ವರದಿ. ಮಂಜುನಾಥ್. ಎನ್

ಬಳ್ಳಾರಿ: (ವಿಜಯನಗರ) ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಪೋಲಿಸ್ ಶ್ರೀ ಹೆಚ್. ನಾಗರಾಜ್ ಪಿ.ಎಸ್.ಐ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ಇಂದು 31-3-2021 ಸಂಜೆ ಸಮಯದಲ್ಲಿ ಬೀಳ್ಕೊಡುಗೆ ಸಮಾರಂಭ ಇಂದು ಪೊಲೀಸ್ ಆವರಣದಲ್ಲಿ ನಡೆಸಲಾಯಿತು ಶ್ರೀ ನಾಗರಾಜ್ ಪಿಎಸ್ಐ ಅವರು ಹುಟ್ಟಿದ ದಿನಾಂಕ 10-3-1961, ಸೇವೆಗೆ ಸೇರಿ ದಿನಾಂಕ 23-5-1981, ಹುಟ್ಟಿದ ಊರು ಹೊಸಕೆರೆ ಜಗಳೂರು ತಾಲೂಕು, ತಂದೆ ಹೆಸರು ಕೆಂಚಲಿಂಗಯ್ಯ ತಾಯಿ ದಿ” ನಾಗಮ್ಮ , ಬಡೇಲಡಕು ಗ್ರಾಮದಲ್ಲಿ 1 ರಿಂದ 7 ತರಗತಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ. ನಂತರ ಪ್ರೌಢ ಶಿಕ್ಷಣವನ್ನು ಕೂಡ್ಲಿಗಿ ನಗರದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಪ್ರೌಢ ಶಾಲೆಯಲ್ಲಿ ಮುಗಿಸಿದರು. ನಂತರ ಪದವಿ ಪೂರ್ವ ಮತ್ತು ಪದವಿ ಶಿಕ್ಷಣ ಕೂಡ್ಲಿಗಿಯಲ್ಲಿ ಮುಗಿಸಿದರು. ಸುಧಾರಣವಾದ ಸೇವೆಯನ್ನು ಪಾದರ್ಪಣೆ ಮಾಡಲು ಒಂದು ಸೇವೆಯನ್ನು ಮಾಡಿ. ಬ್ರೂಸ್ ಪೇಟೆ, ತದನಂತರ ಸಂಡೂರು ತಾಲೂಕಿನ ಹೊಸಹಳ್ಳಿಯಲ್ಲಿ 4 ವರ್ಷಗಳ ಕಾಲ ಸುದೀರ್ಘವಾಗಿ ಸೇವೆಸಲ್ಲಿಸಿದರು, ನಂತರ ಸಿರಗುಪ್ಪದಲ್ಲಿ 3 ವರ್ಷಗಳ ಕಾಲ ಅರಕ್ಷ ರಾಗಿ ಸೇವೆಸಲ್ಲಿಸಿದ್ದರು, ನಂತರ ಬಳ್ಳಾರಿ ನಗರ 10 ವರ್ಷ ನಿರಂತರವಾಗಿ ಸೇವೆ ಸಲ್ಲಿಸಿದರು, ನಂತರ ಕೊಟ್ಟೂರು 5 ವರ್ಷ, ಕೂಡ್ಲಿಗಿ 5 ವರ್ಷ, ನಂತರ ನಮ್ಮ ಸುತ್ತಮುತ್ತಲಿನ ದೇವತೆಗಳ ಆಶೀರ್ವಾದದಿಂದ, ಗುರುಹಿರಿಯರ ಆಶೀರ್ವಾದ, ತಂದೆತಾಯಿಗಳ ಆಶೀರ್ವಾದ, ದೊಂದಿಗೆ ಪೊಲೀಸ್ ಇಲಾಖೆಯ ಕಾನಹೊಸಹಳ್ಳಿ ಯಲ್ಲಿ ಪಿಎಸ್ಐ ಆಗಿ ಸೇವೆಯನ್ನು ನಿರಂತರವಾಗಿ ಸೇವೆ ಸಲ್ಲಿಸಿದರು. ಕರ್ತವ್ಯ ನಿರ್ವಹಿಸಿದ ಅವಧಿ ದಿನಾಂಕ 4-7-2019 ರಿಂದ ವಯೋ ನಿವೃತ್ತಿ ಹೊಂದಿದ ದಿನಾಂಕ 31-3-2021, 21 ತಿಂಗಳು ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿವಾರಿಸಿ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಮಾಡಲಾಯಿತು. ಠಾಣೆಯ ಪೊಲೀಸ್ ಸಿಬ್ಬಂದಿ ವರ್ಗದವರು ಮಾತನಾಡಿ. ವರ್ಗಾಹಣೆಗೊಂಡ ನಂತರವೂ ಕೆಲ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ನೆನಪಿನಲ್ಲಿ ಉಳಿದಿರುತ್ತದೆ.

ಸದಾ ಸಾರ್ವಜನಿಕರ ಜೊತೆಗೆ ಇರುವ ಪೋಲಿಸರದ್ದು ವೃತ್ತಿಯ ಜೊತೆಗೆ ಸೇವೆಯನ್ನು ಮಾಡುವ ಕಾರ್ಯವಾಗಿದೆ ಎಂದರು. ಪೋಲಿಸರು ಸಾರ್ವಜನಿಕರ ಜೀವನದ ಜೊತೆಗೆ ಸಾಂಸಾರಿಕ ಜೀವನವನ್ನು ಉತ್ತಮವಾಗಿಟ್ಟುಕೊಳ್ಳಿ. ವೃತ್ತಿಯ ಒತ್ತಡದಿಂದ ಕುಟುಂಬದವರೊಂದಿಗೆ ಕಾಲ ಕಳೆಯುವುದು ಕಡಿಮೆ, ಪೋಲಿಸ್ ವೃತ್ತಿಯಲ್ಲಿ ತೊಡಗಿಕೊಂಡು ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಲು ಸಾಧ್ಯವಿದ್ದು ಸಿಬ್ಬಂದಿಗಳ ಆ ನಿಟ್ಟಿನಲ್ಲಿ ಗಮನ ಹರಿಸಿ ಎಂದರು. ಇಲಾಖೆಯಲ್ಲಿ ಸೇವೆ ಸಲ್ಲಿಸಿದವರನ್ನು ಇಲಾಖೆಯು ಎಂದೂ ಮರೆಯುವುದಿಲ್ಲ. ತಮಗೆ ವಹಿಸಿದ ಕೆಲಸವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿ ಅಧಿಕಾರಿಗಳ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಹಿರಿಯ ಅಧಿಕಾರಿ ಪ್ರೋತ್ಸಾಹ ಹಾಗೂ ಸಹದ್ಯೋಗಿಗಳ ಸಹಕಾರವನ್ನು ಮರೆಯಲಾರೆ ಎಂದರು. ಈ ಕಾರ್ಯಕ್ರಮದಲ್ಲಿ ಪೋಲಿಸ್ ಪಿಎಸ್ಐ ಅಪರಾಧ ವಿಭಾಗ ನಾಗರತ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಎಚ್ ರೇವಣ್ಣ ಹುಡೇಂ ಜಿ.ಪಂ ಕ್ಷೇತ್ರ, ಆರ್ ಜೆ ಗೌಡ್ರು ಹಾರಕಬಾವಿ, ಶೇಖರಪ್ಪ, ಕೆ ಚೆನ್ನಪ್ಪ ಬಿಜೆಪಿ ಮಂಡಲ ಅಧ್ಯಕ್ಷರು, ಕೆ ಎನ್ ಭೀಮಣ್ಣ, ಜಿ ಓಬಣ್ಣ ತಾ.ಪಂ ಸದಸ್ಯರು ಜಮ್ಮೋಬನಹಳ್ಳಿ, ಗುಂಡುಮುಣುಗು ತಿಪ್ಪೇಸ್ವಾಮಿ, ಕೃಷ್ಣ ನಾಯಕ್, ಮಲ್ಲಿಕಾರ್ಜುನ್ ಆಲೂರು, ಹಾಗೂ ಡಿಎಸ್ಎಸ್ ದಲಿತ ಜಿಲ್ಲಾ ಸಂಘದ ಸಂಚಾಲಕರ ಗಂಗಧರ್, ಹಾಗೂ ಡಿಎಸ್ಎಸ್ ತಾಲೂಕು ಸಂಘದ ಸಂಚಾಲಕರು ಡಿ.ಎಂ ಈಶ್ವರಪ್ಪ ಸಿದ್ದಾಪುರ, ಕುಮಾರ್, ಚೌಡೇಶ್, ಹನುಮಂತಪ್ಪ, ಸಂಘದ ಸಂಚಾಲಕರು, ಹಾಗೂ ಮಂಜುನಾಥ್ ಎಚ್ ಹೂಡೇಂ ಪತ್ರಕರ್ತರು, ವೀರೇಶ್ ಹೊಸಹಳ್ಳಿ ಪತ್ರಕತ್ರರ, ರಂಗನಾಥ್ ಪತ್ರಕರ್ತರು, ಪಾಪ ನಾಯಕ ತಾ.ಪಂ ಸದಸ್ಯರು ಹುಡೇಂ, ಜಗದೀಶ ಎಪಿಎಂಸಿ ಸದಸ್ಯರು ಹುಡೇಂ, ಚೆನ್ನಪ್ಪ, ಶ್ರೀನಿವಾಸ್, ಹೆಚ್ಚು ನರೇಶ್, ಚಂದ್ರಮೌಳಿ, ಡಿವೈಎಸ್ಪಿ ಮಂಜುನಾಥ್ ಎಂ.ಬಿ ಅಯ್ಯನಹಳ್ಳಿ, ಗುರುಸಿದ್ಧ ಗೌಡ್ರು, ಪೊಲೀಸ್ ಸಿಬ್ಬಂದಿ ವರ್ಗದವರು, ಎಲ್ಲಾ ಸಂಘದ ಮುಖಂಡರು, ಕಾನ ಹೊಸಹಳ್ಳಿಯ ಪೊಲೀಸ್ ಠಾಣೆಯ ವ್ಯಾಪ್ತಿಯ 83 ಹಳ್ಳಿಯ ನಾಗರಿಕರು ಉಪಸ್ಥಿತರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
