ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಕಾರ್ಯಗಾರ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಹೋಬಳಿಗೆ ಸಂಬಂಧಿಸಿದಂತೆ ಖಾಸಗಿ ನಿವಾಸಿಗಳ (ಪಿ. ಆರ್.) ಗಳಿಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
2021-22 ನೇ ಸಾಲಿನ ಮುಂಗಾರಿನ ಬೆಳೆ ಸಮೀಕ್ಷೆ ಕುರಿತು ರೈತರ ಮೊಬೈಲ್ ಆಪ್ ಬಳಸಿ ಬೆಳೆ ಸರ್ವೇ ಮಾಡಲು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ವಾಮದೇವ ಕೊಳ್ಳಿ ರವರು ಹೊಸಹಳ್ಳಿ ಹೋಬಳಿಗೆ ಸಂಭಂದಿಸಿದ ಖಾಸಗಿ ನಿವಾಸಿಗಳಿಗೆ ( ಪಿ.ಆರ್. ಗಳಗೆ) ಸೂಚನೆ ನೀಡಿದರು.
ಎಲ್ಲಾ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಸರ್ವೇಯನ್ನು ಕಡ್ಡಾಯವಾಗಿ ಮಾಡಿಸಬೇಕು.
ಮುಂದಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಮೂಲ ಈ ಸರ್ವೇ ಆಗಲಿದೆ ಎಂದರು.
ಹಾಗೇಯೆ ಬೆಳೆ ವಿಮೆ ಕಟ್ಟುವುದರ ಬಗ್ಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಕೃಷಿ ಅಧಿಕಾರಿ ಚೈತ್ರ,ಸಹಾಯಕ ಕೃಷಿ ಅಧಿಕಾರಿ ಮಾನಸ, ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ಶ್ರವಣ್ ಕುಮಾರ್ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ರಾಮಕೃಷ್ಣ ಬಂಡ್ರಿ,ರಾಕೇಶ್,ರಾಜಪ್ಪ ಹಾಗೂ ಹೋಬಳಿಯ ಖಾಸಗಿ ನಿವಾಸಿಗಳು ಸೇರಿ ಇತರರು ಇದ್ದರು.

ವರದಿ ಕೆಎಸ್ ವೀರೇಶ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
