ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ವಿರುಪಾಪುರ:ಬಾಲ್ಯ ವಿವಾಹ ನಿಷೇಧ ಕಾಯ್ದೆ,ಕಾನೂನು ಅರಿವು*-
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ವಿರುಪಾಪುರ ಗ್ರಾಮದಲ್ಲಿ,ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ,ಸ್ನೇಹ ಸಂಸ್ಥೆ ಸಹಯೋಗದಲ್ಲಿ.ಬಾಲ್ಯ ವಿವಾಹ ನಿಷೇಧ ಜಾಯ್ದೆ ಕುರಿತು ಕಾನೂನು ಅರಿವು ನೆರವು ಸಹಿಪ್ರಾ ಶಾಲಾವರಣದಲ್ಲಿ ಕಾರ್ಯಕ್ರಮ ಜರುಗಿತು,ಸಿವಿಲ್ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕೆಯವರು ಕಾರ್ಯಕ್ರಮ ಉದ್ಘಾಟಸಿದರು.ಎಲ್ಲರೂ ಶಿಕ್ಷಣ ಹೊಂದಬೇಕು ಜೊತೆಗೆ ಕಾನೂನು ಅರಿವು ಹೊಂದಬೇಕು,ಅಂದಾಗ ಮಾತ್ರ ಬಾಲ್ಯ ವಿವಾಹ ದಂತಹ ಸಾಮಾಜಿಕ ಪಿಡುಗುಗಳಿಂದ ಮುಕ್ತಿ ಸಾಧ್ಯ.ನ್ಯಾಯಾಲಯ ಇಲಾಖೆಯ ಉಚಿತ ಕಾನೂನು ನೆರವಿನ ಯೋಜನೆಯನ್ನ ಸರ್ವರೂ ಸದುಪಯೋಗ ಪಡೆಸಿಕೊಳ್ಳಬೇಕಿದೆ ಎಂದರು.ಹಿರಿಯ ಮಹಿಳಾ ವಕೀಲರಾದ ಕೆ.ಹೆಚ್.ಎಮ್.ಶೈಲಜಾ ರವರು ಬಾಲ್ಯ ವಿವಾಹ ಕಾಯ್ದೆ ಕುರಿತು ಮಾತನಾಡಿದರು.ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ ಮಾತನಾಡಿದರು,ಗ್ರಾಪಂ ಅಧ್ಯಕ್ಷ ಬನ್ಜಿ ಭರಮಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ದೇವದಾಸಿ ಪುನರ್ ವಸತಿ ನಿಗಮದ ವಿಶ್ವನಾಥ ದೇವದಾಸಿ ನಿರ್ಮೂಲನೆ ಕಾಯ್ದೆ ಕುರಿತು ಮಾತನಾಡಿದರು,ಗ್ರಾಮ ಪಂ ಅಭಿವೃದ್ಧಿ ಅಧಿಕಾರಿ ಭಾಗ್ಯಮ್ಮ ಹಾಗೂ ಜನಪ್ರತಿನಿಧಿಗಳು ವೇದಿಕೆಯಲ್ಲಿದ್ದರು.ಸ್ನೇಹ ಸಂಸ್ಥೆಯ ಎಸ್.ರಾಧ ಸ್ವಾಗತಿಸಿದರು, ಹೆಚ್.ಗೀತಾ ನಿರೂಪಿಸಿದರು.ಟಿ.ನೇತ್ರಾವತಿ ವಂದಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
