ಕಲಾವಿದರ ಸಂಕಷ್ಟ; ಮಾನವೀಯ ದೃಷ್ಟಿಯಿಂದ ಕಲಾವಿದರಿಗೆ ರೇಷನ್ ಕಿಟ್ ವಿತರಿಸಿದ ಎನ್.ವೈ ಚೇತನ್.!!

ಚಿತ್ರದುರ್ಗ: ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ವಾದ್ಯಗೋಷ್ಠಿ ಕಲಾವಿದರು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಕಾರ್ಯಕ್ರಮಗಳಿಲ್ಲದೆ ಮನೆಯ ಸಂಸಾರ ನೀಗಿಸುವುದು ಬಹಳ ಕಷ್ಟಕರವಾಗಿದೆ ಮತ್ತು ಕಲಾವಿದರು ವೇದಿಕೆಗಳ ಮೇಲೆ ಶ್ರೀಮಂತರ ಇರುತ್ತಾರೆ ಅವರ ಕಲೆ ಕೂಡ ಶ್ರೀಮಂತಿಕೆಯಿಂದ ಕೂಡಿರುತ್ತದೆ ಆದರೆ ನಿಜ ಜೀವನದಲ್ಲಿ ಸಾಕಷ್ಟು ಆರ್ಥಿಕವಾಗಿ, ಸಾಮಾಜಿಕವಾಗಿ ಬಡತನಕ್ಕೆ ಬಲಿಯಾಗಿರುತ್ತಾರೆ. ಪ್ರಪಂಚಕ್ಕೆ ಮಾರಕವಾಗಿರುವ ಈ ಕರೋನ ರೋಗದಿಂದ ಕಲಾವಿದರು ತತ್ತರಿಸಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಮಾನವೀಯ ದೃಷ್ಟಿಯಿಂದ ಕಲಾವಿದರಿಗೆ ರೇಷನ್ ಕಿಟ್ ಗಳನ್ನೂ ಕೊಟ್ಟು ಎನ್ ವೈ ಚೇತನ್ ರವರು ಮಾನವೀಯತೆ ಮೆರೆದಿದ್ದಾರೆ ಎಂದು ಹಾಸ್ಯ ನಟ ಭಟ್ರಹಳ್ಳಿ ಧನಂಜಯ ಮಾತನಾಡಿದರು. ಸಿನಿಮಾ ಹಾಸ್ಯನಟರಾದ ಭಟ್ರಹಳ್ಳಿ ಧನಂಜಯ ರವರು ಸಂಗ್ರಹಿಸಿದ ರೇಷನ್ ಕಿಟ್ ಗಳನ್ನು ಯುವ ಮುಖಂಡರು, ಸಮಾಜ ಸೇವಕರಾದ ಎನ್ ವೈ ಚೇತನ್ ರವರು ವೈಯಕ್ತಿಕವಾಗಿ ವಾದ್ಯಗೋಷ್ಠಿ ಕಲಾವಿದರಿಗೆ ರೇಷನ್ ಕಿಟ್ ಗಳನ್ನೂ ಅವರ ತಂಡದ ವತಿಯಿಂದ ನೀಡಲಾಯಿತು ತಂಡದಲ್ಲಿ ರಾಂಪುರ ಗ್ರಾಪಂ ಸದಸ್ಯರಾದ ಕೃಷ್ಣಮೂರ್ತಿ, ಶಫಿಯುಲ್ಲಾ, ಲೋಹಿತ್ , ಮಹ್ಮದ್ ಸಾಬ್, ಮಹ್ಮದ್ ತಾಜ್, ದರ್ಶನ್, ತಿಪ್ಪೇಸ್ವಾಮಿ ಹಾಗೂ ಕಲಾವಿದರು ಉಪಸ್ಥಿತರಿದ್ದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend