ಕಾನಾಹೊಸಹಳ್ಳಿ ಕೆ,ಎಂ,ಎಸ್ ಕಾಲೇಜಿನಲ್ಲಿ ಲಸಿಕಾ ಕಾರ್ಯಕ್ರಮ ಕ್ಕೆ ಚಾಲನೆ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು
ಕಾನಾಹೊಸಹಳ್ಳಿ ಕೆ,ಎಂ,ಎಸ್ ಕಾಲೇಜಿನಲ್ಲಿ ಲಸಿಕಾ ಕಾರ್ಯಕ್ರಮ ಕ್ಕೆ ಚಾಲನೆ..
ಕಾನಾಹೊಸಹಳ್ಳಿ ಕೆ ಎಂ ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶನಿವಾರ ಕೋವಿಡ್ ಲಸಿಕೆ ಹಾಕಲಾಯಿತು ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಕೆಎಂ ಶಶಿಧರ್ ಗಿಡಕ್ಕೆ ನೀರು ಹಾಕುವುದರ ಮುಖಾಂತರ ಚಾಲನೆ ನೀಡಿ, ನಂತರ ಮಾತನಾಡಿ ನಮ್ಮ ವಿದ್ಯಾ ಸಂಸ್ಥೆ ಯ 18 ವರ್ಷದ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗೆ ಕಾನಾಹೊಸಹಳ್ಳಿ ಆರೋಗ್ಯ ಕೇಂದ್ರದ ವತಿಯಿಂದ ಲಸಿಕೆ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸುತ್ತಿದ್ದು ವಿದ್ಯಾರ್ಥಿಗಳು ಮುಂದಿನ ಭಾರತದ ಭವಿಷ್ಯದ ಪ್ರಜೆಗಳು ಆದ್ದರಿಂದ ಯುವಕರು ಆರೋಗ್ಯದಿಂದ ಇದ್ದರೆ ದೇಶದ ಪ್ರಗತಿಯಾಗುತ್ತದೆ ಎಲ್ಲರೂ ಲಸಿಕೆ ಪಡೆದು ಹಾಗೂ ಕೋವಿಡ್ ನಿಯಮಗಳನ್ನು ಇನ್ನೂ ಕೆಲ ತಿಂಗಳುಗಳ ಕಾಲ ಪಾಲಿಸಿ ಕರೋನವನ್ನು ಹೊಡೆದೋಡಿಸಬೇಕಿದೆ ಎಂದು ಹೇಳಿದರು. ನಂತರ ಕಾನಾಹೊಸಹಳ್ಳಿ ಆರೋಗ್ಯ ಕೇಂದ್ರದ ವೈಧ್ಯಾದಿಕಾರಿ ಡಾ ವಿಶ್ವನಾಥ ಕೋವಿಡ್ ಬಾರದಂತೆ ಮುಂಜಾಗ್ರತವಾಗಿ ಹೇಗೆ ಎಚ್ಚರಿಕೆ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ರಾಘವರೆಡ್ಡಿ, ಕೃಷ್ಣಮಹೇಂದ್ರಕರ್,ಸವಿತಾ, ಸುಧಾ,ಭಾರತಿ, ಆಶಾ ಕಾರ್ಯಕರ್ತೆ ಶಶಿಕಲಾ ಹಾಗೂ ಕೆಎಂ‌ಎಸ್ ಕಾಲೇಜಿನ ಸಿಬ್ಬಂದಿಗಳಾದ ಪ್ರಾಂಶುಪಾಲರಾದ ಸುದರ್ಶನ, ವಿಜಯಕುಮಾರ್, ದಂಡೆಪ್ಪ, ಸೇರಿದಂತೆ ಇತರರಿದ್ದರು.

ಡಿ ಎಂ ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend