ಮೊಳಕಾಲ್ಮೂರು: ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಬಿ.ಜಿ.ಗಾದಯ್ಯ ಅಮಾನತಿಗೆ ಒತ್ತಾಯ.!

ಮೊಳಕಾಲ್ಮೂರು: ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಬಿ.ಜಿ.ಗಾದಯ್ಯ ಅಮಾನತಿಗೆ ಒತ್ತಾಯ.!

 

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದಲ್ಲಿ (ಅಕ್ಟೋಬರ್-27) ಇಂದು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ
ಬಿ.ಜಿ.ಗಾದಯ್ಯ ಅಮಾನತಿಗೆ ಒತ್ತಾಯ. ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ ಹಾಗೂ ಸಿ.ಪಿ.ಐ, ಡಿ.ಎಸ್.ಎಸ್ ಸಂಘಟನೆ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಲಾಯಿತು. ಸಿ.ಪಿ.ಐ ಪ್ರಧಾನ ಕಾರ್ಯದರ್ಶಿ ಜಾಫರ್ ಷರೀಫ್ ಮಾತನಾಡಿ ಮೊಳಕಾಲ್ಮುರು ತಾಲ್ಲೂಕು ಸತತವಾಗಿ ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ತಾಲೂಕಿನಲ್ಲಿ ಮುಕ್ಕಾಲು ಭಾಗದ್ದು ಜನರು ಹೊಟ್ಟೆಪಾಡಿಗಾಗಿ ದುಡಿಯಲು ಗುಳೆ ಹೋಗುವ ಪದ್ಧತಿ ಈಗಲೂ ಇದೆ. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ತಮ್ಮ ಬಡತನದ ಮಧ್ಯೆಯೂ ವಿದ್ಯಾರ್ಥಿನಿಲಯಗಳನ್ನು ಅವಲಬಿಸಿ ಸರ್ಕಾರಿ ಕಾಲೇಜಿಗೆ ಸೇರುವುದು ವಾಡಿಕೆಯಾಗಿದೆ.

ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದ್ದರೂ ವಿದ್ಯಾರ್ಥಿಗಳು ಸಹಿಸಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿಜ್ಞಾನ (PCMB) ವಿಷಯಕ್ಕೆ ಬಂದಾಗ ಬಹಳ ಕಷ್ಟಕರವಾದ ವಿಷಯವೆಂದರೆ ರಸಾಯನಶಾಸ್ತ್ರ ವಿಷಯ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯವೇ, ಇಂತಹ ವಿಷಯದ ಬಗ್ಗೆ ಬೋಧನೆ ಮಾಡುವ ಉಪನ್ಯಾಸಕನೇ ಇಲ್ಲದಿದ್ದರೆ ವಿದ್ಯಾರ್ಥಿಗಳು ತೇರ್ಗಡೆ ಆಗುವುದು ಹೇಗೆ, ಮತ್ತು ಮುಂದಿನ ವಿದ್ಯಾಭ್ಯಾಸಕ್ಕೆ ಹೋಗುವುದು ಹೇಗೆ ಎಂಬುದರ ಬಗ್ಗೆ ವಿದ್ಯಾರ್ಥಿಗಳು ತಮ್ಮ ನೋವನ್ನು ಹೊರಹಾಕುತ್ತಿದ್ದಾರೆ. ಮೊಳಕಾಲ್ಮುರು ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಮಾನಸಿಕ ಖಿನ್ನತೆಯ ರಸಾಯನ ಶಾಸ್ತ್ರ ವಿಷಯದ ಉಪನ್ಯಾಸಕ ಬಿ.ಜಿ.ಗಾದಯ್ಯನವರಿಗೆ ವಿದ್ಯಾರ್ಥಿಗಳು ರಸಾಯನ ಶಾಸ್ತ್ರದ ಪ್ರಾಯೋಗಿಕ (ಪ್ರಾಕ್ಟಿಕಲ್) ವಿಷಯಕ್ಕೆ ತರಗತಿ ತೆಗೆದುಕೊಳ್ಳಲು ಕರೆದರೆ ವಿದ್ಯಾರ್ಥಿಗಳಿಗೆ ನಾನು ಯಾವುದೇ ತರಗತಿ ತೆಗೆದುಕೊಳ್ಳುವುದಿಲ್ಲ. ಚಿತ್ರದುರ್ಗದ ಡಿಡಿ ಅವರಿಗೆ ಹೇಳಿ ಅಸಿಡ್ ಹಾಕುತ್ತೇನೆ, ಇಲ್ಲವೇ ನನ್ನ ವಿರುದ್ಧ ಸೈಕ್ ಮಾಡಿ ಹೋಗಿ ಎಂದು ಏರು ಧ್ವನಿಯಲ್ಲಿ ಹೇಳಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿರುತ್ತಾರೆ. ಈ ಹೇಳಿಕೆಯ ವಿಡಿಯೋ ತುಣುಕು ವಿದ್ಯಾರ್ಥಿಗಳ ಪೋಷಕರಿಗೆ ಆತಂಕ ತಂದಿದ್ದು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಉಪನ್ಯಾಸಕರು ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಯಾವುದೇ ತರಗತಿ ತೆಗೆದುಕೊಂಡಿರುವುದಿಲ್ಲ. ಈತ ಈ ಹಿಂದೆ ರಜೆ ಪಡೆಯಲು ನಾನು ಮಾನಸಿಕ ಅಸ್ವಸ್ತನಾಗಿದ್ದು ಚಿಕಿತ್ಸೆಯ ದೃಷ್ಟಿಯಿಂದ ಪಡೆದಿರುತ್ತಾನೆ.

ಎರಡು ವರ್ಷಗಳ ಹಿಂದೆ ರಸ್ತೆಗಳಲ್ಲಿ ಭಿಕ್ಷೆ ಬೇಡುವ ಫೋಟೋಗಳು ಚಳ್ಳಕೆರೆ ಪಟ್ಟಣದಲ್ಲಿ ಹರಿದಾಡುತ್ತಿದ್ದವು. ಇಂತಹ ವಿಜ್ಞಾನ ವಿಷಯಕ್ಕೆ ಬಂದಾಗ ಬಹಳ ಕಷ್ಟಕರವಾದ ವಿಷಯವೆಂದರೆ ರಸಾಯನಶಾಸ್ತ್ರ ವಿಷಯ ಎಂಬುವುದು ಎಲ್ಲರಿಗೂ ಗೊತ್ತಿರುವೆ ವಿಷಯವೇ, ವಿಷಯದ ಬಗ್ಗೆ ಬೋಧನೆ ಮಾಡುವ ಉಪನ್ಯಾಸಕನೇ ಇಲ್ಲದಿದ್ದರೆ ವಿದ್ಯಾರ್ಥಿಗಳು ತೇರ್ಗಡೆ ಆಗುವುದು ಹೇಗೆ, ಮತ್ತು ಮುಂದಿನ ವಿದ್ಯಾಭ್ಯಾಸಕ್ಕೆ ಹೋಗುವುದು ಹೇಗೆ ಎಂಬುದರ ಬಗ್ಗೆ ವಿದ್ಯಾರ್ಥಿಗಳು ತಮ್ಮ ನೋವನ್ನು ಹೊರಹಾಕುತ್ತಿದ್ದಾರೆ. ಈಗಲಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮಕೈಗೊಂಡು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಟಿ ಸುರೇಶ್ ಕುಮಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಪ್ರತಿಭಟನೆಯಲ್ಲಿ ಡಿ.ಎಸ್.ಎಸ್. ನ ಕೊಂಡಾಪುರ ಪರಮೇಶ್ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಬೆಳಗಲ್ ಈಶ್ವರಯ್ಯ, ಮರ್ಲಹಳ್ಳಿ ರವಿಕುಮಾರ್, ವಿದ್ಯಾರ್ಥಿಗಳಾದ ಯೋಗಾನಂದ, ಜಗದೀಶ ಎಂ.ಆರ್., ಉದಯ್ ಪವನ್ ಕಲ್ಯಾಣ್, ಸುದೀಪ್, ಹರ್ಷ, ಚಂದ್ರು, ಪವಿತ್ರ, ಸುಧಾ, ರಾಮು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಎಲ್ಲಾ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು….

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend