;

ಮೊಳಕಾಲ್ಮೂರು: ಪ್ರತಿಯೊಬ್ಬರು ಕೋವಿಡ್ ಮಾರ್ಗ ಸೂಚನೆಯನ್ನು ಪಾಲಿಸಬೇಕು, ವಿವಿಧ ಇಲಾಖೆ ಗಳಿಗೆ ಸಭೆ: ಎಸಿ ಪ್ರಸನ್ನ ಕುಮಾರ್.!

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಯ ಅಧಿಕಾರಿಗಳ ಕೊರೋನಾ ವೈರಸ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕೊರೋನಾ ವೈರಸ್ ದೃಢಪಟ್ಟಂತಹ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪ ರ್ಕಿತರನ್ನು ಪತ್ತೆ ಹಚ್ಚಿ ಅವರನ್ನು ಕ್ವಾರಂಟೈನ್ ಗೆ ಒಳಪಡಿಸುವಂತ ಕೆಲಸಗಳು ಆಗುತ್ತಿಲ್ಲ. ಇದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಸಂಬಂಧಿಸಿದ ಆರೋಗ್ಯಾಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕು. ಸೋಂಕಿತರು ಗುನ ಮುಖರಾಗಿ ಮನೆಗೆ ಹೊದರೆ ಅವರ ಮನೆಯ ಫೋಟೋ ಅಪ್ ಲೋಡ್ ಮಾಡಬೇಕು. ಜತೆಗೆ ಅವರನ್ನು ಸದಾ ಫೋನು ಮೂಲಕ ಅವರನ್ನು ಗಮನಿ ಸಬೇಕೆಂದರು. ಗಂಟಲು ದ್ರವ ಪಡೆದುಕೊಳ್ಳುವಾಗ ಕಡ್ಡಾ ಯವಾಗಿ ಆಧಾರ್ ನಂಬರ್ ಜತೆಗೆ ಪೋನ್ ನಂಬರ್ ಅನ್ನು ಪಡೆದುಕೊಳ್ಳಬೇಕು. ಸ್ಯಾಬ್ ತೆಗೆದುಕೊಳ್ಳುವಾಗ ಗಂಟಲು ಒಳ ಗಡೆಯಿಂದ ಪಡೆದುಕೊಳ್ಳಬೇಕು. ಕೆಲವಡೆ ಕೇವಲ ನಾಲಿಗೆ ಯಿಂದಲೇ ಪಡೆಯುತ್ತಿರುವ ವರದಿ ಗಳು ಕೇಳಿಬರುತ್ತಿವೆ. ಇದರಿಂದ ಸೋಂಕು ಇದ್ದರೂ ನೆಗೆಟಿವ್ ವರದಿಯಾಗ ಲಿದೆ. ಹಾಗಾಗಿ, ಆರೋಗ್ಯ ಇಲಾಖೆಯವರು ಸ್ವಾಬ್ ಪಡೆಯು ವಂತ ಸಿಬ್ಬಂಧಿಗೆ ಪೂರ ಗಂಟಲಿನಿಂದಲೇ ಪಡೆಯಲು ಸೂಚಿಸಬೇಕು. ಸ್ವಾಬ್ ಪಡೆದ ನಂತ ನಿಗದಿತ ಅವಧಿಯೊಳಗೆ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಬೇಕು ಎಂದು ಹೇಳಿದರು. ತಹಶೀಲ್ದಾರ್ ಟಿ.ಸುರೇಶ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕೊರೋನಾ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದು ಮಾರ್ಗ ಸೂಚಿಯಂತೆ ಶ್ರಮಿಸಲಾಗುವುದು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ಸುಧಾ ಮಾತನಾಡಿ, ತಾಲೂಕಿನಲ್ಲಿ ಕೊರೊನಾ ಹರಡದಂತೆ ತಡೆಯಲು ನಿಗದಿತ ತಂಡ ರಚಿಸಿ ಮಾಹಿತಿ ಪಡೆದು ಕಾರ್ಯ ನಿರ್ವಹಿಸಲಾಗುವುದು. ಪಟ್ಟಣದ ನೂರು ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 51 ಬೆಡ್ ಮೀಸಲಿಟ್ಟಿದ್ದು ಅವಶ್ಯವಿದ್ದಲ್ಲಿ ಆದರ್ಶ ಶಾಲೆ ಮತ್ತು ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು.

ನಿತ್ಯವೂ ಕೊರೊನಾ ಪಾಸಿಟಿವ್ ಮತ್ತು ನೆಗೆಟಿವ್ ಮಾಹಿತಿಗಾಗಿ ಗಂಟಲು ದ್ರವ ಸಂಗ್ರಹಿಸಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸಿ ಮಾಹಿತಿ ಪಡೆದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದೆ. ರೆಮ್ ಡಿಸಿಮಿರ್ ಲಸಿಕೆಯೂ ಸಹ ಕೊರತೆಯಿರುವುದಿಲ್ಲ ಕೋವಿಡ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮರ್ಪಕವಾಗಿದ್ದು ಅಗತ್ಯವಿದ್ದಲ್ಲಿ ಮಾತ್ರ ಆಕ್ಸಿಜನ್ ನೀಡಲಾಗುವುದು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಎಂ.ಕೆ.ಬಸವರಾಜ್ ಮಾತನಾಡಿದರು. ತಾಪಂನ ನಂದೀಶ್, ಶಿರಸ್ತೆದಾರ ಏಳುಕೋಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ್ ನಾ ಬಿ.ಆರ್.ಸಿ ಹನುಮಂತಪ್ಪ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ, ರಾಂಪುರ ಪಿ.ಎಸ್.ಐ ಗುಡ್ಡಪ್ಪ, ತಾಲೂಕು ಕಚೇರಿ ಸಿಬ್ಬಂದಿ ಮಂಜುನಾಥ ಹಾಗೂ ವಿವಿಧ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *