ತಿಪ್ಪೆ ಸೇರಿದ 100 ಚೀಲ ಈರುಳ್ಳಿ ಕಟಾವು ಮಾಡಿ ಸಂಗ್ರಹಿಸಿದ್ದ ಗಡ್ಡೆಗೆ ಕೊಳೆ ರೋಗ…!!!

ತಿಪ್ಪೆ ಸೇರಿದ 100 ಚೀಲ ಈರುಳ್ಳಿ
ಕಟಾವು ಮಾಡಿ ಸಂಗ್ರಹಿಸಿದ್ದ ಗಡ್ಡೆಗೆ ಕೊಳೆ ರೋಗ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಬಯಲು ತುಂಬರಗುದ್ದಿ ಗ್ರಾಮದಲ್ಲಿ ಈರುಳ್ಳಿ ಬೆಳೆಗೆ ಕೊಳೆ ರೋಗ ಬಂದಿರುವುದರಿಂದ ನೂರಾರು ಕ್ವಿಂಟ ಲ್‌ ಉಳ್ಳಾಗಡ್ಡಿಯನ್ನು ರೈತರು ತಿಪ್ಪೆಗೆ ಸುರಿಯುತ್ತಿದ್ದಾರೆ.

ಈರುಳ್ಳಿ ಬೆಳೆಗೆ ಶೀಲಿಂಧ್ರಕಾರಕ ಕೊಳೆರೋಗ ಕಾಣಿಸಿಕೊಂಡಿದೆ. ಕೆಲ ರೈತರು ಬೆಳೆದ ಈರುಳ್ಳಿ ನೆಲದಲ್ಲೇ ಗಡ್ಡೆ ಕೊಳೆತ್ತಿದೆ. ಮತ್ತೆ ಕೆಲ ರೈತರ ಬೆಳೆಗಳು ಕಟಾವು ಮಾಡಿದ ನಂತರ ಚೀಲದಲ್ಲಿ ಕೊಳೆಯಲು ಪ್ರಾರಂಭಿಸಿವೆ. ತುಂಬರಗುದ್ದಿ ಗ್ರಾಮದ ರೈತರಾದ ಎಚ್.ಎಂ.ಮಲ್ಲಿಕಾರ್ಜುನಯ್ಯ, ನಾಗರಾಜ ಸೇರಿದಂತೆ ಹಲವು ರೈತರಿಗೆ ಈರುಳ್ಳಿ ಕೈಸೇರದೆ ನಷ್ಟವಾಗಿದೆ.

ರೈತ ಎಚ್.ಎಂ. ಮಲ್ಲಿಕಾರ್ಜುನಯ್ಯ ಎರಡು ಎಕರೆ ಜಮೀನಿನಲ್ಲಿ 12 ಕೆ.ಜಿ ಈರುಳ್ಳಿ ಬಿತ್ತನೆ ಮಾಡಿದ್ದರು. ಬೆಳೆ ಉತ್ತಮವಾಗಿ ಬೆಳೆದಿತ್ತು. ಕಟಾವು ಮಾಡಿ ಸಂಗ್ರಹಿಸಿದ್ದ ನೂರು ಚೀಲ (50 ಕೆ.ಜಿ. ಒಂದು ಚೀಲ) ಈರುಳ್ಳಿ ಕೊಳೆತಿದೆ. ಬೀಜ, ರಸಗೊಬ್ಬರ, ರಾಸಾ ಯನಿಕ ಹಾಗೂ ಬಿತ್ತನೆಯಿಂದ ಕಟಾವಿನವರೆಗೂ ಕೂಲಿ ಸೇರಿ ಸುಮಾರು ₹1.50 ಲಕ್ಷ ಖರ್ಚು ಮಾಡಿದ್ದರು. ಹಾಕಿದ ಬಂಡವಾಳ ಸಹ ಅವರ ಕೈ ಸೇರಿಲ್ಲ.

‘ಹೋದ ವರ್ಷ ಈರುಳ್ಳಿಗೆ ರೋಗ ಬಂದು ನಷ್ಟ ಅನುಭವಿಸಿದ್ದೆ. ಈ ಬಾರಿ ಉತ್ತಮ ಇಳುವರಿ ಬಂದಿತ್ತು. ಗಡ್ಡೆಗಳು ಸಹ ಉತ್ತಮವಾಗಿದ್ದವು. ಆದರೆ, ಕೊಳೆ ರೋಗಕ್ಕೆ ತುತ್ತಾಗಿ ಸಂಪೂರ್ಣ ಹಾಳಾಗಿದೆ. ಇನ್ನೂ ನೂರು ಚೀಲ ಹಾಗೆಯೇ ಇದೆ. ವಿಂಗಡಿಸಲು ₹6ರಿಂದ7 ಸಾವಿರ ಖರ್ಚು ಬರುತ್ತ ದೆ.100 ಚೀಲಕ್ಕೆ 30ರಿಂದ40ಚೀಲ ಉತ್ತಮ ಗಡ್ಡೆ ಸಿಗಬಹುದು. ಆದರೆ, ಅದರಿಂದ ಮಾಡಿದ ಖರ್ಚು ಸಹ ಸಿಗುವುದಿಲ್ಲ. ಈರುಳ್ಳಿ ಹಾಗೇ ಇಡು ವುದು ಅಥವಾ ತಿಪ್ಪೆಗೆ ಸುರಿಯುವುದು ತಿಳಿಯುತ್ತಿಲ್ಲ’ ಎಂದು ರೈತ ಮಲ್ಲಿಕಾರ್ಜುನಯ್ಯ ಗೋಳು ತೋಡಿಕೊಂಡರು…

ವರದಿ. ವಿರೇಶ್, ಕೆ, ಎಸ್, ಹೊಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend