ಬಾಗೇವಾಡಿ ಗ್ರಾ ಪಂಚಾಯಿತಿ ಅಕ್ರಮದಲ್ಲಿ ಪಿಡಿಒ ಜೊತೆಗೆ ಮೇಲಾಧಿಕಾರಿಗಳು ಶಾಮಿಲಾಗಿದ್ದಾರೆಂದು ಪವನ್ ಅರೋಪ
ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮ ಪಂಚಾಯಿತಿಯ ಹಿಂದಿನ ಅಭಿವೃದ್ಧಿ ಅಧಿಕಾರಿ ಸುಜಾತ ರವರ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರವಾಗಿದೆಯೆಂದು ಕರ್ನಾಟಕ ರಾಷ್ಟ್ರೀಯ ಸಮಿತಿ ಸಿರುಗುಪ್ಪ ತಾಲೂಕು ಕಾರ್ಯಧ್ಯಕ್ಷ ಬಾಗೇವಾಡಿ ಗ್ರಾಮದ ಪವನ್ ಕುಮಾರ್ ಪ್ರತಿಕಾಗೋಷ್ಠಿಯಲ್ಲಿ ದಾಖಲೆ ಸಮೇತ ಅರೋಪಿಸಿದ್ದಾರೆ.

ಪೋನಿನ ಮೂಲಕ ಪವನ್ ಅವರನ್ನು ಸಂಪರ್ಕಸಿದಾಗ ಅಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು ಮನೆಯ ಹತ್ತಿರ ಚರಂಡಿ ದುರಸ್ತಿ ಮಾಡಿಸಿರೆಂದು ಅರ್ಜಿ ಬರೆದಿದ್ದೆ ಅದಕ್ಕೆ ಅಭಿವೃದ್ಧಿ ಅಧಿಕಾರಗಳು ಗ್ರಾಮ ಪಂಚಾಯಿತಿಯಲ್ಲಿ ಹಣ ಇಲ್ಲವೆಂದು ಹೇಳಿದರು.14 ಮತ್ತು 15 ಹಣಕಾಸು ಹಾಗೂ ನರೇಗಾ ಯೋಜನೆ ಹಣ ಏನಾಯ್ತು ಮತ್ತು ಎಲ್ಲಿಗೆ ಹೋಯಿತ್ತೆಂದು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಕೇಳಿದಕ್ಕೆ ಪಿಡಿಒ ಸುಜಾತರವರು ನನ್ನನ್ನು ಅವ್ಯಾಚ ಶಬ್ದಗಳಿಂದ ಬೈಯುತ್ತಾರೆ ಕೈ ಹಿಡಿದು ಎಳೆಯುತ್ತಾರೆಂದು ಜಾಮೀನು ರಹಿತ ದೂರ ದಾಖಲಿಸಿದರು ಪವನ್ ಹೈಕೋರ್ಟನಲ್ಲಿ ಜಾಮೀನು ಪಡೆದು ಹೊರಗೆ ಬಂದಿದ್ದಾರೆ
1) ಫರ್ನಿಚರ್ ಅಂಗಡಿಯಲ್ಲಿ ಕುರ್ಚಿ ಟೇಬಲ್ ಸಿಗುತ್ತವೆ ಅದರೆ ಇವರು ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡಿದ್ದೆವೆಂದು ಬಿಲ್ಲು(ರಸೀದಿ) ಗಳಿವೆ.
2)ಒಂದೇ ರಸ್ತೆ ಕಾಮಗಾರಿಗೆ ಎರಡು ಬಾರಿ ಬಿಲ್ಲು ಮಾಡಿದ್ದಾರೆ.
3)ಗ್ರಾಮ ಪಂಚಾಯಿತಿ ಸಿಬ್ಬಂದಿ ವಾಟರ್ ಮ್ಯಾನ(ಪಂಪ ಅಪರೇಟರ್)ಹನುಮಂತನಿಗೆ ನರೇಗಾ ಜಾಬ್ ಕಾರ್ಡಯಿದೆ ಅತನ ಖಾತೆಗೆ ನರೇಗಾ ಕೆಲಸದ ಹಣ ಜಮೆಯಾಗುತ್ತೆ
4)ಗ್ರಾಮೀಣ ಕುಡಿಯುವ ನೀರಿನ ನೈರ್ಮಲ್ಯ ಇಲಾಖೆಗೆ ಸಂಬಂದಿಸಿದ ಕುಡಿಯುವ ನೀರಿನ ಘಟಕ.ದುರಸ್ತಿ ಕಾಮಗಾರಿಗೆ 82 ಸಾವಿರ ರೂಪಾಯಿ ಖರ್ಚಾಗಿದೆಯೆಂದು ತೋರಿಸಿದ್ದಾರೆ ನನ್ನ ಹತ್ತಿರ ಮೂಟೆಗಟ್ಟಲೆ ಅಕ್ರಮ ದಾಖಲೆಗಳು ಇದ್ದಾವೆ.ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ದಾಖಲೆಗಳು ಪಡೆದುಕೊಂಡುದ್ದಿನಿ.

ಸಿಇಒ.ಇಒ ರವರಿಗೆ ಪಿಡಿಒ ಅಕ್ರಮದ ಬಗ್ಗೆ ದೂರು ಕೊಟ್ಟು 3 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಗ್ರಾಮೀಣಭಿವೃದ್ಧಿ ಸಚಿವರಿಗೂ ಪತ್ರ ಮತ್ತು ಇಮೇಲ್ ಮೂಲಕ ದೂರು ನೀಡಿದ್ದೆವೆ ಸಚಿವರ ಮುಖ್ಯ ಆಪ್ತಕಾರ್ಯದರ್ಶಿಗಳು ಸೂಕ್ತ ಕ್ರಮ ಕೈಗೊಳ್ಳುತ್ತೇವೆಂದು ನಮಗೆ ಪತ್ರ ಕಳಿಸಿದ್ದಾರೆ.ಅದರೆ ಮೇಲಾಧಿಕಾರಿಗಳು ನಿರ್ಲಕ್ಷ ಮಾಡುತ್ತಿದ್ದಾರೆ ಜಿಲ್ಲಾಧಿಕಾರಿಗಳಿಗೆ ದೂರು ದಾಖಲಿಸಿದ ಮೇಲೆ ಜಿಲ್ಲಾಧಿಕಾರಿಗಳು ಇ ಒ ಸರ್ ಗೆ ಪೋನ ಮಾಡಿ ವಿಚಾರಿಸಿದಾಗ ಕೂಡಲೇ ಒಂದು ತಂಡ ರಚನೆ ಮಾಡಿ ತನಿಖೆಗೆ ಕಳಿಸಿದ್ದಾರೆ ಮೇಲಾಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದನ್ನು ಗಮನಿಸಿದರೆ ಪಿಡಿಒ ಜೊತೆಗೆ ಇವರು ಶಾಮಿಲಾಗಿರುವ ಅನುಮಾನ ವ್ಯಕ್ತಪಡಿಸಿದ್ದರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯತ್ ಎದುರು ಧರಣಿ ನೆಡೆಸುತ್ತಿನಿ ಮತ್ತು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೆನೆಂದು ಪವನ್ ಕುಮಾರು ತಿಳಿಸಿದರು.

ಇಒ ಸರ್ ಜೊತೆಗೆ ಪೋನ ಸಂಭಾಷಣೆ
ವರದಿಗಾರ: ಸರ್ ಬಾಗೇವಾಡಿ ಗ್ರಾಮ ಪಂಚಾಯಿತಿ ಸಮಸ್ಯೆ ಏನಾಯ್ತು
ಇಒ :ಒಂದು ತಂಡ ರಚನೆ ಮಾಡಿದಿವಿ ತನಿಖೆ ನಡೆಯುತ್ತಿದೆ
ವರದಿಗಾರ: ಸರ್ ತನಿಖೆ ಮಾಡುವುದಕ್ಕೆ ಎಷ್ಟು ದಿನಗಳು ಬೇಕು
ಇಒ:ಒಂದು ದಿನ ಹೋಗಿದ್ದಾರೆ ಶನಿವಾರ ಮತ್ತು ಸೋಮವಾರ ಹೋಗುತ್ತಾರೆ ಎರಡು ಮೂರು ದಿನಗಳಲ್ಲಿ ಮುಗಿಯುತ್ತೆ
ವರದಿಗಾರ:ಸಾಕ್ಷಿ ಸಮೇತ ದೂರು ನೀಡಿದ್ದಾರೆ ಯಾಕೆ ಪಿಡಿಒರವರ ಮೇಲೆ ಕ್ರಮ ಕೈಗೊಂಡಿಲ್ಲ
ಸಿಒ:ಕೆಲಸದ ಒತ್ತಡವಿದೆ ಕೋವಿಡ್ ಮತ್ತು ಬೇರೆ ಬೇರೆ ಸಮಸ್ಯೆ ಇದ್ದಾವೆ
ವರದಿಗಾರ:ಸರ್ ಮೇಲಾಧಿಕಾರಿಗಳು ಇದರಲ್ಲಿ ಶಾಮಿಲಾಗಿದ್ದಾರೆ ಅದಕ್ಕೆ ಯಾವ ಕ್ರಮ ಕೈಕೊಂಡಿಲ್ಲ ಎಂದು ದೂರುದಾರನ ಅರೋಪ
ಸಿಒ:ಶಾಮಿಲಾಗಿಲ್ಲ ಅರೋಪ ಮಾಡುವವರು ಮಾಡುತ್ತಾರೆ ಸಾರ್ವಜನಿಕರ ಹಕ್ಕು ತಪ್ಪೆನು ಇದೆ
ವರದಿಗಾರ:ಸರ್ ನಿಮಗೆ ಕ್ರಮ ಕೈಗೊಳ್ಳುವ ಅಧಿಕಾರವಿದೆ ಯಾಕೆ ಕ್ರಮ ತೆಗೆದುಕೊಂಡಿಲ್ಲ
ಸಿಒ:ತನಿಖೆ ಮುಗಿದ ಮೇಲೆ ವರದಿ ಮೇಲಾಧಿಕಾರಿಗಳಿಗೆ ಕಳಿಸುತ್ತಿನಿ ಅವರೇ ಕ್ರಮ ಕೈಗೊಳ್ಳುತ್ತಾರೆ ಸಭೆಯಲ್ಲಿ ಇದ್ದಿನಿ ಹೇಳುವ ವಿಚಾರ ಹೇಳಿದ್ದಿನಿ ಆಮೇಲೆ ಮಾತನಾಡುತ್ತಿನಿ ಎಂದರು.
ಸಾಕ್ಷಿ ದಾಖಲೆ ಸಮೇತ ದೂರ ಕೊಟ್ಟರು ತಂಡ ರಚನೆ ಮಾಡಿ ತನಿಖೆ ಮಾಡುವ ಅವಶ್ಯಕತೆ ಇದ್ದಿಯಾ ? ಅಕ್ರಮಗಳು ನೆಡೆಯುದಕ್ಕೆ ಮೇಲಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ತಕ್ಷಣಕ್ಕೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡರೆ ಅಕ್ರಮಗಳಿಗೆ ಕಡಿವಾಣ ಬಿಳುತ್ತೆ.ಸಿರುಗುಪ್ಪ ತಾಲೂಕಿನ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.ಇ ಒ ಸರ್ ನಿರ್ಲಕ್ಷ್ಯ ಮಾಡುವುದು ಬಿಟ್ಟು ವಾರದಲ್ಲಿ ಎರಡು ಮೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ಮಾಡಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕು.
ತಾಲೂಕಿನ ಎಲ್ಲಾಗ್ರಾಮ ಪಂಚಾಯಿತಿಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಕೇಳಿದರೆ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಹಳೇಕೋಟೆ ಗ್ರಾ ಪಂಚಾಯಿತಿಯಲ್ಲಿ ಹೆಚ್ಚಿನ ಅಕ್ರಮಗಳು ಬಯಲಿಗೆ ಬರಬಹುದು…

ವರದಿ.ಎಂ. ಎಲ್.ವೆಂಕಟೇಶ್ಬಳ್ಳಾರಿ, ಡಿ, ಎಸ್, ಎಸ್, ಜಿಲ್ಲಾ ಸಂಚಾಲಕರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
