ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ “ಆಜಾದ್ ಕಿ ಅಮೃತ,, ಮಹೋತ್ಸವ ಕಾರ್ಯಕ್ರಮ ಜರುಗಿತು…!!

ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ “ಆಜಾದ್ ಕಿ ಅಮೃತ,, ಮಹೋತ್ಸವ ಕಾರ್ಯಕ್ರಮ ಜರುಗಿತು.

 

“Azadi ki amrut mahotsav ” ಜನ ಶಿಕ್ಷಣ ಸಂಸ್ಥಾನ ದಾವಣಗೆರೆಯು ಕೌಶಲ್ಯಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ, ಹಾಗೂ ಭಾರತ ಸರ್ಕಾರದ ಯೋಜನೆಯಗಿದ್ದು, ದಾವಣಗೆರೆ ಜಿಲ್ಲೆಯಲ್ಲಿ 2005 ನೇ ಇಸವಿಯಿಂದ ಕೌಶಲ್ಯಭಿವೃದ್ಧಿ ತರಬೇತಿಗಳನ್ನು ನೀಡುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಅನಕ್ಷರಸ್ತರು, ಸ್ವಲ್ಪ ಓದಿದವರನ್ನು ಗುರುತಿಸಿ ಅವರಿಗೆ ವಿವಿಧ ತರಬೇತಿ (ಟ್ರೇಡ್) ಗೆ ಸಂಬಂಧಿಸಿದಂತೆ ಕೌಶಲ್ಯಭಿವೃದ್ಧಿ ತರಬೇತಿಗಳನ್ನು ನೀಡುತ್ತಿದೆ. 2005 ನೇ ಇಸವಿಯಿಂದ ಇಲ್ಲಿಯವರೆಗೆ ಸುಮಾರು 35 ಸಾವಿರ ಜನರಿಗೆ ತರಬೇತಿಗಳನ್ನು ನೀಡಿದೆ. ಇವರಲ್ಲಿ ಅನೇಕರು ಮನೆಯಲ್ಲಿಯೇ ಸ್ವಂತ ಉದ್ಯೋಗವನ್ನು ಮಾಡಿಕೊಂಡು ತಿಂಗಳಿಗೆ ರೂ 5000 – 10000 ವರೆಗೆ ದುಡಿಮೆಯನ್ನು ಮಾಡುತ್ತಿದ್ದಾರೆ. ಕೆಲವರು ಬ್ಯಾಂಕ್, ಸ್ವ ಸಹಾಯ ಸಂಘಗಳ ಮೂಲಕ ಹಣಕಾಸಿನ ನೆರವು ಪಡೆದು ಅಂಗಡಿಗಳನ್ನು ತೆರೆದು ತಿಂಗಳಿಗೆ 10,000-30,000 ವರೆಗೆ ದುಡಿಮೆಯನ್ನು ಮಾಡುತ್ತಿದ್ದಾರೆ.
ಜನ ಶಿಕ್ಷಣ ಸಂಸ್ಥಾನ ದಾವಣಗೆರೆಯು ಕ್ರಿಯಾಯೋಜನೆಯ ಪ್ರಕಾರ ಕಾರ್ಯನಿರ್ವಹಿಸುವುದರ ಜೊತೆಗೆ ರಾಷ್ಟ್ರೀಯ ಕಾರ್ಯಕ್ರಮಗಳಾದ ಅಂಬೇಡ್ಕರ್ ಜಯಂತಿ, ವಿಶ್ವ ಪರಿಸರ ದಿನಾಚರಣೆ, ಸ್ವಚ್ಛತಾ ಪಕ್ವಾಡ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ಗಣರಾಜ್ಯೋತ್ಸವ, ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ, ಮಾತೃ ಭಾಷ ದಿನ, ಕೋವಿಡ್ 19 ಜಾಗೃತಿ ಕಾರ್ಯಕ್ರಮ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಈ ಸಾಲಿನಲ್ಲಿ ಆಜಾದ್ ಕಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಇದರ ಅಂಗವಾಗಿ ದಿನಾಂಕ 14.09.2021 ರಂದು ಜನ ಶಿಕ್ಷಣ ಸಂಸ್ಥಾನ ದಾವಣಗೆರೆಯು ಹೊನ್ನಾಳಿ ತಾಲ್ಲೂಕು ಕುಂದೂರು ಗ್ರಾಮದಲ್ಲಿ ಸಂಪನ್ಮೂಲ ವ್ಯಕ್ತಿಗಳ ಜೊತೆಗೂಡಿ ತರಬೇತಿ ಕೇಂದ್ರ ದಲ್ಲಿ “Meeting With the village Members and social activists on Cleanliness and Personal Hygiene” ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಚಿದಾನಂದ ಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು, ಹಾಗೂ ಸದಸ್ಯರಾದ ಶ್ರೀಯುತ ಆಂಜನೇಯ, ರಹಮಾತುಲ್ಲಾಖಾನ್, ಅವರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು, ಜನ ಶಿಕ್ಷಣ ಸಂಸ್ಥಾನ ದಾವಣಗೆರೆ ವತಿಯಿಂದ ಶ್ರೀಮತಿ ಶೈಲಶ್ರೀ ನಿರ್ದೇಶಕರು, ಶ್ರೀ ಜಗದೀಶ್, ಕಾರ್ಯಕ್ರಮಾಧಿಕಾರಿಗಳು, ಶ್ರೀ ಶ್ರೀ ನಿತಿನ್ ಹಾಗೂ ಸಂಪನ್ಮೂಲ ವ್ಯಕ್ತಿಗಳು, ಕಲಿಕಾರ್ಥಿಗಳು ಭಾಗವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ಸ್ವಚ್ಛತೆ ಮತ್ತು ವ್ಯಯಕ್ತಿಕ ಸ್ವಚ್ಛತೆಗೆ ಸಂಬಂಧಿಸಿದಂತೆ ಗ್ರಾಮದ ಮುಖಂಡರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಾಮಾಜಿಕ ಕಾರ್ಯಕರ್ತರ ಜೊತೆ ಸಭೆ ನಡೆಸಲಾಯಿತು. ಈ ಕಾರ್ಯಕ್ರಮದ ಸ್ವಾಗತ ಮತ್ತು ವಂದನಾರ್ಪಣೆಯನ್ನು ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ರೇಖಾ ಅವರು ನಡೆಸಿಕೊಟ್ಟಿರುತ್ತಾರೆ…

ವರದಿ. ರೇಖಾ,ಆರ್, ಲಿಂಗಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend