ಅಕಾಲಿಕ ಮಳೆಗೆ ಬಣವಿಕಲ್ಲು ಗ್ರಾಮದ ಕಮಲಮ್ಮನವರ ಎರಡು ಎಕರೆ ಹೊಲದಲ್ಲಿ ಮೆಣಸಿನಕಾಯಿ ಬೆಳೆ ಹಾಳು, ರಾಜ್ಯದಲ್ಲಿ ಹಲವು ದಿನಗಳಿಂದ ಅಕಾಲಿಕ ಮಳೆ ಬಂದಿದ್ದು ರೈತರ ಒಂದು ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ, ಬರದ ತಾಲೋಕು ಎಂದೇ ಬಿಂಬಿತವಾಗಿರುವ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಪ್ರತಿ ವರ್ಷ ರೈತರ ಗೋಳು ಇದೆ ತರನಾದ ಒಂದು ಬದುಕನ್ನು ಅನುಭವಿಸುತ್ತಿದ್ದಾರೆ. ಕೆಲವು ಬಾರಿ ಸರಿಯಾದ ಸಮಯಕ್ಕೆ ಮಳೆ ಬಾರದೇ ಬರಗಾಲ ಉಂಟಾದರೆ ಈ ಬಾರಿ ಮಳೆ ವಾಡಿಕೆಗಿಂತ ಜಾಸ್ತಿಯಾಗಿ ರೈತರ ಬೆಳೆಗಳು ನಾಶವಾಗಿವೆ, ಆದರೆ ರಾಜ್ಯ ಸರ್ಕಾರ ಇತ್ತ ಕಡೆ ಗಮನವನ್ನು ಹರೆಸಿ ಈ ತಾಲೂಕಿನ ರೈತರ ಒಂದು ಕಷ್ಟಕ್ಕೆ ಸ್ವಂದಿಸಲಿ, ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಸರಿಯಾದ “ರೀತಿಯಲ್ಲಿ ಸಮೀಕ್ಷೆಯನ್ನು”ಮಾಡಿ ಸರ್ಕಾರದ ಗಮನಕ್ಕೆ ತರಲಿ ಇಂತಹ ವಿಷಯದಲ್ಲಿ ತಾರತಮ್ಯ ಬೇಡ ಎನ್ನುವುದು ಇಲ್ಲಿನ ರೈತರ ಗೋಳು ತಾಲೂಕಿನ ಕೃಷಿಅಧಿಕಾರಿಗಳು ರೈತರಿಗೆ ಸಿಗುವ ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ತಲುಪಿಸುತ್ತಿಲ್ಲ ಇದರಲ್ಲೂ ಸಹ, ಲಂಚಮಾಹೇ ನಡೆಯುತ್ತಿದೆ ಎನ್ನುವ ಅನುಮಾನ ನಮ್ಮಲ್ಲಿ ಕಾಡುತ್ತಿದೆ ಎನ್ನುತ್ತಾರೆ ನೋವುಂಡ ರೈತರು.
ಈಗ ನಾವು ಹೇಳಹೊರಟಿರುವ ವಿಷಯ ಮೊನ್ನೆ ಬಿದ್ದ ಅಕಾಲಿಕಮಳೆಗೆ ಎರಡು ಎಕೆರೆ ಮೆಣಸಿನಕಾಯಿ ಬೆಳೆ ಹಾಳು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ, ಕಮಲಮ್ಮ, ಗಂಡ ನಾಗೇಂದ್ರಪ್ಪ,ಎನ್ನುವ ಇವರು ಎರಡು ಎಕೆರೆಗೆ ಮೆಣಸಿನಕಾಯಿ ಬೆಳೆ ಹಾಕಿದ್ದು ಇನ್ನೇನು ಬೆಳೆ ಕೈಗೆ ಬರುವ ಸಮಯದಲ್ಲಿ, ಅಕಾಲಿಕ ಮಳೆಗೆ ಸಿಕ್ಕಿ ಇಡೀ ಎರಡುಎಕರೆ ಎಲ್ಲಾ , ಮೆಣಸಿನಕಾಯಿ ಗಿಡಗಳೆಲ್ಲಾ, ಕೊಳೆತು, ಬಾಡಿಹೋಗಿವೆ. ನಮ್ಮ ಸಂಕಷ್ಟ ಹೇಳತೀರದಾಗಿದೆ ಎಂದು, ಕಮಲಮ್ಮನವರು, ತಮ್ಮ ದುಃಖವನ್ನು, ಅಳುತ್ತಾ ತೋಡಿಕೊಂಡರು. ಈ ಅಕಾಲಿಕ ಮಳೆ ನಮ್ಮ ಬೆಳೆಯನ್ನ ಹಾಳುಮಾಡಿದೆ, ಲಕ್ಷಾಂತರ ರೂಪಾಯಿ, ಖರ್ಚುಮಾಡಿ, ಬೆಳೆದಬೆಳೆ, ನಾಶವಾಗಿದೆ. ಸರಕಾರ ರೈತರ ನೆರವಿಗೆ ಧಾವಿಸಬೇಕು, ಎನ್ನುತ್ತಾರೆ, ಅವರು ಸುಮಾರು ಬಾರಿ ಇಂತಹ ಕಷ್ಟವನ್ನು ನಾವು ಅನುಭವಿಸಿದ್ದರು ನಮಗೆ ಸರ್ಕಾರದ ಒಂದು ಸವಲತ್ತು ಸರಿಯಾದ ರೀತಿಯಲ್ಲಿ ದೊರಕಿಲ್ಲ ಮೊನ್ನೆ ಮಾನ್ಯ ಜಿಲ್ಲಾ ಹಳ್ಳಿಗಳ ಸಮೀಕ್ಷೆಗೆ ಬಂದಿದ್ದರು ಸಹ ನಮಗೇನು ಪ್ರಯೋಜನವಾಗಿಲ್ಲ ಕೆಲವು ಕಡೆ ಬಂದು ನಮ್ಮ ಗ್ರಾಮದ ಕಡೆ ಬರದೇ ಹೋಗಿರುವುದು ನಮಗೆ ಆತಂಕದ ವಿಷಯ ಇನ್ನಾದರೂ ನಮ್ಮ ಒಂದು ಕಷ್ಟದ ಕೂಗು ಕೇಳಿ ಪರಿಹಾರವನ್ನು ತಾಲೋಕು ಆಡಳಿತ ಮಂಡಳಿ ಸಂಬಂಧ ಪಟ್ಟ ಇಲಾಖೆಗೆ ತಲುಪಿಸಿ ನಮಗೆ ನೆರವನ್ನು ಕೊಟ್ಟರೆ ನಾವು ಸಾಲಗಾರರಿಗೆ ಸಾಲವನ್ನು ತಲುಪಿಸಿ ಮುಕ್ತರಾಗುತ್ತೇವೆ ಇಲ್ಲವಾದರೆ, ಸಾವೊಂದೇ ನಮಗೆ ಕೊನೇ ಪರಿಹಾರ ಅನ್ನುತ್ತಾರೆ ಸಂಕಷ್ಟದಲ್ಲಿರುವ ರೈತ ಮಹಿಳೆ ಕಮಲಮ್ಮ ಇನ್ನಾದರೂ ಇವರ ಒಂದು ಕಷ್ಟಕ್ಕೆ ಸ್ವಂದಿಸಲಿ ಎನ್ನುವುದೇ ನಮ್ಮ ಉದ್ದೇಶ….
ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
