ಸರ್ವೆ ಇಲಾಖೆಯಿಂದ ಜುಲೈ ಮಾಹೆಯನ್ನು “ವಿಶೇಷ ಸೇವಾ ಮಾಸ” ಎಂದು ಪರಿಗಣಿಸಿ ಜುಲೈ 3 ರಿಂದ 30 ವರೆಗೆ ಜುಲೈ…!!!

ವಿಶೇಷ ಸೇವಾ ಮಾಸ
ಚಿತ್ರದುರ್ಗ,ಜು.03
ರಾಜ್ಯಾದ್ಯಂತ ಹಾಗೂ ಚಿತ್ರದುರ್ಗ ಜಿಲ್ಲಾದ್ಯಂತ ಪರವಾನಗಿ ಭೂಮಾಪಕರುಗಳು ಪೆಭ್ರವರಿ 2 ರಿಂದ ಮುಷ್ಕರ ಕೈಗೊಂಡಿದ್ದರಿಂದ ಹಾಗೂ ಕೋವಿಡ್ 19 ಸಾಂಕ್ರಮಿಕ ರೋಗ ಇದ್ದುದರಿಂದ ಸುಮಾರು 5 ತಿಂಗಳಿಂದ ಹಾಗೂ ಸರ್ಕಾರಿ ಭೂಮಾಪಕರುಗಳು ಸುಮಾರು 2 ತಿಂಗಳಿನಿಂದ  ಸಾರ್ವಜನಿಕ ಇಲಾಖಾ ಸೇವೆಯನ್ನು ಒದಗಿಸಲು ಸಾಧ್ಯವಾಗಿರುವುದಿಲ್ಲ.
ಇದರಿಂದ ಬಹಳಷ್ಟು ಸಾರ್ವಜನಿಕ ಅರ್ಜಿಗಳು ಬಾಕಿಯಿರುತ್ತದೆ. ಇವೆಲ್ಲವನ್ನು ಗಮನಿಸಿ ಜಿಲ್ಲಾ ಸರ್ವೆ ಶಾಖೆಯ ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಅರ್ಜಿದಾರರಿಗೆ ಹೆಚ್ಚು ಸೇವೆ ಸಲ್ಲಿಸಲು ಇಚ್ಚಿಸಿರುತ್ತಾರೆ. ಆದ್ದರಿಂದ ಜಿಲ್ಲಾ ಸರ್ವೆ ಇಲಾಖೆಯಿಂದ ಜುಲೈ ಮಾಹೆಯನ್ನು “ವಿಶೇಷ ಸೇವಾ ಮಾಸ” ಎಂದು ಪರಿಗಣಿಸಿ ಜುಲೈ 3 ರಿಂದ 30 ವರೆಗೆ ಜುಲೈ ಮಾಹೆಯಲ್ಲಿ ಸಾರ್ವಜನಿಕರಿಗೆ ಹೆಚ್ಚು ಸೇವೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿರುತ್ತಾರೆ.  ಆದ್ದರಿಂದ ಸಾರ್ವಜನಿಕರು ಅಳತೆ ಸಂದರ್ಭದಲ್ಲಿ ಭೂಮಾಪಕರಿಗೆ ಸಹಕರಿಸಿ ತುರ್ತು ಸೇವೆ ಪಡೆಯಲು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.

ವರದಿ. ಶಶಿಕುಮಾರ್ ಚಳ್ಳಕೆರೆ

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend