ಶಿಕ್ಷಕರ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ…!!!

ಶಿಕ್ಷಕರ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ.ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಹೊಸಹಳ್ಳಿ ಹಾಗೂ ಆಲೂರು ಸಿ.ಆರ್.ಸಿ.ವ್ಯಾಪ್ತಿಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಶ್ರೀ ಗಿರಿಧರನಾಯ್ಕ ಪದವಿದರೇತರ ಮುಖ್ಯಗುರುಗಳು ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೊಸಹಳ್ಳಿ,ಬಡ್ತಿಮುಖ್ಯಗುರುಗಳು ಸ.ಹಿ.ಪ್ರಾ.ಶಾಲೆ ಜುಟ್ಟಲಿಂಗನಹಟ್ಟಿ ಯ ಶ್ರೀ ಎಂ.ಎಸ್.ತಿಪ್ಪೇಸ್ವಾಮಿ(ಮಾಡರ್ನ್ ಟೈಲರ್)ಹಾಗೂ ಕೋಣನಮರಿಸ್ವಾಮಿ ಉ.ಸ.ಹಿ.ಪ್ರಾ.ಶಾಲೆಯ ಶ್ರೀ ಎಚ್.ವಿ.ಕಲ್ಲೇಶ್ ಇವರುಗಳು ವಯೋನಿವೃತ್ತಿ ಹೊಂದಿರುವರು. ಇಲಾಖೆ ಯಲ್ಲಿ ಸರಿ ಸುಮಾರು 30ವರ್ಷಗಳ ಕಾಲ ಸೇವೆಸಲ್ಲಿಸಿದ್ದು ಇಲಾಖೆಯ ಹಾಗೂ ಮಕ್ಕಳ ಮನಸ್ಸನ್ನು ಗೆದ್ದು ಉನ್ನತಮಟ್ಟದ ಸೇವೆಸಲ್ಲಿಸಲಾಗಿದೆ.ಇವರಸೇವೆ ಅವಿಸ್ಮರಣೀಯ. ಇವರುಗಳನ್ನು ಪ್ರೀತಿ ಆದರಗಳಿಂದ ಎರಡು ಸಿ.ಆರ್.ಸಿ ಯ ಶಿಕ್ಷಕಬಳಗದಿಂದ ಬೀಳ್ಕೊಡುಗೆ ಮಾಡಲಾಯಿತು. ವಯೋನಿವೃತ್ತಿ ಶಿಕ್ಷಕರು ವೃತ್ತಿ ಜೀವನದ ಅನಿಸಿಕೆಗಳನ್ನು ಹಂಚಿಕೊಳ್ಳಲಾಯಿತು.ಇಂದಿನ ಇಲಾಖೆ ಹಾಗೂ ಕೋವಿಡ್ ಒತ್ತಡಗಳ ಮಧ್ಯ ಸುಖಾಂತವಾದ ನಿವೃತ್ತಿ ನಮ್ಮ ಸೌಭಾಗ್ಯ ವೇ ಸರಿ ಎಂದು ಅನಿಸಿಕೆ ಹಂಚಿಕೊಂಡರು.ಕಾರ್ಯಕ್ರಮ ದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಬೀಳ್ಕೊಡುಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಶಾಮಸುಂದರ ಸಪಾರೆ,ಮಹದೇವಪ್ಪ ,ಮಂಜುಳ,ಪಿ.ಜಗದೀಶ್.

ಹಾಲೇಶ್,ಚೌಡಪ್ಪ,ಸಿ.ಆರ್.ಪಿಗಳಾದ ಶ್ರೀ ಲೋಕೇಶ್ ಎನ್.ಎಸ್.ಶ್ರೀ ಸಿದ್ದೇಶ್ವರ ಜಿ.ಟಿ.ಹಾಗೂ ಪ್ರಕಾಶ್ ಜಿ.ಬಿ.ಗೌರವ ಅಧ್ಯಕ್ಷರು ಕ.ರಾ.ಸ.ಶಿ.ಸಂಘ ಕೂಡ್ಲಿಗಿ ಘಟಕ ಇವರುಗಳು ಉಪಸ್ಥಿತರಿದ್ದರು.

ವರದಿ ಕೆ ಎಸ್ ವೀರೇಶ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend