01.11.2021 ರಂದು ಬೆಳಿಗ್ಗೆ 9 ರ ಸುಮಾರಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರೊ. ಜ್ಯೋತಿ ಹೊಸೂರು ಸರ್ ಅಸ್ತಂಗತ.
ಬಾಗೆನಾಡಿಣ (ರಾಯಬಾಗ) ಮುಗಳಖೋಡದ ಜೋತ್ಯಪ್ಪ ಹೊಸೂರ ಎಂಬ ಮೂಲ ಹೆಸರು ಹೊಂದಿದ್ದ… ನಂತರ ಜ್ಯೋತಿ ಹೊಸೂರು ಎಂಬ ಕಾವ್ಯನಾಮ ಹೊಂದಿ ಕನ್ನಡ ಸಾರಸತ್ವ ಲೋಕದ ಖ್ಯಾತ ಸಂಶೋಧಕರು.ಇವರು ಶಂಭಾ ಜೋಶಿ ಯವ ರ ಸಂಶೋಧನೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ ಅವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಿದ್ದಾರೆ.ಅದೇ ರೀತಿ ಇವರು ಕೂಡ ಅನೇಕ ಸಂಶೋಧನೆ ಮಾಡಿ ಹಾಲುಮತದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಗ್ಗೆ ಅತ್ಯಂತ ಸ್ಪಷ್ಟ ಮಾಹಿತಿ ಕಲೆಹಾಕಿ ಗ್ರಂಥ ರಚಿಸಿ ನಾಡಿಗೆ ನೀಡಿದವರು. ಚೆನ್ನಮ್ಮ,ಕನದಾಸ, ವಚನ ಸಾಹಿತ್ಯ ದ ಬಗ್ಗೆ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ .ಉತ್ತಮ ವಾಗ್ಮಿ ಹಾಗೂ ವಿಮರ್ಶಕರಾಗಿ,ಲೇಖಕರಾಗಿ,ಕಾಲಗತಿ ಪ್ರಕಾಶನ ದ ಪ್ರಕಾಶಕರಾಗಿ ಇವರು ಅನೇಕ ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಸಂಭ್ರಮ ಪಡುವ ಹಾಗೆ ಮಾಡಿರುವ ಇವರ … ನಾಸ್ತಿಕ..ಎಂಬ ಪುಸ್ತಕ ಬಹಳ ಪ್ರಸಿದ್ಧ. ಜಾನಪದ ಲೋಕದ ಸತ್ವಯುತ ಸಾಹಿತ್ಯವನ್ನು ಅಧ್ಯಯನ ಮಾಡಿ ವಿವಿಧ ರೂಪದಲ್ಲಿ ಉಣಬಡಿಸಿದ ಇವರು…ಜಾನಪದ ವಿದ್ವಾಂಸರೆಂದೆ ನಾಡಿಗೆ ಪ್ರಖ್ಯಾತರಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಬೆಟಗೇರಿ ಕೃಷ್ಣಶರ್ಮ ಸಂಶೋಧಕ ಪ್ರಶಸ್ತಿ ಸಹಿತ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾದ ಇವರು ಸದಾ ನೇರ ಹಾಗೂ ನಿಷ್ಠುರ ಸ್ವಭಾವ ಹೊಂದಿದವರಾಗಿದ್ದರು. ಇಂದು ಕನ್ನಡ ರಾಜ್ಯೋತ್ಸವದ ದಿನದಂದು ಈ ಗಡಿನಾಡಿನ ಸಾಹಿತಿ ಅಸ್ತಂಗತರಾಗಿ ರುವುದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ.
ಅವರ ಆಶಯದಂತೆ ಅವರ ನಿಧನದ ನಂತರ ಅವರ ದೇಹವನ್ನು ಬೈಲಹೊಂಗಲದ ಡಾಕ್ಟರ್ ರಾಮಣ್ಣನವರು ಚಾರಿಟೇಬಲ್ ಟ್ರಸ್ಟ್ ಗೆ ಹಸ್ತಾಂತರ ಮಾಡಲಾಯಿತು …ಸಾವಿನಲ್ಲಿ ಕೂಡ ಸಾರ್ಥಕತೆ ಮೆರೆದ ಸಾಹಿತಿ.
ಶ್ರೀಯುತರು ನನ್ನ ತಂದೆಯ ವಿದ್ಯಾ ಗುರುಗಳು ಹಾಗೆಯ ಅವರ ಮಗ ಡಾಕ್ಟರ್ ಆನಂದ ನನ್ನ ಪ್ರಾಥಮಿಕ ಶಾಲೆಯ ಸಹಪಾಠಿ.ನಾವು 8ನೆ ತರಗತಿಯ ವಿದ್ಯಾರ್ಥಿ ಇದ್ದಾಗ…”ಬಾರದಿದ್ದ ಮಳೆ ಬಂದಾಗ”ಎಂಬ ಕನ್ನಡ ಪಾಠ ಓದುವಾಗ ತುಂಬಾ ಹೆಮ್ಮೆ ಅನಿಸುತಿತ್ತು..
ಶ್ರೀಯುತರ ಆತ್ಮ ಚಿರಾಯುವಾಗಲಿ ಎಂದು ಪ್ರಾರ್ಥಿಸುತ್ತಾ ಮತ್ತೆ ಈ ನಾಡಿನಲ್ಲಿ ಅವರು ಜನ್ಮತಾಳಿ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ….

ವರದಿ.ಮಹಾಲಿಂಗ ಗಗ್ಗರಿ, ಬೆಳಗಾವಿ ಜಿಲ್ಲಾವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
