*ಕೂಡ್ಲಿಗಿ:ಶುದ್ಧ ಕುಡಿಯೋ ನೀರಿನ ಘಟಕ ದುರಸ್ಥಿಗೆ ಆಗ್ರಹ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 15ನೇವಾರ್ಡ್ ಪಶುಪಾಲನಾ ಆಸ್ಪತ್ರೆ ಹತ್ತಿರದಲ್ಲಿರುವ ಶುದ್ಧ ಕುಡಿಯೋ ನೀರಿನ ಘಟಕ ಸ್ಥಗಿತಗೊಂಡಿದ್ದು, ಕಳೆದ ಮೂರು ತಿಂಗಳಿಂದ ಕಾರ್ಯನಿರ್ವಹಿಸುತಿಲ್ಲ ಶುದ್ಧ ಕುಡಿಯೋ ನೀರಿಗಾಗಿ ಪರಾದಾಡುವಂತಾಗಿದೆ ಎಂದು ನಾಗರೀಕರು ದೂರಿದ್ದಾರೆ.
ಪಟ್ಟಣದ ಬಹುತೇಕ ಕಡೆಗಳ ನಾಗರೀಕರು ಈ ಘಟಕದ ನೀರನ್ನೆ ಇಷ್ಟಪಟ್ಟಿದ್ದರು,ಆದರೆ ಕೆಳೆದ ಮೂರು ತಿಂಗಳಿಂದ ಕಾರ್ಯನಿರ್ವಹಿಸುತಿಲ್ಲ.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪಕೃದ್ದೀನ್ ರವರು ತುಂಬಾ ಬೇಜವಾಬ್ದಾರಿ ತನದಿಂದ ವರ್ತಿಸುತ್ತಿದ್ದಾರೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೆನ್ನಾಗಿಯೇ ಕಾರ್ಯನಿರ್ವಹಿಸುತಿದ್ದ ನೀರಿನ ಘಟಕದ ಸಾಮಾಗ್ರಿಗಳನ್ನ ಬಿಡಿ ಭಾಗ ಹಾಗೂ ಯಂತ್ರಗಳನ್ನ ಬೇರೆ ಘಟಕಕ್ಕೆ ಅಳವಡಿಸಲಾಗಿದೆ ಎಂದು ಹಿರಿಯ ನಾಗರೀಕರು ದೂರಿದ್ದಾರೆ.
ಇದು ಖಂಡನೀಯ ಪಟ್ಟಣದ ಬಹುತೇಕ ನೀರಿನ ಘಟಕಗಳ ನಿರ್ವಹಣೆ ಸರಿಯಾಗಿಲ್ಲ, ಕೆಲವೊಂದು ಆರು ತಿಂಗಳು, ವರ್ಷಗಳಿಂದಲೂ ಕೆಟ್ಟು ನಿಂತಿವೆ ಆದರೆ ದುರಸ್ಥಿಗೊಳಿಸಿಲ್ಲ ಎಂದು ಪ ಪಂ ಮುಖ್ಯಾಧಿಕಾರಿ ವಿರುದ್ಧ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಸ್ಥಗಿತ ಗೊಂಡಿರುವ ಘಟಕಗಳನ್ನ ಪ್ರಾರಂಭಿಸಬೇಕು ನಿರ್ಲಕ್ಷ್ಯ ವಹಿಸಿದ್ದಲ್ಲಿ,ಪಪಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ 15ನೇ ವಾರ್ಡ್ ನಾಗರೀಕರು ಕೆಲ ಸಂಘಟನೆಗಳ ಪದಾಧಿಕಾರಿಗಳು ಈ ಮೂಲಕ ಎಚ್ಚರಿಸಿದ್ದಾರೆ.
*ಡಿ ಎಂ ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
