;

ಜೈ ಭೀಮ್ ಘರ್ಜನೆ ಸಂಘಟನೆಯಿಂದ ತೇಜಸ್ವಿ ಸೂರ್ಯ ರವರನ್ನು ಸಂಸದ ಸ್ಥಾನದಿಂದ ಕೈಬಿಡಲು ಮನವಿ…!!!

ಸಿಂಧನೂರು :ಸನ್ಮಾನ್ಯ ಮುಖ್ಯಮಂತ್ರಿಗಳು ಶ್ರೀಬಿ.ಎಸ್.ಯಡಿಯೂರಪ್ಪ ಇವರಿಗೆ ತಾಲೂಕು ತಹಸಿಲ್ದಾರ್ ಮುಖಾಂತರ ಜೈ ಭೀಮ್ ಘರ್ಜನೆ ಸಂಘಟನೆ ತಾಲೂಕು ಸಮಿತಿ ಸಿಂಧನೂರು ವತಿಯಿಂದ ತೇಜಸ್ವಿ ಸೂರ್ಯ ಇವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಿ ಬೆಡ್ ಬ್ಲಾಕ್ ದಂದೆಯಲ್ಲಿ ತೊಡಗಿದ ತಪ್ಪಿತಸ್ಥರಿಗೆ ಶಿಕ್ಷೆ ಒಳಪಡಿಸಿ ಎಂದು ಆಗ್ರಹಿಸಿದೆ.ಕೋವಿಡ್ 19 ಬೆಡ್ ಬ್ಲಾಕ್ ದಂದೆಯಲ್ಲಿ ಬಿಬಿಎಂಪಿಯ ದಕ್ಷಿಣ ವಲಯದ ವಾರ್ ರೂಮ್ ನಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕ್ ದಂದೆ ತನಿಖೆಯಾಗಬೇಕು ಎಂದು ಆಗ್ರಹಿಸಿದೆ.

ಸಂಸ್ಥಾಪಕಾಧ್ಯಕ್ಷರಾದ ನಿರುಪಾದಿ ಸಾಸಲಮರಿ ಮಾತನಾಡಿ ಬಿಬಿಎಂಪಿ ವಾರ್ ರೂಮ್ ನಲ್ಲಿ 206 ಜನರಲ್ಲಿ ಅನೇಕ ಸಮುದಾಯದ ಜನ ಕೆಲಸ ಮಾಡುತ್ತಿದ್ದು, ತೇಜಸ್ವಿಸೂರ್ಯ ಅವರು ಕೇವಲ ಮುಸ್ಲಿಂ ಸಮುದಾಯದ 17 ಜನರನ್ನು ಮಾತ್ರ ಕೆಲಸದಿಂದ ವಜಾಗೊಳಿಸಿ ಕೋಮುವಾದ ಸೃಷ್ಟಿಸುವುದಕ್ಕೆ ಕಾರಣರಾಗಿದ್ದಾರೆ.ರಾಜ್ಯದಲ್ಲಿ ಒಬ್ಬ ಸಂಸದನಾಗಿ ಜಾತಿ ಧರ್ಮಗಳ ಮಧ್ಯೆ ವಿಷಬೀಜ ಬಿತ್ತುತ್ತಿದ್ದಾರೆ,ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ, ಒಬ್ಬ ಲೋಕಸಭಾ ಸದಸ್ಯರಿಗೆ ಇರುವ ಕನಿಷ್ಠ ಸಂವಿಧಾನದ ಪ್ರಜ್ಞೆ ಈ ಸಂಸಧನಿಗೆ ಇಲ್ಲಾ, ತೇಜಸ್ವಿ ಸೂರ್ಯ ಅವರನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಕೂಡಲೆ ವಜಾಗೊಳಿಸಬೇಕೆಂದು ಜೈ ಭೀಮ್ ಘರ್ಜನೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷರಾದ ನಿರುಪಾದಿ ಸಾಸಲಮರಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಹೇಮಣ್ಣ ಉಪ್ಪಳ, ತಾಲೂಕ್ ಪ್ರಧಾನ ಕಾರ್ಯದರ್ಶಿ ಹೊನ್ನೂರ್ ಕಟ್ಟಿಮನಿ,ಕಾನೂನು ಸಲಹೆಗಾರರಾದ ಹನುಮಂತಪ್ಪ ವಕೀಲರು,ತಾಲೂಕ್ ಉಪಾಧ್ಯಕ್ಷರಾದ ಸಿದ್ದಪ್ಪ ಸೋಮಲಾಪುರ,ವೀರೇಶ್, ಶರಣಬಸವ ಪಗಡದಿನ್ನಿ,ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;