ಸಿಂಧನೂರು :ಜೆಡಿಎಸ್ ಪಕ್ಷ ಮುಖಂಡರನ್ನು ತಯಾರು ಮಾಡುವ ಕಾರ್ಖಾನೆಯಿದ್ದಂತೆ…!!!

ಸಿಂಧನೂರು :ಜೆಡಿಎಸ್ ಪಕ್ಷ ಮುಖಂಡರನ್ನು ತಯಾರು ಮಾಡುವ ಕಾರ್ಖಾನೆಯಿದ್ದಂತೆ.

ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಹೆಗಲಿಗೆ ಶಾಲೂ ಹಾಕಿ ಪಕ್ಷದ ದ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ನಂತರ ಮಾತನಾಡಿದ ವೆಂಕಟರಾವ್ ನಾಡಗೌಡ ಇಂದಿನಿಂದಲೇ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ತಮ್ಮ ವಾರ್ಡಿನಲ್ಲಿ ಪಕ್ಷದ ಸದಸ್ಯತ್ವ ಮಾಡಿಸಿರಿ, ಜೆಡಿಎಸ್ ಪಕ್ಷ ಮುಖಂಡರನ್ನು ತಯಾರು ಮಾಡುವ ಕಾರ್ಖಾನೆಯಿಂದಂತೆ, ನಮ್ಮ ಪಕ್ಷದಲ್ಲಿ ಬೆಳೆದು ಹೋದವರೆಲ್ಲ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಜೆಡಿಎಸ್ ಪಕ್ಷದ ಯುವ ಕಾರ್ಯಾಲಯದಲ್ಲಿ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ವೆಂಕಟರಾವ್ ನಾಡಗೌಡ ಅವರ ಉಪಸ್ಥಿತಿಯಲ್ಲಿ ಲಕ್ಷ್ಮಣ ಭೋವಿ ಅವರ ನೇತೃತ್ವದಲ್ಲಿ ಮಹ್ಮದ್ ಅಲಿ ಅವರು ನೂರಾರು ಕಾರ್ಯಕರ್ತರು ಜೊತೆಗೂಡಿ ಇಂದು ಕಾಂಗ್ರೆಸ್ ಪಕ್ಷ ತೊರೆದು ವೆಂಕಟರಾವ್ ನಾಡಗೌಡ್ರು ಮಾಡಿದ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

ಪಕ್ಷ ಸೇರ್ಪಡೆಗೊಂಡು ಮಾತನಾಡಿದ ಮಹ್ಮದ್ ಅಲಿ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಶುರುವಾಗಿದೆ. ಸಾಮನ್ಯ ಕಾರ್ಯಕರ್ತರಿಗೆ ಬೆಲೆಯಿಲ್ಲದಂತಾಗಿದೆ. ಅದರಿಂದ ನಾಡಗೌಡರ ಜನಪರ ಕಾಳಜಿ, ಅಭಿವೃದ್ದಿ ಕೆಲಸ ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷ ಸೇರಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಬಸವರಾಜ ನಾಡಗೌಡ ತಾಲೂಕು ಅಧ್ಯಕ್ಷರು, ಹನುಮೇಶ ಕುರುಕುಂದಿ ತಾಲೂಕು ಯುವ ಘಟಕ ಅಧ್ಯಕ್ಷರು, ತಾಲೂಕು ಮಟ್ಟದ ಎಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು….

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend