ಸಿಂಧನೂರು : ಹಿಂದಿ ದಿವಸ್ ವಿರುದ್ಧ ಸಿಡಿದೆದ್ದ ಕರ್ನಾಟಕ ರಕ್ಷಣಾ ವೇದಿಕೆ ..! ಹಿಂದಿ ಹೇರಿಕೆ ಖಂಡಿಸಿ ಆಕ್ರೋಶ..!

ಸಿಂಧನೂರು : ಹಿಂದಿ ದಿವಸ್ ವಿರುದ್ಧ ಸಿಡಿದೆದ್ದ ಕರ್ನಾಟಕ ರಕ್ಷಣಾ ವೇದಿಕೆ ..! ಹಿಂದಿ ಹೇರಿಕೆ ಖಂಡಿಸಿ ಆಕ್ರೋಶ..!

ಕೇಂದ್ರ ಸರ್ಕಾರ ಅನ್ಯ ಭಾಷಿಕರ ಮೇಲೆ ಹಿಂದಿ ದಿವಸ, ಹಿಂದಿ ಮಾಸದ ಹೆಸರಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಕಾರ್ಯಕರ್ತರು ಪ್ರವಾಸಿ ಮಂದಿರದಿಂದ ಶಾಸಕರ ಕಾರ್ಯಲಯದವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದರು. ನಂತರ ಮನವಿ ಪತ್ರ ಸಲ್ಲಿಸಿದರು.

ರಾಷ್ಟ್ರದ ಎಲ್ಲಾ ರಾಜ್ಯಗಳ ಪ್ರಾದೇಶಿಕ ಭಾಷಿಗರ ತೆರಿಗೆ ಹಣವನ್ನು ಪಡೆಯುವ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ವೈಭವಿ ಕರಿಸುತ್ತಿರುವುದು ಸರಿಯಲ್ಲ, ದೇಶದ ಇತರ ಭಾಷೆಗಳ ಭಾಷಿಕರಿಗೆ ಕಲಿಕೆ, ಪ್ರವೇಶ ಪರೀಕ್ಷೆಗಳು, ಉದ್ಯೋಗ ನೇಮಕಾತಿ, ಸಾರ್ವಜನಿಕ ಸೇವೆಗಳಲ್ಲಿ ಬಹಳ ಅನಾನುಕೂಲವಾಗಿರುತ್ತದೆ.ಬ್ಯಾಂಕಿಂಗ್ ನೇಮಕಾತಿಯಲ್ಲಿ ಕನ್ನಡಿಗರಿಗೆ ಇಂಥ ತಾರತಮ್ಯ ನೀತಿಗಳಿಂದಾದ ಅನ್ಯಾಯಗಳನ್ನು ಅಂಕಿ ಅಂಶಗಳೇ ಸಾರುತ್ತಲಿವೆ. ಇಂತಹ ಉಳುಕಿನ ನೀತಿಯ ಕಾರಣದಿಂದಲೇ ಬ್ಯಾಂಕುಗಳಲ್ಲಿ ಕನ್ನಡ ಬಾರದ ಸಿಬ್ಬಂದಿಗಳನ್ನು ಕಾಣುವಂತಾಗಿದೆ ಮತ್ತು ಗ್ರಾಹಕರಿಗೆ ಅತೀವ ಸಮಸ್ಯೆಗಳು ಉಂಟಾಗಿದೆ ಎಂದು ಪ್ರತಿಭಟನೆ ಕಾರ್ಯನಿರತ ಹೆಚ್. ಗಂಗಣ್ಣ ಡಿಶ್ ತಾಲೂಕು ಅಧ್ಯಕ್ಷರು ಮಾತನಾಡಿದರು.

ಈ ಸಂದರ್ಭದಲ್ಲಿ ಲಕ್ಷ್ಮಣ ಭೋವಿ ಜಿಲ್ಲಾ ಕಾರ್ಯದರ್ಶಿ, ಕಾಳಪ್ಪ ಗೌರವಾಧ್ಯಕ್ಷರು, ಬಾಷಾಸಾಬ್ ಉಪಾಧ್ಯಕ್ಷರು, ಸುರೇಶ್ ನಗರಾಧ್ಯಕ್ಷರು, ರಂಜಾನ್ ಸಾಬ್ ಸಂಚಾಲಕರು, ಶರಣಪ್ಪ ಮಲ್ಲಾಪುರ ಪ್ರಧಾನ ಕಾರ್ಯದರ್ಶಿ , ರವಿ ಕುನ್ನಟಗಿ, ಶ್ರೀಧರಾಚಾರ್ಯ, ಶರಣಪ್ಪ ಕುನ್ನಟಗಿ, ಸುರೇಶ ಡಿಶ್ , ರಾಜಸಾಬ್,ಪರಶುರಾಮ್ ಭೋವಿ, ಲಿಂಗಪ್ಪ ಜಂಗಮರಹಟ್ಟಿ, ಬುದೇಶ್ , ರುದ್ರಗೌಡ , ಬಸವರಾಜ್ , ಭೀಮೇಶ್, ಚಂದ್ರಹಾಸ್ , ನಾಗರಾಜ್, ಅಶೋಕ್ ಇನ್ನೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend