ಸಿಂಧನೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ದಲಿತ ಮಹಿಳೆಯನ್ನು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ಒಳಪಡಿಸಬೇಕೆಂದು ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ತಹಶಿಲ್ದಾರ್ ಮುಖಾಂತರ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ್ ಗೋರೆಬಾಳ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಸಾಲು ಸಾಲು ನಡೆಯುತ್ತಿವೆ. ದುಷ್ಕೃತ್ಯಕ್ಕೆ ಕಾರಣರಾದವರನ್ನು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕಾದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಇಂತಹ ಘಟನೆಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ. ಕಳೆದ ಎರಡು ದಿನದ ಹಿಂದೆ ರೈತರ ಮೇಲೆ ವಾಹನ ಚಲಾಯಿಸಿ ಹಾಡಹಗಲೇ ರೈತರನ್ನು ಕೊಲೆ ಮಾಡಲಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ದಲಿತರ ಮೇಲಿನ ದೌರ್ಜನ್ಯ, ಕೊಲೆ,ಅತ್ಯಾಚಾರ ಘಟನೆಗಳು ಮಿತಿಮೀರಿದೆ. ಯಾದಗಿರಿ ಜಿಲ್ಲೆಯ ಎರಡು ಪ್ರತ್ಯೇಕ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಕೊಲೆ ಘಟನೆ, ಕೊಪ್ಪಳ ಜಿಲ್ಲೆಯ ಮಿಯಾಪುರದಲ್ಲಿ ದಲಿತ ಬಾಲಕ ದೇವಸ್ಥಾನ ಪ್ರವೇಶಿಸಿದಕ್ಕೆ ಪೋಷಕರಿಗೆ ದಂಡ ಹಾಕಿದ್ದು, ಕಾರಟಿಗಿ ಸಮೀಪದ ನಾಗನಕಲ್ ಗ್ರಾಮದ ಗುಡಿಯೊಳಗೆ ಹೋಗಿದ್ದಕ್ಕೆ ದಂಡವಿಧಿಸಿದ ಪ್ರಕರಣ , ಅನ್ಯಕೋಮಿನ ಯುವತಿಯನ್ನು ಪ್ರೇಮಿಸಿದ ಕಾರಣಕ್ಕೆ ಕನಕಗಿರಿ ತಾಲೂಕಿನ ಬರಗೂರು ಗ್ರಾಮದ ದಲಿತ ಯುವಕ ದಾನಪ್ಪನ ಬರ್ಬರ ಹತ್ಯೆ,ಕಕ್ಕರಗೋಳ ಗ್ರಾಮದ ಯುವಕ ರಾಘವೇಂದ್ರ, ಸಿಂಧನೂರು ತಾಲೂಕಿನ ಕುನ್ನಟಗಿ ಗ್ರಾಮದ ಯಮನಪ್ಪ ನ ಕೊಲೆ ಹೀಗೆ ಸಾಲು ಸಾಲು ದೌರ್ಜನ್ಯ ಘಟನೆಗಳು ನಡೆದಿವೆ ಈ ದುಷ್ಕೃತ್ಯ ನಡೆಸಿದವರು ನಾಲ್ಕಾರು ದಿನದಲ್ಲಿ ಜೈಲಿನಿಂದ ಹೊರಬಂದು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ.ಇದು ದಲಿತ ದ್ರೋಹಿ ತನಕ್ಕೆ ಸಾಕ್ಷಿಯಾಗಿದೆ ಎಂದು ನಾಗರಾಜ ಪೂಜಾರಿ ಮಾತನಾಡಿದರು.
ಮಹಿಳೆ ಮನೆಗೆ ನುಗ್ಗಿ ಅತ್ಯಾಚಾರ ಮಾಡಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ದಲಿತ ಮಹಿಳೆಯ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು, ದಲಿತ ಮಹಿಳೆ ಬರ್ಬರ ಹತ್ಯೆ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು, ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಬೇಕು , ಇಂತಹ ಘಟನೆಗಳು ಮರುಕಳಿಸದಂತೆ ತತಕ್ಷಣದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಿಎಚ್ ಕಂಬಳಿ ಮಹದೇವಪ್ಪ ದುಮತಿ ಗುರುರಾಜ್ ಮುಕುಂದ ಅಶೋಕ ನಂಜಲದಿನ್ನಿ, ನಾಗರಾಜ್ ಸಾಸಲಮರಿ, ಸಂಗಮೇಶ್ ಮುಳ್ಳೂರು, ಚಿಟ್ಟಿಬಾಬು ಬೂದಿವಾಳ ಕ್ಯಾಂಪ್, ಬಸವರಾಜ್ ಬೆಳಗುರ್ಕಿ, ನಾಗರಾಜ್ ಹೆಡಿಬಾಳ್, ರಾಮಣ್ಣ ಸಾಸಲಮರಿ,ಬಸವರಾಜ , ನೂರಪ್ಪ ಸುಕಾಲಪೇಟೆ, ನಾಗರಾಜ್ ಇನ್ನೂ ದಲಿತಪರ ಸಂಘಟನೆಯ ಪದಾಧಿಕಾರಿಗಳು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
