ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಪಕ್ಕುರ್ತಿ ಗ್ರಾಮದ ರೈತ ಧರ್ಮಣ್ಣ ಅವರು ಕಳೆದ ವರ್ಷದಲ್ಲಿ ಮಾಡಿದ ಲಾಕ್‌ಡೌನ್‌ನಿಂದ ಕನಕಾಂಬರ ಹಾಗೂ ಬಾಳೆ ಬೆಳೆ ನಷ್ಟದಿಂದ ಸುಮಾರು 20ಲಕ್ಷ ನಷ್ಟ ಅನುಭವಿಸಿದ್ದು, ಇದೀಗ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಸಂದರ್ಭದಲ್ಲಿ ಮತ್ತೇ ಲಾಕ್‌ಡೌನ್ ಮಾಡುವ ಮಾತುಗಳು ಕೇಳಿ ಬರುತ್ತಿವೆ. ಕಳೆದ ವರ್ಷದಲ್ಲಿ ಮಾಡಿದ ಲಾಕ್‌ಡೌನ್‌ನಿಂದಾಗಿ ರೈತರು, ಜನಸಾಮಾನ್ಯರು ಇಂದಿಗೂ ಸಹ ಚೇತರಿಸಿಕೊಳ್ಳಲಾರದ ಪರಿಸ್ಥಿತಿಯಲ್ಲಿದ್ದಾರೆ. ಜೀವನ ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡಬಾರದು. ಅದರ ಬದಲಿಗೆ ಪರ್ಯಾಯ ಮಾರ್ಗಗಳನ್ನು ಹುಡುಕಿ, ಅವುಗಳನ್ನು ಜಾರಿಗೊಳಿಸಬೇಕೆಂದು ಪಕ್ಕುರ್ತಿ ಗ್ರಾಮದ ರೈತ ಧರ್ಮಣ್ಣ ಮನವಿ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಪಕ್ಕುರ್ತಿ ಗ್ರಾಮದ ರೈತ ಧರ್ಮಣ್ಣ ಅವರು ಕಳೆದ ವರ್ಷದಲ್ಲಿ ಮಾಡಿದ ಲಾಕ್‌ಡೌನ್‌ನಿಂದ ಕನಕಾಂಬರ ಹಾಗೂ ಬಾಳೆ ಬೆಳೆ ನಷ್ಟದಿಂದ ಸುಮಾರು 20ಲಕ್ಷ ನಷ್ಟ ಅನುಭವಿಸಿದ್ದು, ಇದೀಗ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಸಂದರ್ಭದಲ್ಲಿ ಮತ್ತೇ ಲಾಕ್‌ಡೌನ್ ಮಾಡುವ ಮಾತುಗಳು ಕೇಳಿ ಬರುತ್ತಿವೆ. ಲಾಕ್‌ಡೌನ್ ಆದಲ್ಲಿ ರೈತರು ಬದುಕಬೇಕ ಅಥವಾ ಸಾಯಬೇಕಾ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ ಎಂದಿದ್ದಾರೆ ರೈತ ಧರ್ಮಣ್ಣ. ಲಾಕ್‌ಡೌನ್‌ನಿಂದ ಕೊರೋನಾ ನಿಯಂತ್ರಣ ಆಗುವುದಕ್ಕಿಂತ ರೈತರು, ಬಡವರು, ಜನಸಾಮಾನ್ಯರು ನಷ್ಟ ಅನುಭವಿಸಿ ಜೀವನ ನಡೆಸಲು ಸಾಧ್ಯವಾಗದೆ ನೇಣಿಗೆ ಕೊರಳೊಡ್ಡುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸರ್ಕಾರವು ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡದೇ ಬೇರೆ ಬೇರೆ ಪರ್ಯಾಯ ಮಾರ್ಗಗಳನ್ನು ಹುಡುಕಬೇಕು, ಈ ಮೂಲಕ ರೈತರ ಹಿತ ಕಾಪಾಡಬೇಕು ಎಂದು ತಿಳಿಸಿದ್ದಾರೆ. ರೈತರಿಗೆ ಅಗತ್ಯವಾಗಿರುವ ರಸಗೊಬ್ಬರಗಳ ಬೆಲೆ ಏರಿಕೆ, ಜನಸಾಮಾನ್ಯರು ಜೀವನ ನಡೆಸಲು ಬೇಕಾಗಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೀಗೆ ಪ್ರತಿಯೊಂದು ವಸ್ತುಗಳ ಬೆಲೆಗಳು ದುಬಾರಿಯಾಗುತ್ತಲೇ ಸಾಗುತ್ತಿವೆ. ಆದರೆ ರೈತರಿಂದ ಉತ್ಪನ್ನಗಳು ಖರೀದಿಸುವಾಗ ತೀರಾ ಕಡಿಮೆ ಮಟ್ಟದಲ್ಲಿ ಖರೀದಿಸುತ್ತೀರಾ ಇದು ಯಾವ ನ್ಯಾಯ? ಇದರಿಂದ ರೈತರಿಗೆ, ಬಡವರಿಗೆ, ಜನಸಾಮಾನ್ಯರಿಗೆ ಭರಿಸಲಾರದ ನಷ್ಟ.ನ ಕೊಂಡುಕೊಳ್ಳಲಾರದ ಪರಿಸ್ಥಿತಿ ಎದುರಾಗಿದೆ. ಅಗತ್ಯ ವಸ್ತುಗಳ ಬೆಲೆಗಳೆಲ್ಲಾ ಏರಿಕೆಯಾದರೆ ರೈತರು ಹೇಗೆ ಖರೀದಿಸುತ್ತಾರೆ. ಸರ್ಕಾರಗಳು ಯಾಕೆ ಬೆಲೆ ಏರಿಕೆ ನಿಯಂತ್ರಣದ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ ಶಾಲೆಗಳನ್ನೆಲ್ಲಾ ಮುಚ್ಚಿದ್ದಾರೆ, ಇದರಿಂದ ಅವರ ಶಿಕ್ಷಣಕ್ಕೆ ಕುಂದು ಬರುತ್ತದೆ. ಕೊರೋನಾ ನಿಯಂತ್ರಿಸಲು ಸರ್ಕಾರ ಬೇರೆ ಮಾರ್ಗಗಳನ್ನು ಹುಡುಕಬೇಕೆ ವಿನಹಃ ಪ್ರತಿನಿತ್ಯ ಲಾಕ್‌ಡೌನ್ ಮಾಡುವುದರಿಂದ ಯಾವುದೇ ಪ್ರಯೋಜನೆಗಳು ಆಗುವುದಿಲ್ಲ. ನಾವು ಮಾಸ್ಕ್ ಧರಿಸಿ, ಲಾಕ್‌ಡೌನ್‌ಗೆ ಸಹಕರಿಸಿದ್ದೆವು. ಅದರಿಂದ ಲಕ್ಷಾಂತರ ರೂಗಳ ನಷ್ಟವನ್ನು ಅನುಭವಿಸಿದೆವು. ಇದೀಗ ಜನಜೀವನ ಸಹಜ ಸ್ಥಿತಿಗೆ ಮರಳುವ ಈ ಸಮಯದಲ್ಲಿ ಮತ್ತೇ ಲಾಕ್‌ಡೌನ್ ಎಂದರೆ ರೈತರ ಜೀವನ ಏನಾಗಬೇಡ. ಹಾಗಾಗಿ ಸರ್ಕಾರ ಲಾಕ್‌ಡೌನ್ ಅನ್ನು ಬಿಟ್ಟು, ಬೇರೆ ಪರ್ಯಾಯ ಮಾರ್ಗಗಳನ್ನು ಹುಡುಕಿ ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
