ಸಿಂಧನೂರು :ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ…!!!

ಸಿಂಧನೂರು :ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ.

ರಾಗಲಪರ್ವಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎನ್. ಶಿವನಗೌಡ ಗೊರೆಬಾಳ ರವರು ಬಿಜೆಪಿ ಕಾರ್ಯಾಲಯದಲ್ಲಿ ತ್ರಿಚಕ್ರ ವಾಹನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಂಗವಿಕಲರು ಎಲ್ಲರಂತೆ ಜೀವನದ ಪಯಣ ಮುನ್ನಡೆಸ ಬೇಕು ಎಂಬ ಉದ್ದೇಶವನ್ನಿರಿಸಿ ಅವರಿಗಾಗಿ ವಿಶೇಷ ವಾಹನಗಳನ್ನು ನೀಡಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಿವನಗೌಡ ಗೊರೆಬಾಳ ಹೇಳಿದರು. ಜಿಲ್ಲಾ ಪಂಚಾಯತ್‌ ವತಿಯಿಂದ 2020-21ನೇ ಸಾಲಿನ 5%ಅನುದಾನದಲ್ಲಿ ಅರ್ಹ ಫಲಾನುಭವಿಗಳಾದ 4 ಜನ ಅಂಗವಿಕಲ‌ರಿಗೆ ವಿಶೇಷ ದ್ವಿಚಕ್ರ ವಾಹನವನ್ನು ವಿತರಿಸಿ ಅವರು ಮಾತನಾಡಿದರು. ಸಾಮಾನ್ಯ ನಾಗರಿಕರಂತೆ ಅವರೂ ಬದುಕುವುದರೊಂದಿಗೆ ತಮ್ಮ ಕುಟುಂಬವನ್ನು ಮುನ್ನಡೆಸಲು ಈ ವಾಹನವು ಸಹಕಾರಿ ಯಾಗಲಿ ಎಂದು ಅವರು ಹಾರೈಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಕೊಲ್ಲಾ ಶೇಷಗಿರಿರಾವ್, ಅಮರೇಗೌಡ ವಿರುಪಾಪುರ, ಮಧ್ವರಾಜ ಆಚಾರ್ಯ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಹನುಮೇಶ್ ಸಾಲಗುಂದ, ನಗರ ಅಧ್ಯಕ್ಷರಾದ ಪ್ರೇಮಾ ಸಿದ್ಧಾಂತಿಮಠ, ಶೈಲಜಾ ಷಡಕ್ಷರಪ್ಪ, ಪರಮೇಶಪ್ಪ ಆದಿಮನಿ, ಲಿಂಗರಾಜ ಹಲಗಿ, ಗೌತಮ್ ಮೆಹತಾ ಮುಂತಾದವರು ಉಪಸ್ಥಿತರಿದ್ದರು….

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend