ಸಹಕಾರ ಕೇಂದ್ರ ಬ್ಯಾಂಕ ವತಿಯಿಂದ ರೈತರಿಗೆ ಬಡ್ಡಿ ರಹಿತ ಸಾಲ ವಿತರಣೆ.
ಯಡ್ರಾಮಿ:ತಾಲೂಕಿನ ಸಾಥಖೇಡ ಗ್ರಾಮದಲ್ಲಿ ಇಂದು ಕಲಬುರಗಿ,ಯಾದಗೀರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ,ಕಲಬುರಗಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕೇಂದ್ರ ನೆಲೋಗಿ,2021-22ನೇ ಸಾಲಿನ ಸಹಕಾರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹೊಸ ರೈತರಿಗೆ ಬಡ್ಡಿ ರಹಿತ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಜೇವರ್ಗಿ ಜನಪ್ರಿಯ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಸಾಂಕೇತಿಕವಾಗಿ ರೈತರಿಗೆ ಸಾಲದ ಚಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸಾಥಖೇಡ ಶ್ರೀಗಳು,ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ನಿಂಗಣ್ಣ ದೊಡಮನಿ,ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಧರ್ಮಣ್ಣ ದೊಡಮನಿ,ಬಿಜೆಪಿ ಹಿರಿಯರಾದ ಬಸವರಾಜ ಪಾಟೀಲ ಕೂಕನೂರ, ಭಗವಂತರಾಯ ಬೆಣ್ಣೂರ್, ಗ್ರಾಪಂ ಅಧ್ಯಕ್ಷರು,ಸಂಘದ ಅಧ್ಯಕ್ಷರು,ಸದಸ್ಯರು,ರೈತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು…

ವರದಿ. ಬಸವರಾಜ್ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
