ಮೊಳಕಾಲ್ಮೂರು: ‘ಹಿಂದಿ’ ದಿವಸ ಆಚರಣೆ ಈ ಕೂಡಲೇ ನಿಲ್ಲಿಸಬೇಕು; ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದಲ್ಲಿ ಸೆಪ್ಟೆಂಬರ್ 14 ಇಂದು “ಹಿಂದಿ” ದಿವಸ ಆಚರಣೆ ವಿರೋಧಿಸಿ ಹಾಗೂ ಬ್ಯಾಂಕುಗಳಲ್ಲಿ ಹಿಂದಿ ದಿವಸ ನಿರ್ಬಂಧ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರ ಬಣದ ವತಿಯಿಂದ ಎಸ್.ಬಿ.ಐ ಬ್ಯಾಂಕ್ ವ್ಯವಸ್ಥಾಪಕರಿಗೆ ಕರವೇ ಕಾರ್ಯಕರ್ತರು ಮನವಿ ಪತ್ರ ನೀಡಿದರು. ಈ ವೇಳೆ ಮುಖಂಡರಾದ ಕರುನಾಡ ಜಿಯಾಉಲ್ಲಾ ಮಾತನಾಡಿ ಹಿಂದಿ ದಿವಸ, ಹಿಂದೀ ಸಪ್ತಾಹ, ಹಿಂದಿ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು. ಪ್ರತಿವರ್ಷ ಸೆಪ್ಟೆಂಬರ್ 14ರ ಹಿಂದಿ ದಿವಸ್ ದಿನಾಚರಣೆ ಕೊನೆಯಾಗಬೇಕು. ಸಂವಿಧಾನಕ್ಕೆ ತಿದ್ದುಪಡಿ ತಂದು ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ 22 ಭಾಷೆಗಳನ್ನು ಆಡಳಿತ ಭಾಷೆಗಳನ್ನು ಮಾಡಬೇಕು. ಹಿಂದಿ ಭಾಷೆಗೆ ಕಡಿವಾಣ ಹಾಕಬೇಕು ಅಲ್ಲದೆ ಬ್ಯಾಂಕುಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ನಾಗೇಂದ್ರಪ್ಪ ಕಾರ್ಯಕರ್ತರಾದ ಪ್ರಶಾಂತ್ ಕಲ್ಲೇಶ ಮನೋಜ್ ಚೌಡಪ್ಪ ಮಲೆನಾಡ ಮಂಜುನಾಥ ಸೇರಿದಂತೆ ಹಲವರು ಪಾಲ್ಗೊಂಡಿದ್ದರು…

ವರದಿ.ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend