ಶ್ರೀ ಪ್ರದೀಪ ಹಿಟ್ನಾಳ ಇವರ ಸಹಕಾರದಲ್ಲಿ ತುರ್ತು ಚಿಕಿತ್ಸಾ ವಾಹನವನ್ನು ಸಾರ್ವಜನಿಕರ ಸೇವೆಗಾಗಿ ನಾಳೆಯಿಂದ ಪ್ರಾರಂಭ…!!!

ನಾಳೆಯ ದಿವಸ ಭಾರತೀಯ ಜನತಾ ಪಕ್ಷ ಕೊಪ್ಪಳ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶ್ರೀ ಪ್ರದೀಪ ಹಿಟ್ನಾಳ ಇವರ ಸಹಕಾರದಲ್ಲಿ ತುರ್ತು ಚಿಕಿತ್ಸಾ ವಾಹನವನ್ನು ಸಾರ್ವಜನಿಕರ ಸೇವೆಗಾಗಿ ನಾಳೆಯಿಂದ ಪ್ರಾರಂಭವಾಗಲಿದೆ, ಕೋವಿಡ್-19 ಮಹಾಮಾರಿಯಿಂದ ಈಡೀ ದೇಶವೇ ತೊಂದರೆಯಲ್ಲಿದೆ ಹಾಗೂ ಆರೋಗ್ಯ ಇಲಾಖೆಯ ತುರ್ತು ವಾಹನಗಳು ಮತ್ತು ವಾಹನ ಚಾಲಕರು ಬಿಡುವಿಲ್ಲದೆ ತಮ್ಮ ಸೇವೆಯನ್ನು ನಿರಂತರವಾಗಿ ನೀಡುತ್ತಿದ್ದಾರೆ, ಆದರೂ ಸಹ ಕೆಲವೊಂದು ಬಾರಿ ಹಳ್ಳಿಗಳಲ್ಲಿ ತುರ್ತಾಗಿ ಗರ್ಭಿಣಿಯರಿಗೆ, ಕೋವಿಡ ರೋಗಿಗಳಿಗೆ, ಇನ್ನಿತರ ಆರೋಗ್ಯದ ತುರ್ತು ಪರಿಸ್ಥಿತಿಗೆ ಆಸ್ಪತ್ರೆಗೆ ಹೋಗಲು ಕೆಲವೊಂದು ಬಾರಿ ವಾಹನಗಳ ಲಬ್ಯತೇ ಸಿಗದೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ, ಅಂತವರಿಗೆ ತುರ್ತು ವಾಹನದ ಸಹಾಯ ಮಾಡುವ ಸಲುವಾಗಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಗಳ ನೇತೃತ್ವದಲ್ಲಿ ತುರ್ತು ಸೇವಾ ವಾಹನವನ್ನು ಸಾರ್ವಜನಿಕ ಸೇವೆಗೆ ನೀಡಲು ತಿರ್ಮಾನಿಸಿದ್ದು, ನಾಳೆಯ ದಿವಸ ಕೊಪ್ಪಳದ ಆರಾಧ್ಯ ದೈವ ಗವಿಸಿದ್ದೇಶ್ವರ ಶ್ರೀ ಗಳಿಂದ ಹಾಗೂ ಸಂಸದರಾದ ಶ್ರೀ ಸಂಗಣ್ಣ ಕರಡಿ ಇವರಿಂದ ದಿನಾಂಕ 4/6/2021 ರ ಶುಕ್ರವಾರ ಬೆಳಿಗ್ಗೆ 10:30 ಕ್ಕೆ ಕೊಪ್ಪಳದ ಗವಿಮಠದಿಂದ ಚಾಲನೆ ನೀಡುವರು, ಲಾಕಡೌನ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ಚಾಲನೆ ನೀಡುವ ಕಾರ್ಯಕ್ರಮ ವಿರುತ್ತದೆ ತಮ್ಮೆಲ್ಲರ ಸಹಕಾರ ಇರಲಿ,ಎಂದು ಹೇಳುತ್ತಾ ಸದಾ ನಿಮ್ಮಗಳ ಸೇವೆಯನ್ನು ಮಾಡಲು ಇಂಜೆರಿಯದೆ ಮಾಡುವೆ ಎಂದರು….

 

ವರದಿ. ಶರಣುಗೌಡ ಕೊಪ್ಪಳ

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend