;

ಅರಿಗ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಲ್ಯಾಬ್ ಗೆ ನೋಟೀಸ್…!!!

ಅರಿಗ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಲ್ಯಾಬ್ ಗೆ ನೋಟೀಸ್
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 13. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿರುವ ಅರಿಗ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಲ್ಯಾಬ್ ಗೆ ಆರ್.ಟಿ.ಪಿ.ಸಿ.ಆರ್. ವರದಿಯನ್ನು ತಡವಾಗಿ ಐ.ಸಿ.ಎಂ.ಆರ್. ಪೋರ್ಟಲ್ ನಲ್ಲಿ ಅಪ್ಲೋಡ್ ಹಾಗೂ ಕೋವಿಡ್ ಪರೀಕ್ಷೆ ವೇಳೆ, ಸೋಂಕಿತ ವ್ಯಕ್ತಿಗಳ ಪೂರ್ಣ ವಿಳಾಸ ನಮೂದು ಮಾಡದ ಹಿನ್ನೆಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ ಇಲಾಖೆ ವತಿಯಿಂದ ನೋಟೀಸ್ ಜಾರಿ ಮಾಡಲಾಗಿದೆ.
ಅರಿಗ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಲ್ಯಾಬ್ ಗೆ ಇಂದು ಭೇಟಿ ನೀಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಧರ್ಮೇಂದ್ರ ಹಾಗೂ ವೈದ್ಯಕೀಯ ಸಿಬ್ಬಂದಿಗಳು, ಆರ್.ಟಿ.ಪಿ.ಸಿ.ಆರ್. ವರದಿಯನ್ನು ಐ.ಸಿ.ಎಂ.ಆರ್. ಪೋರ್ಟಲ್ ನಲ್ಲಿ 24 ಗಂಟೆಯೊಳಗೆ ಅಪ್ಲೋಡ್ ಮಾಡಬೇಕು ಹಾಗೂ ಕೋವಿಡ್ ಪರೀಕ್ಷೆ ಮಾಡುವ ಸಂದರ್ಭದಲ್ಲಿ ದ್ರವ ಸಂಗ್ರಹಿಸಲು ವೇಳೆ, ಸೋಂಕು ದೃಢಪಟ್ಡ ವ್ಯಕ್ತಿಗಳ ನಿವಾಸದ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಜಿಲ್ಲೆಯ ಹೆಸರನ್ನು ಸರಿಯಾಗಿ ನಮೂದಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಕೋವಿಡ್ ಪರೀಕ್ಷೆ ಬಳಿಕ ಆರ್.ಟಿ.ಪಿ.ಸಿ.ಆರ್. ವರದಿಯ ಅಪ್ಲೋಡಿಂಗ್ ನಲ್ಲಿ ತಡ ಮಾಡುತ್ತಿರುವುದರಿಂದ ಸಕಾಲದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ ಹಾಗೂ ಸೋಂಕಿತ ವ್ಯಕ್ತಿಗಳ ಅಪೂರ್ಣ ಮಾಹಿತಿ ನಮೂದಿಸುತ್ತಿರುವ ಕಾರಣ ಸೋಂಕಿತ ವ್ಯಕ್ತಿಗಳ ಪತ್ತೆಹಚ್ಚಲು ವಿಳಂಬವಾಗುತ್ತಿದೆ. ಇದು ಮರುಕಳಿಸಿದರೆ, ಲ್ಯಾಬ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ವರದಿ. ನಳಿನಿ ಬೆಂಗಳೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;