ಸಿಂಧನೂರು :ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷ ತೊರೆದು ಬಹುಜನ ಸಮಾಜ ಪಕ್ಷ ಸೇರ್ಪಡೆ.
ಜಿಲ್ಲಾ ಸಮಿತಿ ರಾಯಚೂರು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡಿದ್ದು,ಇಂದು ಸಿಂಧನೂರು ಪ್ರವಾಸಿ ಮಂದಿರದಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಹುಲುಗಪ್ಪ ಮಲ್ಕಾಪುರು ನೇತೃತ್ವದಲ್ಲಿ ತಾಲೂಕು ಸಮಿತಿಯ ಸಭೆಯನ್ನು ಕರೆಯಲಾಗಿದ್ದು,ಆ ಸಭೆಯಲ್ಲಿ ಮುಖ್ಯಅತಿಥಿಗಳಾಗಿ ಜಿಲ್ಲಾ ಅಧ್ಯಕ್ಷರಾದ ಹನುಮಂತ್ರಾಯ ಕಪಗಲ್,ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಶ್ಯಾಮಸುಂದರ್ ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ನಲ್ಲಿರುವ ಅಂಬೇಡ್ಕರ್ ರವರ ಪುಥಳಿಗೆ ಮಾಲಾರ್ಪಣೆ ಮಾಡಿ ಪ್ರವಾಸಿ ಮಂದಿರಕ್ಕೆ ಪಕ್ಷದ ಕಾರ್ಯಕರ್ತರು ಬರಮಾಡಿಕೊಂಡರು. ನಂತರ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಗುಚ್ಛ ಅರ್ಪಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಹನುಮಂತಪ್ಪ ಕಪಗಲ್ ಇವರು ಸಿಂಧನೂರಿನ ಏಳುರಾಗಿಕ್ಯಾಂಪಿನ 31 ನೇ ವಾರ್ಡ್ ನಲ್ಲಿ ವಾಸಿಸುವ ಜನರಿಗೆ ಅಗತ್ಯವಾದ ರಸ್ತೆ, ಶಾಲೆಗಳ ಮೂಲಭೂತ ಸೌಕರ್ಯ, ಕುಡಿಯುವ ನೀರು, ನೀಡಲು ನಗರಸಭೆ ಆಡಳಿತ ಮಂಡಳಿಯ ಸಂಪೂರ್ಣ ವಿಫಲವಾಗಿದ್ದು, ಮುಂದಿನ ದಿನಗಳಲ್ಲಿ ನಗರಸಭೆಯ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು .
ನಂತರ ಮಾತನಾಡಿದ ಶ್ಯಾಮಸುಂದರ್ ಬಿಜೆಪಿ ಪಕ್ಷದಿಂದ ಜನ ಬೇಸತ್ತು ಹೋಗಿದ್ದಾರೆ,ಪೆಟ್ರೋಲ್, ಡೀಸೆಲ್, ದಿನಬಳಕೆ ವಸ್ತುಗಳು ಗಗನಕೇರಿವೆ. ಪಕ್ಷದ ಕಾರ್ಯಕರ್ತರು ಇದನ್ನೆಲ್ಲ ಮತದಾರರಿಗೆ ತಿಳಿಸಿ ಬೂತಮಟ್ಟದಿಂದ ಪಕ್ಷ ಸಂಘಟನೆ ಮಾಡಿ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಎಲ್ಲಾ ಕ್ಷೇತ್ರಗಳಿಗೆ ಪಕ್ಷದ ಕಡೆಯಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದರು.
ರವಿಚಂದ್ರ ಮಲ್ಕಾಪೂರು, ಇಮಾಮ್ ಸಾಬ್ ಸಾಲಗುಂದ, ತಿಮ್ಮಣ್ಣ ಮಲ್ಕಾಪುರ್, ಮೌಲಾಲಿ ಮಲ್ಕಾಪುರ್, ಹನುಮಂತ ಬೂದಿವಾಳ ಕ್ಯಾಂಪ್, ಯಂಕಪ್ಪ ಮಲ್ಕಾಪುರ ಕ್ಯಾಂಪ್, ಬುಡ್ಡವಲಿ ಮಲ್ಕಾಪುರ್ ಕ್ಯಾಂಪ್, ಅಯ್ಯಪ್ಪ ಕಂಭೇರ್ ಮಲ್ಕಾಪುರ ಕ್ಯಾಂಪ್, ಜವಳಗೇರಾ ಮೌನೇಶ್, ಪಕ್ಷದ ದ್ವಜ ನೀಡುವುದರ ಮೂಲಕ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಈ ಸಂದರ್ಭದಲ್ಲಿ ಸಿಂಧನೂರು ನಗರ ಘಟಕ ಅಧ್ಯಕ್ಷರಾದ ಚನ್ನಪ್ಪ , ಮಾನ್ವಿ ತಾಲೂಕಿನ ಕಾರ್ಯದರ್ಶಿಗಳಾದ ಸಂತೋಷ್, ದೊಡ್ಡಬಸವ ಬೂದಿವಾಳ, ಸಂತೋಷ ಜವಳಗೇರಾ, ಸಂತೋಷ ಏಳುರಾಗಿಕ್ಯಾಂಪ್, ಇನ್ನು ಅನೇಕ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು….

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
