ರಂಗಯ್ಯನದುರ್ಗ ಬಲದಂಡೆ ಕಾಲುವೆಗೆ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಲು ಗ್ರಾಮಸ್ಥರು ಮನವಿ.!

ರಂಗಯ್ಯನದುರ್ಗ ಬಲದಂಡೆ ಕಾಲುವೆಗೆ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಲು ಗ್ರಾಮಸ್ಥರು ಮನವಿ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಬೊಮ್ಮಲಿಂಗನಹಳ್ಳಿ ಗ್ರಾಮದ ರಂಗಯ್ಯನದುರ್ಗ ಬಲದಂಡೆ ಕಾಲುವೆಗೆ ಸಂಬಂಧಪಟ್ಟ ಜಮೀನ್ದಾರರು ಪರಿಹಾರಕ್ಕೆ ಮಾಧ್ಯಮದ ಮೂಲಕ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಜಮೀನ್ದಾರರಾದ ಗುಂಡಪ್ಪನವರು ಮಾತನಾಡಿ. ರಂಗಯ್ಯನದುರ್ಗ ಜಲಾಶಯ ಯೋಜನೆಯು ಸುಮಾರು ಹತ್ತರಿಂದ ಹನ್ನೆರಡು ಗ್ರಾಮಗಳ ಜಮೀನುಗಳಿಗೆ ವಿವಿಧ ಉದ್ದೇಶಗಳಿಗೆ ನೀರಾವರಿ ಸೌಲಭ್ಯವನ್ನು ನೀಡುವಂತಹ ಬಲದಂಡೆ ನಾಲೆ ಕಾಲುವೆ ಯಾಗಿದೆ. ರಂಗಯ್ಯನದುರ್ಗ ಬಲದಂಡೆ ನಾಲೆಗೆ 1911ರಿಂದ ಇಲ್ಲಿಯವರೆಗೂ ಸುಮಾರು 25ರಿಂದ 30 ಎಕರೆ ಜಮೀನು ಭೂಸ್ವಾಧೀನ ವಾಗಿದ್ದು. ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ರೀತಿಯ ಪರಿಹಾರ ನೀಡಿರುವುದಿಲ್ಲ. ಆದ್ದರಿಂದ ಈಗಲಾದರೂ ಸಂಬಂಧಪಟ್ಟಂತಹ ತಾಲೂಕಿನ ಶಾಸಕರು ಹಾಗೂ ತಾಲೂಕಿನ ದಂಡಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ಅಧಿಕಾರಿಗಳೂ ಈ ಕಡೆ ಗಮನ ಹರಿಸಿ ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ನೀಡಬೇಕಾಗಿ ವಿನಂತಿಸಿದರು. ಈ ಸಂದರ್ಭದಲ್ಲಿ ಕಾಲುವೆಗೆ ಸಂಬಂಧಪಟ್ಟಂತಹ ಜಮೀನ್ದಾರರು ಹಾಗೂ ಗ್ರಾಮಸ್ಥರೂ ಹಾಜರಿದ್ದು ಮನವಿಯನ್ನು ಸಲ್ಲಿಸಿದರು….

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend