ವರದಿ. ಎಂ. ಕೆ. ಮೂರ್ತಿ

ಬಾಗೇಪಲ್ಲಿ..
ಏಡ್ಸ್ ಅಥವಾ ಎಚ್ಐವಿ ರೋಗದ ಬಗ್ಗೆ ಅಥವಾ ಸೋಂಕು ಪೀಡಿತರ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಇದು ನಿವಾರಣೆ ಆಗದ ಖಾಯಿಲೆಯಾಗಿರುವುದರಿಂದ ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಬಾಗೇಪಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸಿ.ಎನ್.ಸತ್ಯನಾರಾಯಣ ರೆಡ್ಡಿ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಸಹಯೋಗದಲ್ಲಿ ಇಂದು ಪಟ್ಟಣದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಏಡ್ಸ್ ಬಗ್ಗೆ ಮನೆ ಮನೆಗೆ ಜನ ಜಾಗೃತಿ ಮೂಡಿಸಲು ಒಂದು ದಿನದ ಆಶಾಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಏಡ್ಸ್ ಅಥವಾ ಎಚ್ಐವಿ ರೋಗದ ಬಗ್ಗೆ ಅಥವಾ ಸೋಂಕು ಪೀಡಿತರ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಇದು ನಿವಾರಣೆ ಆಗದ ಖಾಯಿಲೆಯಾಗಿರುವುದರಿಂದ ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಪ್ರತಿಪಾದಿಸಿದರು.ಎಚ್ಐವಿ ಸೋಂಕಿತರನ್ನು ಸಮಾಜದ ಸಹಜ ಜನರಂತೆ ಪರಿಗಣಿಸಬೇಕು. ಅವರನ್ನು ಅಸಹಜವಾಗಿ ನಡೆಸಿಕೊಳ್ಳುವುದು ಕಾನೂನು ಪ್ರಕಾರವೂ ತಪ್ಪಾಗಿದ್ದು ಈ ವಿಚಾರದಲ್ಲಿ ಮಾನವೀಯತೆ ನಡಾವಳಿಗಳು ಮುಖ್ಯ ಎಂದರು. ಏಡ್ಸ್ ರೋಗ, ರೋಗ ನಿರೋಧಕವನ್ನು ಕಡಿಮೆ ಮಾಡುವ ಕಾಯಿಲೆಯಷ್ಟೇ. ಸೋಂಕಿತರು ಸತ್ವಭರಿತ ಆಹಾರ ಕ್ರಮ ಮತ್ತು ಜೀವನ ನಿರ್ವಹಣೆಯಿಂದ ಹೆಚ್ಚು ವರ್ಷಗಳು ಸಹಜವಾಗಿ ಬದುಕು ನಡೆಸಬಹುದಾಗಿದೆ ಎಂದರು.
ಏಡ್ಸ್ ರೋಗದ ಬಗ್ಗೆ ಎಚ್ಚರಿಕೆಯೇ ಮುಖ್ಯವಾಗಿದ್ದು, ಸೋಂಕಿತರನ್ನು ದೂರ ಇಡುವ ಅವಶ್ಯಕತೆ ಇಲ್ಲ ಎಂದರು. ಏಡ್ಸ್ ಅಥವಾ ಎಚ್ಐವಿ ನಿಯಂತ್ರಿಸಬಹುದಾದ ಕಾಯಿಲೆ ಆಗಿರುವುದರಿಂದ ಸಮುದಾಯದ ಸಹಕಾರವೂ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಸತ್ಯನಾರಾಯಣ ರೆಡ್ಡಿ, ಸುಭಾನ್ ಸಾಬ್,ಸರಸ್ವತಮ್ಮ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.
ಗೋಪಾಲ ರೆಡ್ಡಿ ಪತ್ರಕರ್ತರು ಬಾಗೇಪಲ್ಲಿ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
