ಸಿಂಧನೂರು :ಭೂತಲದಿನ್ನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲಾಪೂರು ಗ್ರಾಮದಲ್ಲಿ ಲಸಿಕೆ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ಕಾರ್ಯಪ್ರವೃತ್ತರಾದ ಆಶಾ, ಮತ್ತು ಆಂಗನವಾಡಿ ಕಾರ್ಯಕರ್ತರು, ಸಹಾಯಕಿಯರು.
ಗ್ರಾಮೀಣ ಭಾಗದ ಜನರು ಹೊಲಗಳಲ್ಲಿ ಕೆಲಸ ಇರುವುದರಿಂದ ಬೆಳಗ್ಗೆನೆ ಬೇಗ ಹೊಲಕ್ಕೆ ಹೋಗುವುದರಿಂದ ಗ್ರಾಮದಲ್ಲಿ ಜನರು ಲಸಿಕೆ ಪಡೆಯಲು ಬರುತ್ತಿಲ್ಲ ಎಂದು ಮನಗಂಡು ಆರೋಗ್ಯ ಅದಿಕಾರಿಗಳು, ಪಂಚಾಯ್ತಿ ಸಿಬ್ಬದ್ದಿಗಳು,ಆಶಾ ಕಾರ್ಯಕರ್ತರು,ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು,ಪಂಚಾಯತ ಸದಸ್ಯರು ಜನ ಹೊಲಗಳಿಗೆ ಹೋಗುವ ಮೊದಲೆ ಗ್ರಾಮಕ್ಕೆ ಬಂದು, ಹೊಲಗಳಿಗೆ ಹೋಗುವ ದಾರಿಯಲ್ಲಿ ಜನರನ್ನು ತಡೆದು ಕೊವಿಡ್ ಲಸಿಕೆ ಮಹತ್ವ ತಿಳಿಸಿ, ಜನರಿಗೆ ಮನವರಿಕೆ ಮಾಡಿದಾಗ ಮಾತ್ರ ಹೆಚ್ಚಿನ ಆಸಕ್ತಿ ವಹಿಸಿ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ.
ಕೊರೊನಾ ಲಸಿಕೆ ಹಾಕಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಆದರೂ ವ್ಯಾಕ್ಸಿನ್ ಪಡೆಯಲು ನಿರಾಕರಣೆ ಮಾಡುತ್ತಿದ್ದಾರೆ. ಇವರ ಕಾರ್ಯಕ್ಕೆ ಶ್ಲಾಘನೀಯ….

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
