;

ಈ ಬಾರಿಯ ರಾಜ್ಯ ಬಜೆಟ್, ನಲ್ಲಿ ಯಾರಿಗೆ ಏನೂ ಸಿಕ್ತು? ಹೇಗಿದೆ ನೋಡಿ ಹೈಲೆಟ್ಸ್…!!!

ವರದಿ.ನಳಿನಿ ಬೆಂಗಳೂರು

ಬೆಂಗಳೂರು: ಕರೋನಸಂಕಷ್ಟದ ನಡುವೆ ಸಿಎಂ ಬಿಎಸ್‌ ಯಡಿಯ್ಯೂರಪ್ಪನವರು ಇಂದು 2021-2022ನೇ ಸಾಲಿನ ಬಜೆಟ್‌ ಅನ್ನು ಮಂಡನೆ ಮಾಡಿದ್ದಾರೆ. ಈ ನಡುವೆ ಇಂದು ಮಂಡನೆಯಾದ ಬಜೆಟ್‌ನ ಪ್ರಮುಖಾಂಶಗಳು ಹೀಗಿದೆ.

  • ಆಯವ್ಯಯ ಗಾತ್ರ (ಸಂಚಿತ ನಿಧಿ)- 2,46,207 ಕೋಟಿ ರೂ.
  • ಒಟ್ಟು ಸ್ವೀಕೃತಿ- 2,43,734 ಕೋಟಿ ರೂ.; ರಾಜಸ್ವ ಸ್ವೀಕೃತಿ- 1,72,271 ಕೋಟಿ ರೂ.; ಸಾರ್ವಜನಿಕ ಋಣ 71,332 ಕೋಟಿ ರೂ. ಮತ್ತು ಬಂಡವಾಳ ಸ್ವೀಕೃತಿ 71,463 ಕೋಟಿ ರೂ.
  • ಒಟ್ಟು ವೆಚ್ಚ- 2,46,207 ಕೋಟಿ ರೂ.; ರಾಜಸ್ವ ವೆಚ್ಚ – 1,87,405 ಕೋಟಿ ರೂ.; ಬಂಡವಾಳ ವೆಚ್ಚ 44,237 ಕೋಟಿ ರೂ. ಹಾಗೂ ಸಾಲ ಮರುಪಾವತಿ 14,565 ಕೋಟಿ ರೂ.

2021-22 ನೇ ಸಾಲಿನ ಹೊಸ ಘೋಷಣೆಗಳು
ಮಹಿಳಾ ದಿನಾಚರಣೆ ವಿಶೇಷ

  • ಉದ್ಯೋಗಸ್ಥ ಮಹಿಳೆಯರ ಅನುಕೂಲಕ್ಕಾಗಿ ಬೆಂಗಳೂರು ಮತ್ತು ಇತರ
  • ಮಹಾನಗರಗಳಲ್ಲಿರುವ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರಗಳನ್ನಾಗಿ ಉನ್ನತೀಕರಣ; ಜಿಲ್ಲಾ ಕೇಂದ್ರಗಳಲ್ಲಿ ತಲಾ ಎರಡು ಪ್ರಮುಖ ಸರ್ಕಾರಿ
  • ಕಚೇರಿಗಳಲ್ಲಿ ಶಿಶುಪಾಲನಾ ಪಾಲನ ಕೇಂದ್ರ ತೆರಯಲು ಕ್ರಮ
  • ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಶೇ. 4ರ ರಿಯಾಯಿತಿ
  • ಬಡ್ಡಿ ದರದಲ್ಲಿ ಮಹಿಳಾ ಅಭಿವೃದ್ಧಿ ನಿಗಮ/ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ 2 ಕೋಟಿ ರೂ. ವರೆಗೆ ಸಾಲ ಸೌಲಭ್ಯ.
  • ‘ಸಂಜೀವಿನಿ’ ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ಆರು ಸಾವಿರ ಸಣ್ಣ ಉದ್ಯಮ ಸ್ಥಾಪನೆಗೆ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಬೆಂಬಲ; 60 ಸಾವಿರ ಮಹಿಳೆಯರಿಗೆ ಅನುಕೂಲ.
  • ಮಹಿಳೆಯರ ಸಣ್ಣ ಉದ್ಯಮಗಳಿಗೆ ತಾಂತ್ರಿಕ ನೆರವು. 2,260 ಕಿರು ಉದ್ದಿಮೆಗಳ ಮೂಲಕ 25 ಸಾವಿರ ಮಹಿಳೆಯರಿಗೆ ಉತ್ತೇಜನ.
  • ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು, ವಿಭಾಗ ಮಟ್ಟದಲ್ಲಿ ವಾರ್ಷಿಕ ಮೇಳ ಆಯೋಜನೆ ಹಾಗೂ ಇ-ಮಾರುಕಟ್ಟೆ ಸೌಲಭ್ಯ ಜಾರಿ.
  • ಬೆಂಗಳೂರಿನಲ್ಲಿ ಗಾರ್ಮೆಂಟ್ ಉದ್ಯಮದ ಮಹಿಳಾ ಕಾರ್ಮಿಕರಿಗೆ 30 ಕೋಟಿ ರೂ. ವೆಚ್ಚದಲ್ಲಿ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಪಾಸ್ ನೀಡುವ ‘ವನಿತಾ ಸಂಗಾತಿ’ ಯೋಜಗೆ ಚಾಲನೆ.
  • ಮಹಿಳೆಯರು ಉದ್ಯೋಗ ಕೈಗೊಳ್ಳಲು ಪೂರಕ ವಾತಾವರಣ ನಿರ್ಮಾಣಕ್ಕಾಗಿ ವಿವಿಧ ನಿಯಮಾವಳಿಗಳ ಮರು ಪರಿಶೀಲನೆ.
  • ಮಹಿಳಾ ಅಯವ್ಯಯ ಮಕ್ಕಳ ಆಯವ್ಯಯವನ್ನು ಪಂಚಚಾಯತ್
    ರಾಜ್ ವ್ಯವಸ್ಥೆಯಲ್ಲಿ ಅಳವಡಿಸಲು ಕ್ರಮ.
  • ಸೇಫ್ ಸಿಟಿ ಯೋಜನೆಯಡಿ ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿ 7,500 ಕ್ಯಾಮರಾ ಅಳವಡಿಕೆ; ತಂತ್ರಜ್ಞಾನ ಆಧಾರಿತ ಇ-ಬೀಟ್ ಮೂಲಕ ರಾತ್ರಿ ಗಸ್ತನ್ನು ತೀವ್ರಗೊಳಿಸಲು ಕ್ರಮ
  • ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ನೆರವು ಹಾಗೂ
    ಮಾರ್ಗ ದರ್ಶನ ನೀಡಲು ನಿಮ್ಹಾನ್ಸ್ ಮತ್ತು ರಾಸ್ಟ್ರೀಯ ಕಾನೂನು
    ಶಾಲೆಯ ಸಹಕಾರೊಂದಿಗೆ ಸೇವಾ ಸಂಸ್ಥೆ ಸ್ಥಾಪನೆ.
  • · ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಲೈಸೆನ್ಸ್‌ ಪಡೆದ ಮಹಿಳೆಯರಿಗೆ ಪ್ರಾಂಗಣದಲ್ಲಿನ ನಿವೇಶನ, ಗೋದಾಮು, ಅಂಗಡಿ, ಅಂಗಡಿ ಗೋದಾಮುಗಳ ಹಂಚಿಕೆಯಲ್ಲಿ ಶೇ. 10ರಷ್ಟು ಮೀಸಲಾತಿ.
  • ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಆರು ತಿಂಗಳ ಮಕ್ಕಳ ಆರೈಕೆ ರಜೆ
    ಸೌಲಭ್ಯ.
  • ಮಹಿಳಾ ವಾಣಿಜ್ಯೋದ್ಯಮಿಗಳನ್ನು ಬೆಂಬಲಿಸಲು, ಐದು ಕೋಟಿ ರೂ. ವೆಚ್ಚದಲ್ಲಿ Elevate Women Entrepreneurship ಕಾರ್ಯಕ್ರಮ ಜಾರಿ
  • ರಾಜ್ಯದ ಸ್ವ-ಸಹಾಯ ಗುಂಪುಗಳು ವು ತ್ತು ಅವುಗಳ ಒಕ್ಕೂಟವವನ್ನೂ ಬಲಪಡಿಸಲು ಸ್ವಸಹಾಯ ಗುಂಪುಗಳ ನೀತಿ ಜಾರಿ; ಎಲ್ಲಾ ಸ್ವ ಸಹಾಯ ಗುಂಪುಗಳನ್ನು ಜೀವನೋಪಾಯ ಅಭಿಯಾನದ ವ್ಯಾಪ್ತಿಗೆ ತರಲು ಕ್ರಮ.
  • ಮುಖ್ಯಮಂತ್ರಿಗಳ ನೇರ ಮೇಲ್ವಿಚಾರಣೆಯಲ್ಲಿ ‘ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣ ಅಭಿಯಾನ’ಕ್ಕೆ ಚಾಲನೆ.
  • ಮಹಿಳಾ ಉದ್ದೇಶಿತ ಯೋಜನೆಗಳಿಗೆ 37,188 ಕೋಟಿ ರೂ . ಅನುದಾನ.
  • ವಲಯ 1: ಕೃಷಿ ಮತ್ತು ಪೂರಕ ಚಟುವಟಿಕೆಗಳು ಸಾವಯವ ಕೃಷಿ ಉತ್ತೇಜನಕ್ಕೆ 500 ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ಜಾರಿ.
  • ವಿಜಯಪುರ ಜಿಲ್ಲೆ ಇಟ್ಟಂಗಿಹಾಳ ಗ್ರಾಮದಲಿಆತ್ಮನಿರ್ಬರಬಾ ರತ ಅಭಿವೃದ್ದಿಯೋಜನೆಯಡಿ ಆಹಾರ ಪಾಕರ್್ ಸ್ಥಾಪನೆ.
  • ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ರೆ ತರ ಮಕ್ಕಳಿಗೆ ಇರುವ ಮೀಸಲಾತಿ ಶೇ.50ಕ್ಕೆ ಹೆಚ್ಚಳ.
  • ಕೃಷಿ ಯಾಂತ್ರೀಕರಣ ಯೋಜನೆಯಡಿ ಸಣ್ಣ ಟ್ಯ್ರಾಕ್ಟರ್ಗಳಿಗೆ ನೀಡುತ್ತಿದ್ದ ಸಹಾಯಧನ 25-45 HP ಕ್ಟರ್ಗಳಿಗೆ ವಿಸ್ತರಣೆ.
  • ರಾಷ್ಟ್ರೀಯ ಇ-ಮಾರುಕಟ್ಟೆ ಪ್ರೈವೇಟ್ ಲಿಮಿಟೆಡ್ ಮೂಲಕ ಸಾವಯವ ಮತ್ತು ಸಿರಿಧಾನ್ಯಗಳ ವೈಜ್ಞಾನಿಕ ಮಾರಾಟಕ್ಕೆ ಅವಕಾಶ
  • ಮುಂದಿನ 5 ವರ್ಷಗಳಲ್ಲಿ 75 ಕೋಟಿ. ವೆಚ್ಚದ ಲ್ಲಿ ರಾಜ್ಯದ ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ ಕಾರ್ಯಕ್ರಮ 2021-22ನೇ ಸಾಲಿನಲ್ಲಿ 10 ಕೋಟಿ ರೂ. ಅನುದಾನ
  • ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಆಹಾರ ಸಂಸ್ಕರಣೆ ಹಾಗೂ ಕೊಯ್ಲೋತ್ತರ ನಿರ್ವ ಹಣಾ ಘಟಕಗಳಿಗೆ ನೀಡುವ ಶೇ. 35 ರಷ್ಟು ಸಹಾಯಧನವ ನ್ನು ಶೇ. 50ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರದಿಂದ ಶೇ. 15 ರಷ್ಟು ಹೆಚ್ಚುವರಿಸಹಾಯಧನ; 50 ಕೋಟಿ ರೂ. ಗಳ ಅನುದಾನ.
    • ಹೊಸ ತಂತ್ರಜ್ಞಾನ, ಹೂೆ ಸ ಬೆಳೆ ತಳಿ, ಉತ್ತಮ ನಿರ್ವಹಣಾ ಪದ್ಧತಿಗಳನ್ನು ರೈತರಿಗೆ ಪರಿಚಯಿಸಲು ಪ್ರಾತ್ಯಕ್ಷಿಕಾ ಕ್ಷೇತ್ರಗಳ ಅಭಿವೃದ್ಧಿ
    • ರೈತ ಉತ್ಪಾದಕರ ಸಂಸ್ಥೆಗಳು ಮಾರಾಟ ಮಾಡುವ ತೋಟಗಾರಿಕೆ ಉತ್ಪನ್ನಗಳಿಗೆ ಬ್ರಾಂಡ್ ವ್ಯಾಲ್ಯೂ ಕಲ್ಪಿಸಲು ಹಾಗೂ ಉತ್ತಮ ಮಾರುಕಟ್ಟೆ ಸಂಪರ್ಕ ಒದಗಿಸಲು ಕ್ರಮ.
    • ರೈತನು ವರ್ಷವಿಡೀ ವರಮಾನ ಪಡೆಯಲು ಸಮಗ್ರ ಕೃಷಿ ಪದ್ಧತಿ ಕಾರ್ಯಕ್ರಮ ಅನುಷ್ಠಾನ.
    • ಅಡಿಕೆ ಬೆಳಗಾರರನ್ನು ಬಾಧಿಸುತ್ತಿರುವ ಹಳ ದಿ ಎಲೆ ರೋಗದ ಕುರಿತ ಸಂಶೋಧನೆ ಹಾಗೂಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು 25 ಕೂೆ ಟಿ ರೂ.
    • ಹೊಸ ಹೆಬ್ರಿಡ್ ಬೀಜ ನೀತಿ ಜಾರಿಗೆ ಕ್ರಮ. ಸುವಾಸನೆಯುಕ್ತ ಮತ್ತು ವೈದ್ಯಕೀಯ ಗಿಡಗಳು, ಹಣ್ಣು ಹಂಪಲು, ತರಕಾರಿಗಳು ಮತ್ತು ಸಂಬಾರ ಪದಾರ್ಥಗಳಿಗಾಗಿ ಹೊಸ ಕೃಷಿ ರಫ್ತು ವಲಯ ಸ್ಥಾಪನೆ ತೋಟಗಾರಿಕಾ ಬೆಳೆಗಳ ರಫ್ತಿಗೆ ರಾಜ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪೂರಕ ಸೌಲಭ್ಯ.
    • ಹಣ್ಣು ಮತ್ತು ತರಕಾರಿ ಬೆಳೆಗಳ ಮೌಲ್ಯ ವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಬೆಳೆಗಾರರಿಗೆ ತರಬೆ ತಿ ವು ತ್ತು ತಾಂತ್ರಿಕ ಬೆಂಬಲ
    • ಕ್ಷಿ ಕೃಷಿಯ ಉತ್ತೇಜನಕ್ಕೆ ಕನರ್ಾಟಕ ದ್ರಾಕ್ಷಾರಸ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿಯನ್ನಾಗಿ ಪುನರ್ ರಚಿಸಲು ಕ್ರಮ.
    • ಬೆಂಗಳೂರಿನ ಓಕಳೀಪುರಂನಲ್ಲಿ ರೇಷ್ಮೆ ಇಲಾಖೆಯ ಎಲ್ಲ ಕಛೇರಿಗಳನ್ನು ಒಂದೇ ಸೂರಿನಡಿ ತರಲು, 150 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಸಂಸ್ಥೆ ನಿರ್ಮಾಣ
    • ರಾಮನಗರದಲ್ಲಿ 75 ಕೋಟಿ ರೂ. ವಚೆ ್ಚದಲ್ಲಿ ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ
    • ಗೋ ಸಂಪತ್ತಿನ ರಕ್ಷಣೆಗಾಗಿ ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆ ಸ್ಥಾಪನೆ
    • ದೇಶೀಯ ಪಶುಸಂಪತ್ತಿನ ಶಾಶ್ವತ ಪ್ರದರ್ಶನ ವು ತ್ತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ತರಬೇತಿ ನೀಡಲು ಹೆಸರಘಟ್ಟದಲ್ಲಿ ಥೀಮ್ ಪಾರ್ಕ್‌ಸ್ಥಾಪನೆ.
    • ನಂದಿದುರ್ಗ ಮೇಕೆ ತಳಿಗಳನ್ನು ಅಭಿವೃದ್ಧಿ ಪಡಿಸಿ, ಉತ್ಕೃಷ್ಟದರ್ಜೆ ಹೋತ ವಿತರಿಸಲು ಒಂದು ಕೋಟಿ ರೂ. ಅನು ದಾನ.
    • ಸಮಗ್ರ ಗೋಸಂಕುಲ ಸಮೃದ್ಧಿ ಯೊಜನೆಯಡಿಯಲ್ಲಿ ಒಂದು ಕೋಟಿ ರೂ. ವೆಚ್ಚದ ಲ್ಲಿ ರಾಜ್ಯದ ರೈತರಿಗೆ ಹೊರರಾಜ್ಯದ ದೇಶಿ ತಳಿಗಳನ್ನು ಪರಿಚಯಿಸಲು ಕ್ರಮ.
    • ಆಕಸ್ಮಿಕ ಮರಣ ಹೊಂದುವ ಕುರಿ ಮತ್ತು ಮೇಕೆಗಳಿಗೆ ಪರಿಹಾರ ಧನ ನೀಡುವ ಅನುಗ್ರಹ ಕೊಡುಗೆ ಯೋಜನೆ ಮುಂದು ವರಿಕೆ.
    • ಪಶುವೆದ್ಯಕೀಯ ವಿಜ್ಞಾನದಲ್ಲಿ ಅರ್ಯುವೇದ ಔಷಧಿಗಳ ಅಳವಡಿ ಕೆ ಉತ್ತೇಜನಕ್ಕೆ ಶಿವಮೊಗ್ಗದ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ಕಾಲೇಜಿನಲ್ಲಿ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ
    • ಯಾಂತ್ರೀಕೃತ ದೋಣಿಗಳಿಗೆ 1.5 ಲಕ್ಷ ಕಿಲೋಲೀಟರ್ ಡೀಸೆಲ್ ಮೇಲಿನ ಮಾರಾಟ ಕರ ಮರುಪಾವತಿಯ ಬದಲು ಡೀಸೆಲ್ ಡೆಲಿವರಿ ಪಾಯಿಂಟ್ನಲ್ಲಿಯೇ ಕರರಹಿತ ದರದಲ್ಲಿ ಡೀಸೆಲ್ ವಿತರಣೆಗೆ ಕ್ರಮ.

    ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಸಕರ್ಾರದಿಂದ 62 ಕೋಟಿ ರೂ. ಅನುದಾನ.

    • ರಾಜ್ಯದಲ್ಲಿ 16 ಮೀನುಮರಿ ಉತ್ಪಾದನಾ ಕೇಂದ್ರಗಳ ತಾಂತ್ರಿಕ ಉನ್ನತೀಕರಣಕ್ಕೆ 2 ಕೋಟಿ ರೂ. ಅನುದಾನ. ಕರ್ನಾಟಕದಲ್ಲಿ ಮೀನುಗಾರಿಕೆ ಅಭಿವೃದ್ದಿ ನಿಗಮದ ವತಿಯಿಂದ ಆರು ಕೋಟಿ ರೂ.ಗಳ ವೆಚ್ಚದ ಲ್ಲಿ ಮೀನು ಉತ್ಪನ್ನಗಳ ಸಂಸ್ಕರಣೆಗೆ ಆಧುನಿಕ ಸಂಸ್ಕರಣಾ ವು ತ್ತು ಮೌಲ್ಯವರ್ಧನಾ ಕೇಂದ್ರ ಸ್ಥಾಪನೆ.
    • ರಾಜ್ಯಾದ್ಯಂತ 30 ಕೋಟಿ ರೂ.ಗಳ ವೆಚ್ಚದ ಲ್ಲಿ ಮೀನು ಮಾರಾಟ ಘಟಕ ಹಾಗೂ ಮತ್ಸ್ಯದರ್ಶನಿಗಳ ಸ್ಥಾಪನೆ.
      ದರ್ಶನಿಗಳಕ ರಾಜ್ಯ ಉಗ್ರಾಣ ನಿಗಮ, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಟಿ.ಎ.ಪಿ.ಸಿ.ಎಂ.ಎಸ್ ಹಾಗೂ ಇತರೆ ಸಹಕಾರ ಸಂಸ್ಥೆಗಳು ಹೊಂದಿರುವ ಗೋದಾಮುಗಳಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಣಾ ಶುಲ್ಕದ ಶೇ. 25 ಸಹಾಯಧನ ವಿತರಣೆ; 25 ಕೋಟಿ ರೂ. ಅನುದಾನ.
    • ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಹಾಗೂ ಟಿ.ಎ.ಪಿ.ಸಿ.ಎಂ.ಎಸ್.ಗಳಲ್ಲಿ ಸಂಗ್ರಹಿಸಿದ ಕೃಷಿ ಉತ್ಪನ್ನಗಳ ಮೇಲೆ
      ಶೇ. 11 ರ ದರದಲ್ಲಿ ವಿತರಿಸಿದ ಅಡಮಾನ ಸಾಲ ಸೌಲಭ್ಯಕ್ಕೆ 6 ತಿಂಗಳ ಅವದಿ ಗೆ ಸರ್ಕಾರದಿಂದಲೇ ಶೇ. 4 ರ ಬಡ್ಡಿ ಸಹಾಯಧನ. ಐದು ಕೋಟಿ ರೂ. ಅನುದಾನ. 198 ಕೋಟಿ ರೂ . ವೆಚ್ಚದಲ್ಲಿ 5500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ
      ಸಂಘಗಳ ಗಣಕೀಕರಣ.
    • ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಗೆ ಗರಿಷ್ಠ 10 ಲಕ್ಷ ರೂ. ವರೆಗೆ, ಶೇ. 25 ರಷ್ಟು ಷೇರು ಬಂಡವಾಳ ಒದಗಿಸಲು ಕ್ರಮ.
      ಬೈಯಪ್ಪನಹಳ್ಳಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಾಣ
    • ಸಿಂಗೇನ ಅಗ್ರಹಾರ ಸಮೀಪದ ಗುಳಿಮಂಗಳ ಗ್ರಾಮದಲ್ಲಿ ಅತ್ಯಾಧುನಿಕ ತರಕಾರಿ ಮಾರುಕಟ್ಟೆ ನಿರ್ಮಾಣ
    • ಬಳ್ಳಾರಿಯ ಆಲದಹ ಳ್ಳಿ ಗ್ರಾಮದಲ್ಲಿ ಅತ್ಯಾಧುನಿಕ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ.
    • ಚಾಮರಾಜನಗರದಲ್ಲಿ ಅರಿಶಿನ ಮಾರುಕಟ್ಟೆಯ ಸಮಗ್ರ ಅಭಿವೃದ್ದಿ
    • ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಗುಣವಿಶ್ಲೇಷಣಾ ಘಟಕ ಸ್ಥಾಪನೆ.
    • ರಾಜ್ಯದ ನೀರಾವರಿ ಯೋಜನೆಗಳನ್ನು ಆದ್ಯತೆವುಳ್ಳವರಿಗೆ ಜಾರಿಗೊಳಿಸಲು ಕ್ರಮ. ಪ್ರಮುಖ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಹಂತ 3, ಎತ್ತಿನಹೊಳೆ, ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ
      ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ. ಕೊಪ್ಪಳ ಜಿಲ್ಲೆ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಕ್ರಮ.
    • ಬೆಡ್ತಿ-ವರದಾ ನದಿ ಜೋಡಣೆಯಡಿ ಒಟ್ಟು 22 ಟಿ.ಎಂ.ಸಿ. ನೀರನು ್ನ ಬಳಸಿಕೊಳ್ಳಲು ವಿವರವಾದ ಯೋಜನಾ ವರದಿಯನ್ನು National Perspective Plan ಅಡಿಯಲ್ಲಿ ಸಿದ್ಧಪಡಿಸಲು NWDA ಮನವಿ . ತಾಂತ್ರಿಕ ಸಾಧ್ಯಾ-ಸಾಧ್ಯತೆಗನುಗುಣವಾಗಿ ಯೋಜನೆಗಳನ್ನು ರೂಪಿಸಲು ಕ್ರಮ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲ.
    • ವಿಶ್ವ ಬ್ಯಾಂಕ್ ನೆರವಿನ ಡ್ರಿಪ್ (ಆಖಕ) ಯೋಜನೆಯಡಿ 1500 ಕೋಟಿ ರೂ. ಮೊತ್ತದಲ್ಲಿ ರಾಜ್ಯದ 58 ಆಣೆಕಟ್ಟುಗಳ ಪುನಶ್ಚೇತನ ಮತ್ತು ಅಭಿವೃದ್ದಿಗೆಗೆ ಪ್ರಸ್ತಾವನೆ. ಪ್ರಸಕ್ತ ಸಾಲಿನಲ್ಲಿ ಯೋಜನಯ ಜಾರಿಗೆ ಆದ್ಯತೆ.
    • ಏತ ನೀರಾವರಿ ಯೋಜನೆಗಳ ವ್ಯವಸ್ಥಿತ ಕಾರ್ಯಚರಣೆ ಮತ್ತು ನಿರ್ವಹಣೆಗಾಗಿ ಕಾರ್ಯನೀತಿ ಜಾರಿ.
      ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು ಹಾಗೂಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ಬೆಂಗಳೂರು ನಗರದ ವೃಷಭಾವತಿ ಕಣಿವೆಯಿಂದ ದ್ವಿತೀಯ ಹಂತಕ್ಕೆ ಸಂಸ್ಕರಿಸಿದ 308 ಎಂ.ಎಲ್.ಡಿ. ನೀರು ತುಂಬಿಸುವ 500 ಕೋಟಿ ರೂ. ವೆಚ್ಚದ ಯೋಜನೆ ಅನುಷ್ಠಾನ.
    • ಪಶ್ಚಿಮವಾಹಿನಿ ಯೋಜನೆ ಕುರಿತ ಮಾಸ್ಟರ್ ಪ್ಲಾನ್ ಅಡಿ, ಮುಂದಿನ 5 ವರ್ಷಗಳಲ್ಲಿ 3986 ಕೋಟಿ ರೂ. ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟು ನಿರ್ಮಾಣ. 2021-22ನೇ ಸಾಲಿನಲ್ಲಿ 500 ಕೋಟಿ ರೂ. ಅನು ದಾನ. ಉತ್ತರ ಕನ್ನಡ ಜಿಲ್ಲೆಯ ಕರವಾಳಿ ಪ್ರದೇಶದಲ್ಲಿ 300 ಕೋಟಿ ರೂ. ವೆಚ್ಚದ ಲ್ಲಿ ನದಿಗಳಲ್ಲಿ ಪ್ರವಾಹ ಮತ್ತು ಭಾರಿ ಅಲೆಗಳಿಂದಾಗಿ ಉಪ್ಪುನೀರು ಹಿಮ್ಮುಖವಾಗಿ ನುಗ್ಗುವುದನ್ನು Flap gateಮುಖಾಂತರ ತಡೆಗಟುವ್ಟ ಖಾರ್ಲ್ಯಾಂಡ್ ಯೋಜನೆ ಜಾರಿ. ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆಯಾಗಿ 31,028 ಕೋಟಿ ರೂ. ಅನುದಾನ

    ವಲಯ 2: ಸರ್ವೋದ ಮತ್ತು ಕ್ಷೇಮಾಭಿವೃದ್ಧಿ

    • ಆಯ್ದ 50 ಕರ್ನಾಟಕ ಪಬ್ಲಿಕ್ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ.
    • ನೂರು ಕರ್ನಾಟಕ ಪಬ್ಲಿಕ್ ಶಾಲೆಗಳ 14 ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ.
    • ಎರಡು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಶಾಲಾ ಶೌಚಾಲಯಗಳ ಉನ್ನತೀಕರಣ ಮತ್ತು ನೀರಿನ ಸೌಲಭ್ಯ ಒದಗಿಸಲು ಕ್ರಮ. ಪಂಚಾಯತ್ ರಾಜ್ ಸಂಸ್ಥೆಗಳ ಮುಖಾಂತರ ನಿರ್ವಹಣೆ. ಪ್ರಸಕ್ತ ಸಾಲಿನಲ್ಲಿ 50 ಕೋಟಿರೂ ಅನು ದಾನ. ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳ ಮೂಲಭೂತ ಸೌಕರ್ಯಕ್ಕೆ 150 ಕೋಟಿ ರೂ. ಹಾಗೂ ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ಮತ್ತು ಕಲಿಕಾ ಸಾಮಗ್ರಿ ಒದಗಿಸಲು 50 ಕೋಟಿ ರೂ. ಅನುದಾನ.
    • ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಿಗೂ ಕಂಪ್ಯೂಟರ್ ಲ್ಯಾಬ್ ಸೌಲಭ್ಯ ವಿಸ್ತರಣೆ.
    • ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪು ರಸ್ಕೃತರು ಕಲಿತ ಶಾಲೆಗಳ ಸಮಗ್ರ ಅಭಿವೃದ್ದಿಗೆ ಕ್ರಮ. ಡಿಜಿಟಲ್ ಕಲಿಕೆಗೆ ಅನುವಾಗುವಂತೆ ರಾಜ್ಯದ ಸಕರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ ಕ್ಲಾಸ್ರೂಮ್ಗಳ ಅಭಿವೃದ್ಧಿ.
    • ಕೇಂದ್ರ ಮತ್ತು ರಾಜ್ಯ ಆಡಳಿತ ಸೇವೆಗಳು, ಬ್ಯಾಂಕಿಂಗ್, ರೈಲ್ವೆ ಇತ್ಯಾದಿ ಉದ್ಯೋಗಗಳಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರ ಸೇರ್ಪಡೆಯನ್ನು ಉತ್ತೇಜಿಸಲು ಸಾಮಥ್ರ್ಯ-ಸಾರಥ್ಯ ಕಾರ್ಯಕ್ರಮ; ಐದು ಲಕ್ಷ ವಿದ್ಯಾರ್ಥಿಗ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ 5 ಕೋಟಿ ರೂ ಅನುದಾನ.
    • ಜಾಗತಿಕ ಮಟ್ಟದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಶೈಕ್ಷಣಿಕ ನಾಯಕತ್ವ ಕಾರ್ಯಕ್ರಮ ಜಾರಿ.
    • ರಾಜ್ಯದ ಆಯ್ದ ಮಹಾನಗರಪಾಲಿಕೆ ಮತ್ತು ನಗರಸಭೆಗಳಲ್ಲಿ ಪ್ರಾಯೋಗಿಕವಾಗಿ ಸಂಜೆ ಕಾಲೇಜು ಪ್ರಾರಂ ಭ.
    • ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತು ಅರಿವು ಮೂಡಿಸಲು ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ಕಾರ್ಯಗಾರ ರಾಜ್ಯದ 19 ಜಿಲ್ಲಾ ಆಸ್ಪತ್ರೆಗಳಲ್ಲಿ 25 ಹಾಸಿಗೆ ಸಾಮಥ್ರ್ಯದ ಹಾಗೂ 100 ತಾಲ್ಲೂಕು ಆಸ್ಪತ್ರೆಗಳಲ್ಲಿ ಆರು ಹಾಸಿಗೆ ಸಾಮಥ್ರ್ಯದ ತೀವ್ರ ನಿಗಾ ಘಟಕಗಳನ್ನು 60 ಕೋಟಿ ರೂ. ವೆಚ್ಚದಲ್ಲಿ ಕಾರ್ಯಗತಗೊಳಿಸಲು ಕ್ರಮ.
    • ರಾಜ್ಯದ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾದರಿ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಲು
    • ಎರಡು ಕೋಟಿ ರೂ. ವೆಚ್ಚದ ಲ್ಲಿ ನಾಲ್ಕು ಪ್ರಾದೇಶಿಕ ಆಹಾರ ಸುರಕ್ಷತಾ ಪ್ರಯೋಗಾಲಯಗಳ ಉನ್ನತೀಕರಣ.
    • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆಯಂಟಿ-ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಘಟಕ ಪ್ರಾರಂಭ.
    • ನವಜಾತ ಶಿಶುಗಳಲ್ಲಿ ಅನುವಂಶೀಯ ಮೆಟಾಬಾಲಿಕ್ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಲು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ 10 ಕೋಟಿ ರೂ. ವೆಚ್ಚದ ಲ್ಲಿ ಪ್ರಯೋಗಾಲಯ ಸ್ಥಾಪನೆ. ರಾಜ್ಯದ ನಾಲ್ಕು ವಿಭಾಗಗಳಲ್ಲಿ ಒಟ್ಟು 2.5 ಕೋಟಿ ರೂ. ಗಳ ವೆಚ್ಚದಲ್ಲಿ ತಾಯಂದಿರ ಎದೆಹಾಲಿನ ಬ್ಯಾಂಕ್ ಸ್ಥಾಪನೆ.
    • ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡುವುದನ್ನು ಉತ್ತೇಜಿಸಲು 10 ಕೋಟಿ ರೂ. ವೆಚ್ಚದಲ್ಲಿ ಚಿಗುರು ಕಾರ್ಯಕ್ರಮಕ್ಕೆ ಚಾಲನೆ.
    • ಟೆಲಿ-ಐಸಿಯು ಬಲಪಡಿಸಲು 2 ಕೋಟಿ ರೂ. ಅನುದಾನ.
    • ಶಿವಮೊಗ್ಗ ಜಿಲ್ಲೆಯಲ್ಲಿರುವ ಆಯುವೆರ್ ದ ಕಾಲೇಜನ್ನು ಆಯುಷ್ವಿ ಶ್ವವಿದ್ಯಾಲಯವನ್ನಾಗಿ ಉನ್ನತ ಮಟ್ಟಕ್ಕೆ ಏರಿಸಲು ಕ್ರಮ.
    • ಅಪೌಷ್ಟಿಕತೆಯಿಂದ ತಾಯಿ ಮತ್ತು ಮಗುವನ್ನು ರಕ್ಷಿಸಲು 5 ಕೋಟಿ ರೂ. ವೆಚ್ಚದ ಲ್ಲಿ ಭಾರತೀಯ ವೈದ್ಯ ಪದ್ಧತಿ ಆಧರಿಸಿದ ಪೋಷಣೆ, ಜೀವನೋಪಾಯ ಕಾರ್ಯಕ್ರಮ ಜಾರಿ.
    • ಬೆಂಗಳೂರು, ಮೈಸೂರು, ಬಳ್ಳಾರಿ ಮತ್ತು ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಲ್ಲಿ ಒಟ್ಟು ಐದು ಕೋಟಿ ರೂ. ವೆಚ್ಚದ ಲ್ಲಿ ತುರ್ತು ಚಿಕಿತ್ಸಾ ವಿಬಾ ಗ ಪ್ರಾರಂಭ. ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಟ್ರಾಮಾ ಕೇರ್ ಕೇಂದ್ರ ಪ್ರಾರಂಭ.
    • ಶಿವಮೊಗ್ಗ ಮತ್ತು ಮೈಸೂ ರಿನಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಪ್ರಾರಂಭ.
    • ಮಹಿಳೆಯರಲ್ಲಿ ಕ್ಯಾನ್ಸರ್ ರೋಗ ಪತ್ತೆ ಹಚ್ಚಲು 11 ಕೋಟಿ ರೂ.ಗಳ ವೆಚ್ಚದ ಲ್ಲಿ ಮೂರು ಹೊಸ ಸುಸಜ್ಜಿತ ಸಂಚಾರಿ ಪ್ರಯೋಗಾಲಯ ಪ್ರಾರಂಭ.
    • ದಾವಣಗೆರೆಯಲ್ಲಿ 20 ಕೋಟಿ ರೂ.ಗಳ ವೆಚ್ಚದಲ್ಲಿ 50 ಹಾಸಿಗೆ ಸಾಮಥ್ರ್ಯದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪಕೇಂದ್ರ ಪ್ರಾರಂಭಿಸಲು ಕ್ರಮ. ಕಲಬುರಗಿ ವೆ ದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸುಟ್ಟಗಾಯಗಳ ಚಿಕಿತ್ಸಾ ಕೇಂದ್ರ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗ ಪ್ರಾರಂಭ. ಚಿತ್ರದು ರ್ಗ ಜಿಲ್ಲೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಹೊಸ ವೈದ್ಯಕೀಯ ಕಾಲೇಜು ಪ್ರಾರಂಭ.
    • ಹಾಸನ ಮತ್ತು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ ಪ್ರಸಕ್ತ ಸಾಲಿನಿಂದ 100 ಸ್ನಾತಕೋತ್ತರ ಸೀಟುಗಳ ಹೆಚ್ಚಳ.
    • ಧಾರವಾಡದ ಡಿಮ್ಹಾನ್ಸ್ ಸಂಸ್ಥೆಯನ್ನು 75 ಕೋಟಿ ರೂ.ಗಳ ವೆಚ್ಚದಲ್ಲಿ ಮಾನಸಿ ಕ ನರರೋಗಿಗಳ ಸುಸಜ್ಜಿತ ಚಿಕಿತ್ಸಾ ಸಂಸ್ಥೆಯನ್ನಾಗಿ ಹಂ ತ ಹಂತವಾಗಿ ಮೇಲ್ದರ್ಜೆಗೆ ಕ್ರಮ. ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಅನುದಾನ ನಿಗದಿ. ಬುದ್ಧಿಮಾಂದ್ಯರ ಆರೈಕೆ ಮಾಡಲು ಅನು ವಾಗುವಂತೆ ಶೇ.75 ಕ್ಕಿಂತ ಹೆಚಿನ್ಚ ವು ನೋವೈಕಲ್ಯತೆ ಹೊಂದಿದವರಿಗೆ ನೀಡುವ ಮಾಸಾಶನ 2000 ರೂ.ಗಳಿಗೆ ಹೆಚ್ಚಳ ಹುಟ್ಟಿನಿಂದಲೇ ಶ್ರವಣದೋಷವುಳ್ಳ ನಾಲ್ಕು ವರ್ಷದೊಳಿಗೆ ಮಕ್ಕಳಿಗೆ ಅವರ ತಾಯಂದಿರ ಸಹಿತ ವಾಕ್ ತರಬೇತಿ ನೀಡಲು ಕ್ರಮ.
    • ಸರ್ಕಾರದ ಬ್ರೈಲ್ ಮುದ್ರಣಾಲಯದಲ್ಲಿ ಸುಶ್ರಾವ್ಯ ಡಿಜಿಟಲ್ಪು ಪುಸ್ತಕಗಳ ಬ್ಯಾಂಕ್ ಸ್ಥಾಪನೆ; ವಿಶೇಷ ಶಾಲೆಗಳಿಗೆ ಡಿಜಿಟಲ್ ಪು ಸ್ತಕ ಸರಬರಾಜಿಗೆ ಕ್ರಮ.
    • 2021-22ನೇ ಸಾಲಿನಲ್ಲಿ ಮಕ್ಕಳ ಉದ್ದೇಶಿತ ಯೋಜನಗೆ ಳಿಗೆ 37,527 ಕೋಟಿ ರೂ. ಅನುದಾನ. 2021-22ನೇ ಸಾಲಿನ ಆಯವ್ಯಯದಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಗಳಡಿ ಒಟ್ಟಾರೆ 26,005 ಕೂೆ ಟಿ ರೂ. ಹಂಚಿಕೆ.
    • ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಕೋಟಿ ರೂ. ವೆಚ್ಚದ ಲ್ಲಿ 50 ಹೊಸ ಮೆಟ್ರಿಕ್ ನಂತರದ ಹಾಸ್ಟೆಲ್ ಪ್ರಾರಂಭ. 5 ಸಾವಿರ ವಿದ್ಯಾರ್ಥೀಗಳಿಗೆ ಅನುಕೂಲ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥೀಗಳಿಗೆಶೈಕ್ಷಣಿಕ ಸೌಲಭ್ಯದೊಂದಿಗೆ ಕ್ರೀಡೆಯಲೊಲಿ ವಿಶೇಷ ತರಬೇತಿ ನೀಡಲು 5 ಕೋಟಿ ರೂ. ವೆಚ್ಚದಲ್ಲಿ ಪ್ರತಿ ವಿಭಾಗದಲ್ಲಿ ತಲಾ ಒಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಅದ್ವಿತೀಯ ಕ್ರೀಡಾ ಶಾಲೆಯೆಂದು ಉನ್ನತೀಕರಿಸಲು ಕ್ರಮ.
    • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಹಾಲಿ ಜಾರಿಯಲ್ಲಿರುವ ಶೇ. 4ರಷ್ಟು ಬಡ್ಡಿ ಸಹಾಯಧನ ಯೋಜನೇ ಮಳಿಗೆ/ಡೀಲರ್ಶಿಪ್/ಫ್ರಾಂಚೈಸಿ ಮತ್ತು ಹೋಟೆಲ್‌ ಉದ್ಯಮಗಳನ್ನು ಪ್ರಾರಂಭಿಸಲು ವಿಸ್ತರಣೆ. ಗರಿಷ್ಠ ಒಂದು ಕೋಟಿ ರೂ. ವರೆಗೆ ಸಾಲ ಪಡೆಯಲು ಅವಕಾಶ. ಮ್ಯಾನ್ಯುಯಲ್ ಸ್ಕ್ಯಾವೆಂಜರುಗಳ ಪುನರ್ವಸತಿಗೆ, ಸಂಘಗಳನ್ನು ರಚಿಸಿ, ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರಗಳಿಗೆ ಶೇ.75ರಷ್ಟು ಸಹಾಯಧನ ಒದಗಿಸಲು ಕ್ರಮ; ಎರಡು ಕೋಟಿ ರೂ. ಅನುದಾನ.
    • ನಿಪ್ಪಾಣಿಯಲ್ಲಿ ಕೊಲ್ಹಾಪುರಿ ಪಾದರಕ್ಷೆಗಳ ಕ್ಲಸ್ಟರ್ ಮತ್ತುಚಿತ್ರದು ರ್ಗದಲ್ಲಿ ಕೇಂದ್ರ ಪಾದರಕ್ಷಾ ತರಬೇತಿ ಸಂಸ್ಥೆಯ ವಿಸ್ತರಣಾ ಕೇಂದ್ರ ಪ್ರಾರಂಭ ಪರಿಶಿಷ್ಟ ಪಂಗಡದ ಆಶ್ರಮ ಶಾಲೆಗಳಿಗೆ ವಾಲ್ಮೀಕಿ ಆಶ್ರಮ ಶಾಲೆ ಎಂದು ಮರು ನಾಮಕರಣ.
    • ಡಾ|| ಬಿ.ಆರ್. ಅಂಬೇಡ್ಕರ್ ಭೇಟಿ ನೀಡಿದ್ದ ಹಾಸನ ನಗರದ 2 ಎ.ಕರೆ ಬೋರ್ಡಿಂಗ್‌ ಹೋಮ್ ಸ್ಥಳದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ಭವನ ನಿರ್ಮಾಣ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದು ಳಿದ ವರ್ಗಗಳ ವಿವಿಧ ಅಭಿವೃದ್ಧಿ ನಿಗಮಗಳಿಗೆ ಒಟ್ಟಾರೆ 500 ಕೋಟಿ ರೂ. ಅನುದಾನ.
    • ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ನಿಗದಿ; 100 ಕೋಟಿ ರೂ. ಈಗಾಗಲೇ ಬಿಡು ಗಡೆ. ಒಕ್ಕಲಿಗ ಸಮುದಾಯದ ಹೊಸ ನಿಗಮ ಸ್ಥಾಪನೆ; 500 ಕೋಟಿ ರೂ. ವೆಚ್ಚದ ಲ್ಲಿ ಕಾರ್ಯಕ್ರವು ಗಳ ಅನುಷ್ಠಾನ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಚಟುವಟಿಕೆಗಳಿಗೆ 50 ಕೋಟಿ ರೂ.
    • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 150 ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಕ್ರಮ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಸ್ವಂತ ಕಟ್ಟಡ ಹೊಂದಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಸಂಖ್ಯಾ ಬಲ ಶೇ. 5 ರಷ್ಟು ಹೆಚ್ಚಳ ; 5000 ವಿದ್ಯಾರ್ಥಿಗಳಿಗೆ ಅನುಕೂಲ; ಕೋಟಿ ರೂ. ಅನುದಾನ.
    • ಗಂಗಾ ಕಲ್ಯಾಣ ಯೋಜನೆಯ ಪಾರದರ್ಶಕ, ಕಾಲಮಿತಿಯ ಅನುಷ್ಠಾನಕ್ಕಾಗಿ, ಅನುಷ್ಠಾನದ ವಿವೇಚನೆಯ ಫಲಾನುಭವಿಯ ಕೈಗೆ ಎಂಬ ನೂತನ ವಿಧಾನ ಜಾರಿಗೆ.
    • ಅಲ್ಪಸಂಖ್ಯಾತರ ಏಳಿಗಾಗಿ 1,500 ಕೋಟಿ ರೂ. ಮೀಸಲು.
    • 200 ಕೋಟಿ ರೂ.ಗಳ ವೆಚ್ಚದಲ್ಲಿ ಕ್ರೈಸ್ತ ಸಮುದಾಯದ ವಿವಿಧ ಅಭಿವೃದ್ದಿಗಾಗಿ ಕಾರ್ಯಕ್ರಮಗಳ ಮುಂದುವರಿಕೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಮೊರ್ಜಾಯಿ ದೇಸಾಯಿ ವಸತಿ ಶಾಲೆ/ ಮಾದರಿ ಶಾಲೆ/ ಕಾಲೇಜುಗಳಲ್ಲಿ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರವು ಅನುಷ್ಠಾನ
    • ಶ್ರವಣಬೆಳಗೊಳ ಮತ್ತು ಇನ್ನಿತರೆ ಜೈನ ಪುಣ್ಯ ಕ್ಷೇತ್ರಗಳಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ; ಪ್ರಸಕ್ತ ಸಾಲಿಗೆ 20 ಕೋಟಿ ರೂ. ಅನು ದಾನ. ವಿವಿಧ ವಸತಿ ಯೋಜನಗೆ ಳ ಡಿ ಅನುಮೋದನೆಗೊಂಡು, ಪ್ರಾರಂಭವಾಗದೇ ಇರುವ ಮನೆಗಳನ್ನು ಪೂರ್ಣಗೊಳಿಸಲು ಸರ್ಕಾರದ ಆದ್ಯತೆ; ಪ್ರಗತಿಯಲ್ಲಿರುವ 9.74 ಲಕ್ಷ ಮನಗೆ ಳಿಗೆ ಮೂರು ವರ್ಷಗಳಲ್ಲಿ 10,194 ಕೋಟಿ ರೂ .ಗಳನ್ನು ಒದಗಿಸಲು ಅನುಮೋದನೆ.
    • ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಸಂರಕ್ಷಣೆಗಾಗಿ ಹೆಚ್ಚುವರಿಯಾಗಿ 100 ಕಿತ್ತೂರು ರಾಣಿ ಚೆನ್ನಮ್ಮ ಶಿಶು ಪಾಲನಾ ಕೇಂದ್ರ ಸ್ಥಾಪನೆ
    • ನೋಂದಾಯಿತ ಕಟ್ಟಡ ಕಾರ್ಮಿಕರ ಹಾಗೂ ಅವರ ಅವಲಂಬಿತರಿಗಾಗಿ 25 ಸಂಚಾರಿ ಆರೋಗ್ಯ ತಪಾಸಣಾ ಕೇಂದ್ರಗಳ ಪ್ರಾರಂಭ
    • ಕರ್ನಾಟಕದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಯಿಂದ 11 ಜಿಲ್ಲೆಗಳಲ್ಲಿ 17 ತಾತ್ಕಾಲಿಕ ವಸತಿಗೃಹಗಳ ಸೌಲಭ್ಯ. TATA Technologies Limited ಸಹಯೋಗದೊಂದಿಗೆ 4,636 ಕೋಟಿ ರೂ.ಗಳ ಹೂ ಡಿಕೆಯೊಂದಿಗೆ 150 ಸರ್ಕಾರಿ ಕೈಗಾರಿಕಾ ತರಬೆ ತಿ ಸಂಸ್ಥೆಗಳ ಉನ್ನ ತೀಕರಣಕ್ಕೆ ಕ್ರಮ. ರಾಜ್ಯದ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹೊಸದಾಗಿ 23 ಅಲ್ಪಾವಧಿ ಹಾಗೂ 11 ದೀರ್ಘವಾದಿ ವೃತ್ತಿಪರ ಕೋರ್ಸ್‌ ಪ್ರಾರಂಭ.
    • ಕೇಂದ್ರ ಸರ್ಕಾರದ ಶಿಶಿಕ್ಷು ತರಬೇತಿ ಯೋಜನಯಡಿ ಪ್ರತಿ ತಿಂಗಳು ನೀಡುವ 1,500 ರೂ. ಶಿಷ್ಯವೇತನದೊಂದಿಗೆ ರಾಜ್ಯ ಸರ್ಕಾರದಿಂದ ಹಚ್ಚುವರಿಯಾಗಿ 1,500 ರೂ. ನೀಡಲು ಕ್ರವು . 10 ಸಾವಿರ ಶಿಶಿಕ್ಷು ಗಳಿಗೆ ಅನುಕೂಲ; 18 ಕೋಟಿ ರೂ. ಅನುದಾನ.
    • ಸಾವಿರ ಗ್ರಾಮೀಣ ಯುವತಿಯರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಮೃದು ಕೌಶಲ್ಯ (Soft skill),, ಸಂವಹನ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನದ ತರಬೇತಿ ನೀಡಲು ಕ್ರಮ. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ 2021-22ನೇ ಸಾಲಿನಲ್ಲಿ ಒಟ್ಟಾರೆಯಾಗಿ 62,150 ಕೋಟಿ ರೂ. ಅನುದಾನ.
    • ವಲಯ 3: ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ
    • ಜಲಧಾರೆ ಯೋಜನೆಯಡಿ 6201 ಕೋಟಿ. ಕಾಮಗಾರಿಗಳು ಪ್ರಗತಿಯಲ್ಲಿ. ಜಲ ಜೀವನ್ ಮಿಷನ್ ಯೋಜನೆಯೊಂದಿಗೆ ಒಗ್ಗೂಡಿಸಿ ರೂಪಿಸಿರುವ ಮನೆ ಮನೆಗೆ ಗಂಗೆ ಯೋಜನೆಯಡಿ 2021-22ನೇ ಸಾಲಿನಲ್ಲಿ 4,316 ಕೋಟಿ ರೂ. ವೆಚ್ಚದ ಲ್ಲಿ 22 ಲಕ್ಷ ಗ್ರಾಮೀಣ ಕುಟುಂಬಗಳಿ ಗೆ ಕಾಯರ್ತತ್ಮಕ ನಳ ಸಂಪರ್ಕ ಒದಗಿಸಲು ಕ್ರಮ. ಹಳ್ಳಿಗಳಿಗೆ ಬಲ್ಕ್ ನೀರು ಸರಬರಾಜು ಮಾಡಲು 25,740 ಕೋಟಿ ರೂ. ವೆಚ್ಚದ ಯೋಜನೆ. ಮಾಹಿತಿ ಮತ್ತು ಜ್ಞಾನ ಕೇಂದ್ರಗಳನ್ನಾಗಿ ಗ್ರಾಮೀಣ ಗ್ರಂಥಾಲಯಗಳ ಉನ್ನತೀಕರಣ. ತಾಲ್ಲೂಕಿಗೊಂದು ಬ್ರೈಲ್ ಹಾಗೂ ಶ್ರವ್ಯ ಪುಸ್ತಕಗಳನ್ನು ಒಳಗೊಂಡ ಬೀಕನ್ (Beacon) ಗ್ರಂಥಾಲಯ ಪ್ರಾರಂಭ. ಗ್ರಾಮ ಪಂಚಾಯಿತಿಗಳಲ್ಲಿ ಸುಧಾರಿತ, ಸಂಯೋಜಿತ ಪಂಚತಂತ್ರ 2.0 ಬಳಕೆ ಹಾಗೂ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ಕ್ರಮ. ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸಂಜೀವಿನಿ ಯೋಜನೆಯಲ್‌ಇ ಮಹಿಳಾ ಸ್ವಸಹಾಯ ಸಂಘಗಳಿಂದ ರಚಿತವಾದ ಒಕ್ಕೂಟದ ಮೂಲಕ ಸಮಗ್ರ ವು ತ್ತು ವೈಜ್ಞಾನಿಕ ಘನತ್ಯಾಚಜ್ಯ ನಿರ್ವಹಣೆಗೆ ಕ್ರಮ.
    • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿರುವ ವಿವಿಧ ಇಂಜಿನಿಯರಿಂಗ್ ವಿಭಾಗಗಳನ್ನು ಒಗ್ಗೂಡಿಸಲು ಕ್ರಮ. ಕಲ್ಯಾಣ ಕರ್ನಾಟಕ ಪ್ರದೆ ಶಾಭಿವೃದ್ಧಿ ಮಂಡಳಿಗೆ 1,500 ಕೋಟಿ ರೂ.ಗಳ ಅನುದಾನ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಯನ್ನು ಮುಂದುವರೆಸಲು 2021-22ನೇ ಸಾಲಿನಲ್ಲಿ 3,000 ಕೋಟಿ ರೂ. ಅನುದಾನ.
    • ಕೇಂದ್ರ ಸರ್ಕಾರದ ಆತ್ಮನಿರ್ಭರ್ ಯೋಜನೆಯಡಿ ವಿವಿಧ ಇಲಾಖೆಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯ ಪ್ರಸ್ತಾವನೆಗಳನ್ನು ಸಂಯೋಜಿಸಲು ಮತ್ತು ಮೇಲ್ವಿಚಾರಣೆ ಮಾಡಲು ಒಂದು ಆನ್ಲೈನ್ ವೇದಿಕೆ ರಚನೆ
    • ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿ ಯಾಗಿ ಪುನಾರಚನೆಗೆ ವಿಧೇಯಕ ತರಲು ಕ್ರವು .
      ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯಿಂದ 900 ಕೋಟಿ ರೂ.ಗಳ ವೆಚ್ಚದ ಲ್ಲಿ ಹೊಸದಾಗಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಯೋಜನಗೆ ಳ ಅನುಷ್ಠಾನ.
    • ಮೂಲ ಸೌಕರ್ಯ ಕಾಮಗಾರಿಗಳ ಭೂಸ್ವಾದೀ ನ ಪ್ರಕ್ರಿಯೆ ತ್ವರಿತಗೊಳಿಸಲು ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಗೆ ತಿದ್ದುಪಡಿ. ಇಂತಹ ಯೋಜನೆಗಳಿಗೆ ಬಿಟ್ಟುಕೊಡುವ ಖಾಸಗಿ ಸ್ವತ್ತಿಗೆ
      ಟಿಡಿಆರ್ ನೀಡುವ ಪ್ರಕ್ರಿಯೆಯ ಸರಳೀಕರಣ.
    • ರಾಜ್ಯದ 26 AMRUT ನಗರಗಳಲ್ಲಿ 17 ಕೋಟಿ ರೂ.ಗಳ ವೆಚ್ಚದಲ್ಲಿ ನೀರಿನ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆ. ಐದು ಮಹಾನಗ ರಪಾಲಿಕೆಗಳಲ್ಲಿ 11 ಕೋಟಿ ರೂ.ಗಳ ವೆಚ್ಚದಲ್ಲಿ ದಿನಕ್ಕೆ ಕನಿಷ್ಠ 10 ಟನ್ ಸಾಮಥ್ರ್ಯದ ಮಟೀರಿಯಲ್ ರಿಕವರಿ ಸೌಲಭ್ಯಗಳ ಅಭಿವೃದ್ದಿ
    • ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಳ್ಲಿ 9 ಕೋಟಿ ರೂ.ಗಳ ವೆಚ್ಚದಲ್ಲಿ ಸ್ವಚ್ಛ ಗೃಹ ಕಲಿಕಾ ಕೇಂದ್ರಗಳ ಅಭಿವೃದ್ಧಿ. ರಾಜ್ಯದ 10 ಮಹಾನಗರಪಾಲಿಕೆಗಳು ಹಾಗೂ 59 ನಗ ರಸಭೆಗಳಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ಒಟ್ಟು 89 ಸಮುದಾಯ ಮಿಶ್ರಗೊಬ್ಬರ ಘಟಕಗಳ ಅಭಿವೃದ್ದಿ.
    • ಕೇಂದ್ರ ಸರ್ಕಾರದ ನಗರ ಬಸ್ ಸೇವೆಗಳ ವರ್ಧನೆ ಯೋಜನೆಯ ಗರಿಷ್ಠ ಲಾಬ ಪಡೆದು ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಲು ಕ್ರವು .
    • ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಕಾಲುಸಂಕಗಳನ್ನು ನಿರ್ಮಿಸಲು ಗ್ರಾಮಬಂಧ ಸೇತುವೆ ಯೋಜನೆ ಅನುಷ್ಠಾನ ಬೆಳಗಾವಿ ನಗರದಲ್ಲಿ ವರ್ತಲ ರಸ್ತೆ ನಿರ್ಮಾಣ; ರಾಜ್ಯ ಸರ್ಕಾರದಿಂದ ಭೂಸ್ವಾಧೀನ ವೆಚ್ಚದ ಶೇ 50ರಷ್ಟು ಮೊತ್ತ 140 ಕೋಟಿ ರೂ. ಒದಗಿಸಲು ಕ್ರಮ. ರಾಯಚೂರು ನಗರಕ್ಕೆ ವರ್ತುಲ ರಸ್ತೆ ನಿರ್ಮಾಣಕ್ಕೆ ಕ್ರಮ.
