
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ಹೋಬಳಿ ಹೊಸಹಳ್ಳಿ ನಾಡಕಚೇರಿಯಲ್ಲಿ ‘ ಡಾ. ಬಿ. ಆರ್. ಅಂಬೇಡ್ಕರ್ ರವರ 130ನೇ ಜಯಂತಿಯ ಅಂಗವಾಗಿ ಡಾ. ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ..ನಾಡಕಛೇರಿಯ ಉಪತಹಶೀಲ್ದಾರ್ ರಾದ ಚಂದ್ರ ಮೋಹನ್ .ಜಿ ನವರು ನೆರವೇರಿಸಿದರು .
ಹೊಸಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಎಂ ಹೊನ್ನೂರಪ್ಪ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ರವರು ಅವರೊಬ್ಬ ಸಮಾಜಮುಖಿ ಚಿಂತಕ, ಆಧ್ಯಾತ್ಮ ಜೀವಿ, ರಾಜಕೀಯ ಮುತ್ಸದ್ದಿ, ಕಾನೂನು – ಆರ್ಥಿಕ ತಜ್ಞ, ಅಪ್ರತಿಮ ಸಂಶೋಧಕ, ನೇರ ನುಡಿಯ ಪತ್ರಕರ್ತ, ಚಿಂತನಶೀಲ ಸಾಹಿತಿ, ಅಪ್ರತಿಮ ರಾಷ್ಟ್ರೀಯವಾದಿ ಮತ್ತು ಅಗ್ರಮಾನ್ಯ ದೇಶಭಕ್ತ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಗಾಧ ಜ್ಞಾನಿ, ಅವರು ರಚಿಸಿದ ಸಂವಿಧಾನ ಭಾರತಕ್ಕಲ್ಲದೇ ಇಡಿ ವಿಶ್ವಕ್ಕೆ ಮಾದರಿ, ಪ್ರೇರಣೆ ಹಾಗೂ ಪ್ರಜಾಪ್ರಭುತ್ವವನ್ನು ಅರ್ಥೈಸುವ ಸಾಮರ್ಥ್ಯವನ್ನು ಹೊಂದಿದ್ದು. ಹೀಗಾಗಿ ಭಾರತ ಸಂವಿಧಾನ ವಿಶ್ವ ಸರ್ವ ಶ್ರೇಷ್ಠ ಮಹಾ ಸಂವಿಧಾನ. ಆದ್ದರಿಂದ ದೇಶದಲ್ಲಿ ಇಂದು ರಾಷ್ಟ್ರಪತಿಯಿಂದ ಹಿಡಿದು ಗ್ರಾಪಂ ಸದಸ್ಯರವರೆಗೆ ಆಡಳಿತ ನಡೆಯುತ್ತಿದೆ ಎಂದರೆ ಅದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ರಚಿಸಿದ ಸಂವಿಧಾನದಿಂದ ಎಂಬುದನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಂಡು ಗೌರವದಿಂದ ನಡೆಯಬೇಕಾಗಿದೆ.ಎಂದು ತಿಳಿಸಿದರು
ಸಿ. ಬಿ. ನಾಗೇಶ್ ಮಾತಾನಾಡಿ ಡಾ. ಬಿ. ಆರ್. ಅಂಬೇಡ್ಕರ್ ರವರ ಅವರು ಕೈಗೊಂಡ ಹಲವಾರು ಜನಪರ ಕಾಳಜಿ ನಮ್ಮಗೆಲ್ಲರಿಗೂ ಮಾದರಿ, ಅವರ ವೈಚಾರಿಕ ಕ್ರಾಂತಿ ಹಾಗೂ ಅನ್ಯಾಯ, ಅಸಮಾನತೆ ಮತ್ತು ಶೋಷಣೆಗಳ ವಿರುದ್ಧದ ಹೋರಾಟ ಎಂದೆಂದಿಗೂ ಈ ದೇಶವು ಮರೆಯುವಂತಿಲ್ಲ.,ಎಂದು ನುಡಿದರು ,
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಸದಸ್ಯರಾದ ಗುರುಸಿದ್ದನಗೌಡ,ಗ್ರಾಮ ಪಂಚಾಯತಿ ಅಧ್ಯಕ್ಷರಾದ ನೀಲಮ್ಮ ಬೊಮ್ಮಣ್ಣ ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ಕಲಾವತಿ ಪೋಟೋ ಸಿದ್ದಲಿಂಗಪ್ಪ, ಪೀತಾಂಬರ ,ಮತ್ತು ಮುಖಂಡರಾದ ಮಾರಪ್ಪ ಕೆ,ಮಾರಣ್ಣ ಹೊಸಹಳ್ಳಿ ,ಬಸವರಾಜ ,ರಜನಿಕಾಂತ
, ಗ್ರಾಮಲೆಕ್ಕಾಧಿಕಾರಿಗಳ ಆದ ಶ್ರೀನಿವಾಸ ಕೊಂಡಿ, ಗ್ರಾಮ ಸಹಾಯಕರಾದ ತಳವಾರ ಬೋರಪ್ಪ,ಶಾಂತರಾಜ ಲೋಕಿಕೆರೆ ಮುಂತಾದವರು. ಪ್ರಮುಖರು ಉಪಸ್ಥಿತರಿದ್ದರು…
ವರದಿ.ಕೆ ಎಸ್ ವೀರೇಶ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
