ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ 1ಎಕರೆ ಜಮೀನಿಗೆ ಕನಿಷ್ಟ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಲು ಮನವಿ.!!

ಚಿತ್ರದುರ್ಗ: ಮೊಳಕಾಲ್ಮುರು: ಕೋವಿಡ್ ಲಾಕ್‌ಡೌನ್ ವೇಳ ಹೂ, ಹಣ್ಣು ತರಕಾರಿಗಳನ್ನು ಮಾರಾಟ ಮಾಡಲು ಕಾಲಮಿತಿ ವಿಸ್ತರಣೆ ಮಾಡುವಂತೆ ಆಗ್ರಹಿಸಿರಾಜ್ಯ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಮನವಿ ಸಲ್ಲಿಸಿದ ಕಾರ್ಯಕರ್ತರು, ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿ ಹಣ್ಣು ಹೂ ಹಾಗೂ ತರಕಾರಿ ಮಾರಾಟ ಮಾಡಲು ಸಮಯಸಾಲುತ್ತಿಲ್ಲ. ಇದರಿಂದ ಹಣ್ಣು, ಹೂ ಕೊಳೆಯುವಂತ ಸ್ಥಿತಿ ಎದುರಾಗಿದ್ದು, ಮಾರಾಟಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ಹೂ,ಹಣ್ಣು ತರಕಾರಿ ಮಾರಾಟಕ್ಕೆ ನಿಗದಿಗೊಳಿಸಿರುವ ಸಮಯವನ್ನು ವಿಸ್ತರಣೆ ಹೂವು, ಹಣ್ಣು, ತರಕಾರಿ ಮಾರಾಟಕ್ಕೆ ಸರ್ಕಾರ ಪ್ರಸ್ತುತ ನಿಗದಿಪಡಿಸಿರುವ ಸಮಯವನ್ನು ಮಧ್ಯಾಹ್ನ ಒಂದು ಗಂಟೆವರೆಗೆ ವಿಸ್ತರಿಸಬೇಕು. ಹಾಗೆಯೇ ಹೂವು, ಹಣ್ಣು, ತರಕಾರಿ ಬೆಳೆ ನಷ್ಟಕ್ಕೆ ಸರ್ಕಾರ ಘೋಷಿಸಿರುವ ಬೆಳೆ ನಷ್ಟ ಪರಿಹಾರದ ಹಣ ಏತಕ್ಕೂ ಸಾಕಾಗದ ಕಾರಣ, ಹೂವು, ಹಣ್ಣು ತರಕಾರಿ ಬೆಳೆದ ಒಂದು ಎಕರೆ ಜಮೀನಿಗೆ ಕನಿಷ್ಟ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬದ್ದತೆ ತೋರಬೇಕು. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ರೈತರ ಹಿತ ಕಾಪಾಡಲು ಸರ್ಕಾರದ ಗಮನ ಹರಿಸಬೇಕೆಂದು ಒತ್ತಾಯಿಸಿದರು. ತಾಲೂಕು ಕಚೇರಿ ಶಿರಸ್ತೇದಾರ ಏಳುಕೋಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಬೆಳಗಲ್ ಈಶ್ವರಯ್ಯ
ಸ್ವಾಮಿ, ಮರಹಳ್ಳಿ ರವಿಕುಮಾರ್, ಕೆ.ಚಂದ್ರಣ್ಣ
ಡಿ.ಬಿ.ಕೃಷ್ಣಮೂರ್ತಿ, ಯರ್ರಜ್ಜನಹಳ್ಳಿ ನಾಗರಾಜ ಪಿ.ಟಿ ಹಟ್ಟಿ ನಿಂಗಣ್ಣ, ಇತರರು ಉಪಸ್ಥಿತರಿದ್ದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend