸ್ ಪ್ರೌಢ ಶಾಲೆಯ ಶಿಕ್ಷಕರಾದ ಎಂ.ಸುಭಾನಿ ಹಾಗೂ
ಜೆ.ಪುರುಷೋತ್ತಮ ಅವರುಗಳನ್ನು ಪಕ್ಕದ ಗ್ರಾಮವಾದ ನಿಡುಗುರ್ತಿ ಗ್ರಾಮ ಪಂಚಾಯಿತಿಯ ನಿಡುಗುರ್ತಿ ಪ್ರೌಢ ಶಾಲೆಗೆ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ವಾರದ ಮೂರು ದಿನಗಳಲ್ಲಿ ಗುರುವಾರ,
ಶುಕ್ರವಾರ,ಶನಿವಾರದಂದು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ನಿಯೋಜನೆಗೊಳಿಸಿದ್ದರು,
ಬಿಇಓ ಅವರ ನಿಯೋಜನೆಯ ಆದೇಶವನ್ನು.ಕೆಪಿಎಸ್ ಶಾಲೆಯ ಮುಖ್ಯಗುರುಗಳಿಗೆ ಇಲಾಖೆಯ ಇಸಿಓ ಬಸವರಾಜ್ ಅವರು ತಲುಪಿಸಿದ್ದರು, ಆದರೆ ಈ ಇಬ್ಬರು ಶಿಕ್ಷಕರು ಪಾಠಗಳನ್ನು ಬೋಧನೆ ಮಾಡುವುದಕ್ಕಿಂತ ಹೆಚ್ಚಾಗಿ ರಾಜಕೀಯವನ್ನು ಮಾಡುವುದರಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ,ಕಾರಣ ಇವರು ಗ್ರಾಮ ಪಂಚಾಯಿತಿಯ ಕೆಲ ಸದಸ್ಯರ ಮೂಲಕ ಇವರನ್ನು ಈ ಶಾಲೆಯಿಂದ ಬಿಡುಗಡೆ ಗೊಳಿಸಬಾರದೆಂದು ಮನವಿಯನ್ನು ಸಲ್ಲಿಸಿದ್ದಾರೆ,
ಪಾಪ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸ್ಪಷ್ಟವಾದ ಮಾಹಿತಿ ಗೊತ್ತಿಲ್ಲ, ಬಿಇಓ ಅವರು ಆದೇಶ ನೀಡಿರುವುದು ನಿಡುಗುರ್ತಿ ಶಾಲೆಯ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಅಂತಾ..?
ಕೆಪಿಎಸ್ ಶಾಲೆಯ ಮುಖ್ಯ ಗುರುಗಳಾದ ಬಸವರಾಜ್ ಕಂಕ್ರಿ ಅವರನ್ನು ಈ ವಿಷಯವಾಗಿ ವಿಚಾರಿಸಲಾಗಿ ” ಗ್ರಾಮ ಪಂಚಾಯಿತಿಯವರು ಇವರಿಬ್ಬರನ್ನು ರಿಲೀವ್ ಮಾಡಬಾರದೆಂದು ಲೆಟರ್ ಕೊಟ್ಟಿದ್ದಾರೆ” ಎಂದು ಹೇಳುತ್ತಾರೆ, ಈ ಮುಖ್ಯ ಗುರುಗಳಾದ ಬಸವರಾಜ್ ಕಂಕ್ರಿ ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಾದ ಬಿಇಓ ಅವರ ಆದೇಶವನ್ನು ಪಾಲಿಸದೇ ಸ್ಥಳೀಯ ರಾಜಕೀಯ ಮುಖಂಡರ ಮಾತನ್ನು ಪಾಲಿಸುತ್ತಾರೆ ಎಂದರೆ ಇನ್ನು ಯಾವ ಮಟ್ಟಕ್ಕೆ ಬಿಇಓರಿಗೆ ಗೌರವ ಕೊಡುತ್ತಾರೆ ಎಂಬುದು ತಿಳಿಯುತ್ತದೆ, ಸಂಡೂರು ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಎಷ್ಟೊಂದು ರಾಜಕೀಯ ತಾಂಡವವಾಡುತ್ತಿದೆ ಎಂಬುದು ಗೊತ್ತಾಗುತ್ತದೆ,
ಆಯಾ ತಾಲೂಕಿನ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶಕ್ಕೆ, ಮಾತಿಗೆ ಮನ್ನಣೆಯನ್ನು ನೀಡಬೇಕಾಗಿರುವುದು ಶಿಕ್ಷಕರ ಕರ್ತವ್ಯ..ಮಾಹಿತಿಯ ತಿಳಿವಳಿಕೆ ಇಲ್ಲದೆ ಬೇಜವಾಬ್ದಾರಿಯಿಂದ ವರ್ತಿಸುವುದನ್ನು ಗಮನಿಸಿದರೆ ಮಾನ್ಯ ಬಿಇಓ ಮಾತಿಗೆ ಎಷ್ಟೊಂದು ಗೌರವ ಮತ್ತು ಕಿಮ್ಮತ್ತು ನೀಡುತ್ತಿದ್ದಾರೆ ಎಂಬುದನ್ನು ಇಲ್ಲಿ ನಾವು ಕಾಣಬವುದು.

ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ನಮ್ಮದೊಂದು ಮನವಿ, ನಿಮ್ಮ ಇಲಾಖೆಯ ಶಿಕ್ಷಕರು ನಿಮ್ಮ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿಲ್ವಾ, ಅಥವಾ ನಿಮ್ಮ ಮಾತು ಕೇಳುತಿಲ್ಲವಾ..? ನೀವುಗಳು ಇವರಿಬ್ಬರನ್ನು ತಾತ್ಕಾಲಿಕವಾಗಿ ನಿಯೋಜನೆ ಗೊಳಿಸಿರುವುದು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ, ಆದರೆ ಅದನ್ನು ಅರ್ಥ ಮಾಡಿಕೊಳ್ಳದೇ ರಾಜಕೀಯವನ್ನು ಬೆರೆಸಿಕೊಂಡು ನಮ್ಮನ್ನು ನಿಯೋಜನೆಗೊಳಿಸಬಾರದೆಂದು ಗ್ರಾಮ ಪಂಚಾಯಿತಿಯವರಿಂದ ಹೇಳಿಸುತ್ತಾರಲ್ಲ ಇದು ಇಡೀ ಶಿಕ್ಷಣ ಇಲಾಖೆಯೇ ನಾಚಿಕೆಪಡುವಂತದ್ದು ಅಲ್ಲವೇ..
ಈ ಶಾಲೆಯಲ್ಲಿ ಇದ್ದರೂ ಸಹ ಅದೇ ಪಾಠವನ್ನು ಮಾಡುತ್ತಾರೆ ನಿಡುಗುರ್ತಿ ಶಾಲೆಗೆ
ಹೋದರು ಅದೇ ಪಾಠವನ್ನು ಮಾಡುತ್ತಾರೆ ಅಲ್ವಾ.. ಅದನ್ನು ಅರ್ಥಮಾಡಿಕೊಳ್ಳದ ಇಬ್ಬರು ಶಿಕ್ಷಕರು ಇನ್ನು ಬಂಡ್ರಿ ಶಾಲೆಯಲ್ಲಿ ಮಕ್ಕಳಿಗೆ ಯಾವ ರೀತಿಯಾಗಿ ಪಾಠವನ್ನು ಮಾಡುತ್ತಿರುವವರು ಎಂಬುದು ಗೊತ್ತಾಗುತ್ತದೆ
ನಿಮ್ಮ ಆದೇಶಕ್ಕೆ ಬೆಲೆ ಹಾಗೂ ಗೌರವ ನೀಡದ ಈ ಇಬ್ಬರು ಶಿಕ್ಷಕರನ್ನು ನಿಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಸೂಕ್ತವಾದ ಕಾನೂನು ಕ್ರಮವನ್ನು ಕೈಗೊಂಡು ಸಾರ್ವಜನಿಕರ ದೃಷ್ಟಿಯಲ್ಲಿ ಶಿಕ್ಷಣ ಇಲಾಖೆಯ ಮಾನ-ಮರ್ಯಾದೆಯನ್ನು ಕಾಪಾಡಿಕೊಳ್ಳುತ್ತೀರಾ..ಅಥವಾ ಹರಾಜು ಹಾಕಿ ಕೊಳ್ಳುತ್ತೀರಾ..? ನಿರ್ದಾರ ನಿಮಗೆ ಬಿಟ್ಟಿದ್ದು ಕಾಯ್ದು ನೋಡೋಣ..!!

ವರದಿ. ಎಚ್ಚರಿಕೆ ಪತ್ರಿಕಾ ವರದಿಗಾರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
