ವರದಿ. ದುಗ್ಗಪ್ಪ
ಇಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಲಾಪುರ್ ಮತ್ತು ಭೂತಲದಿನ್ನಿ ಗ್ರಾಮದ ಭಕ್ತಾದಿಗಳಿಂದ ಶ್ರೀಶೈಲ ಬ್ರಹ್ಮರಂಬ ಮಲ್ಲಿಕಾರ್ಜುನ ಹನ್ನೊಂದನೇ ವರ್ಷದ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಮಲ್ಲಿಕಾರ್ಜುನ ದರ್ಶನಕ್ಕಾಗಿ ಯುವಕರು,ದೊಡ್ಡವರು, ಮಹಿಳೆಯರು,ಹೀಗೆ ನೂರಾರು ಸಂಖ್ಯೆಯಲ್ಲಿ ಯಾತ್ರಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ತಂಡ ತಂಡವಾಗಿ ದಿನಕ್ಕೆ ಕನಿಷ್ಠ 40ರಿಂದ 60 ಕಿಲೋಮೀಟರ್ ವರೆಗೆ ನಡೆದು 8 ಅಥವಾ 9ನೇ ದಿನಕ್ಕೆ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪಾತ್ರರಾಗುವರು. ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಉತ್ತರ ಕರ್ನಾಟಕದ ಭಾಗದಿಂದ ಭಕ್ತರು ಪಾದಯಾತ್ರೆಗೆ ಹೋಗುತ್ತಾರೆ. ಜಾತಿ ಭೇದ, ಬಡವ ಬಲ್ಲಿದ ,ಎಂಬ ಭೇದವಿಲ್ಲದೆ ಎಲ್ಲಾ ವರ್ಗದವರು ಭಾಗವಹಿಸಿದರು . ಪಾದಯಾತ್ರೆಯಲ್ಲಿ ಭಾಗವಹಿಸಿದ ಯಾತ್ರಿಕರನ್ನು ಕೇಳಿದಾಗ ದಾರಿಯುದ್ದಕ್ಕೂ ಅರವಟ್ಟಿಗೆ, ಚಹಾ ,ನಾಷ್ಟ ,ಮಧ್ಯಾಹ್ನದ ಊಟ ,ರಾತ್ರಿ ಊಟ ,ಜೊತೆಗೆ ಹಣ್ಣು-ಹಂಪಲು,ನಡಿಗೆಯ ದಣಿವಾರಿಸಿಕೊಳ್ಳಲು ಮಜ್ಜಿಗೆ, ನೀರು, ಉಚಿತವಾಗಿ ಒದಗಿಸುವವರು,ನಡಿಗೆಯಿಂದ ಗಾಯವಾದ ಯಾತ್ರಿಗಳ ಪಾದಗಳಿಗೆ ಮಸಾಜ್ ಮಾಡಿ ನೆರವಾಗುವವರು ಎಂದು ತಿಳಿಸಿದರು.