    • ವೈಜ್ಞಾನಿಕ ಸಂಚಾರ ನಿರ್ವಹಣಾ ವ್ಯವಸ್ಥೆಯಡಿ 18 ಕೋಟಿ ರೂ. ವೆಚ್ಚದ ಲ್ಲಿ ಎರಡು ಹೆದ್ದಾರಿಗಳಲ್ಲಿ ಅತ್ಯಾಧುನಿಕ ಸಂಚಾರ ವ್ಯವಸ್ಥೆ, ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ ಮತ್ತು ಸೇಫ್ಟಿ ಸೊಲ್ಯೂಷನ್ಸ್ನ ಪ್ರಾಯೋಗಿಕ ಅನು ಷ್ಠಾನ.
    • ರೈಲ್ವೆ ಮಂತ್ರಾಲಯದೊಂದಿಗೆ 50:50ರ ವೆಚ್ಚ ಹಂಚಿಕೆಯ ಆಧಾರದಲ್ಲಿ 7984 ಕೋಟಿ ರೂ. ಅಂದಾಜು ವೆಚ್ಚದ ಏಳು ಹೊಸ ರೈಲ್ವೆ ಯೋಜನೆ; ಇದರಿಂದ ರಾಜ್ಯದ ರೈಲ್ವೆ ಜಾಲಕ್ಕೆ 1173 ಕಿ.ಮೀ. ರೈಲು ಮಾರ್ಗ ಸೇರ್ಪಡೆ. ಇದರ ಲ್ಲಿ ರಾಜ್ಯದ ಪಾಲು 3991 ಕೋಟಿ ರೂ ; ಭೂಸ್ವಾದೀ ನಕ್ಕೆ ರಾಜ್ಯ ಸರ್ಕಾರದದಿಂದ 2,630 ಕೋಟಿ ರೂ. ವೆಚ್ಚ.
    • ಧಾರವಾಡ- ಕಿತ್ತೂರು-ಬೆಳಗಾವಿಯ ನಡುವೆ 73 ಕಿ.ಮೀ. ಉದ್ದದ ಹೊಸ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ 463 ಕೋಟಿ ರೂ. ಅನುದಾನ. ರಾಜ್ಯದ ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ಕಾರ್ಯಚರಣೆಗೆ ಣೆಗೆ ರಾಜ್ಯ ಮತ್ತು ಏರ್ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾ ನಡು ವೆ ಜಂಟಿ ಉದ್ಯಮ ಕಂಪೆನಿ ರಚನಗೆ ಕ್ರಮ. ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ನೌಕಾ ವಾಯುನೆಲೆ ಸಮೀಪದಲ್ಲಿ ಸಿವಿಲ್ ಎನ್ಕ್ಲೇವ್ ಅಭಿವೃದ್ದಿಪಡಿಸಲು ಕ್ರಮ. 175 ಕೋಟಿ ರೂ. ವೆಚ್ಚದಲ್ಲಿ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಬಿಸ ಲು ಕ್ರವು . 384 ಕೋಟಿ ವೆಚ್ಚದ ಶಿವಮೊಗ್ಗ ಮತ್ತು 220 ಕೋಟಿ ರೂ. ವೆಚ್ಚದ ವಿಜಯಪುರ ವಿಮಾನ ನಿಲ್ದಾಣಗಳ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಲು ತದಡಿಯಲ್ಲಿ 1,000 ಎಕರೆಗಳ ಪರಿಸರ ಪ್ರವಾಸೋದ್ಯಮ ಉದ್ಯಾನವನ ಅಭಿವೃದ್ದಿ ಹೊನ್ನಾವರದ ಕಾಸರಕೋಡ ಬಂದರು ಪ್ರದೇಶಕ್ಕೆ ರಾಷ್ಟ್ರೀಯ ಹೆದ್ದಾರಿ-66 ರಿಂದ ಭಾರತಮಾಲಾ ಯೋಜನೆಯಡಿ 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಚತುಷ್ಪಥ ಸಂ ಪರ್ಕ ರಸ್ತೆ ನಿರ್ಮಿಸಲು ಕ್ರಮ.
    • ಮಂಗಳೂರು ಮತ್ತು ಪಣಜಿ ನಡುವೆ ಜಲಮಾರ್ಗಗಳ ಅಭಿವೃದ್ಧಿ.
    • ಕೇಂದ್ರ ಸಕರ್ಾರದ ರಾಷ್ಟ್ರೀಯ ಜಲಮಾರ್ಗ ಗಳ ಪ್ರಾಧಿಕಾರದ ಧನಸಹಾಯದೊಂದಿಗೆ ಒಟ್ಟು 60 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಐದು ಜಲಮಾರ್ಗಗಳ ಅಭಿವೃದ್ಧಿಗೆ ಕ್ರಮ.
    • ಹೊಸ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ ಜಾರಿಗೆ ಕ್ರವು .
    • ಯಾದಗಿರಿ ಜಿಲ್ಲೆಯ ಕಡಚೂರಿನಲ್ಲಿ 1,478 ಕೋಟಿ ರೂ. ವೆಚ್ಚದ ಲ್ಲಿ ಬಲ್ಕ್ ಡ್ರಗ್ ಪಾರಕ್‌ ಹಾಗೂ ಮಂಗಳೂರಿನ ಗಂಜಿಮಠದಲ್ಲಿ 66 ಕೋಟಿ ರೂ. ವೆಚ್ಚದಲ್ಲಿ ಪ್ಲಾಸ್ಟಿಕ್ ಪಾರ್ಕ್‌ ಅಬಿವೃದ್ದಿ, ಬೀದರ್ನ ಕೃಷಿ ಉಪಕರಣಗಳ ತಯಾರಿಕಾ ಕ್ಲಸ್ಟರ್ನಲ್ಲಿ ಬರುವ ಕೈಗಾರಿಕೆಗಳಿಗೆ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್ ಘೋಷಣೆ. ವಿದ್ಯುತ್‌ ವಾಹನ ಮತ್ತು ಇಂಧನ ಶೇಖರಣಾ ನೀತಿಯನ್ನು ಪರಿಷ್ಕರಿಸಲು ಕ್ರಮ.
    • ಎರಡು ಕಡೆಗಳಲ್ಲಿ ತಲಾ ಕನಿಷ್ಠ 500 ಎಕರೆ ಜಾಗದಲ್ಲಿ ಮುಖ್ಯಮಂತ್ರಿಗಳ ಮೆಗಾ ಸಂಯೋಜಿತ ಕೈಗಾರಿಕಾ ಟೌನ್ಷಿಪ್ಗಳ ಸ್ಥಾಪನೆ. ಮುಂದಿನ ಮೂರು ವರ್ಷಗಳಲ್ಲಿ ಸುಮಾರು 10 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಣೆ ಹಾಗೂ ಐದು ಲಕ್ಷ ಉದ್ಯೋಗಾವಕಾಶ ಸೃಷ್ಟಿಯ ನಿರೀಕ್ಷೆ. ಪೀಣ್ಯ ಕೈಗಾರಿಕಾ ಟೌನ್ಶಿಪ್ ಸ್ಥಾಪನೆ ಹಾಗೂ ಮೂಲಸೌಕರ್ಯ
      ಅಭಿವೃದ್ದಿಗೆ 100 ಕೋಟಿ ರೂ.
    • ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ಸ್ಲ್ಯಾಬ್ ನಿಗದಿಗೆ ಕ್ರಮ. ನೇಕಾರರ ಸಮ್ಮಾನ್ ಯೋಜನೆ ಮುಂದುವರಿಕೆ, ಕೈವು ಗ್ಗ ನೇಕಾರರಿಗೆ ವಾರ್ಶಿಕ ತಲಾ 2,000 ರೂ. ನೆರವು
    • ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್‌ ಸ್ಥಾಪನೆ; ಉತ್ತರ ಕರ್ನಾಟಕದ ಭಾಗದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಮಾರ್ಟ್‌ ಹ್ಯಾಂಡ್ಲೂಮ್ ಡಿಸೈನ್ ಸ್ಟುಡಿಯೋ ಸ್ಥಾಪನೆ.
    • ಗಣಿಗಾರಿಕೆ ಕ್ಷೇತ್ರದ ಸುಧಾರಣೆಗಾಗಿ ರಾಷ್ಟ್ರೀಯ ಖನಿಜ ಕಾರ್ಯನೀತಿಗೆ ಸಮಾನವಾಗಿ ರಾಜ್ಯ ಖನಿಜ ನೀತಿ 2021-2026 ಜಾರಿಗೆ ಕ್ರಮ.
    • ಗಣಿ / ಕಲ್ಲುಗಣಿಗುತ್ತಿಗೆ ಮತ್ತು ಕ್ರಷರ್ ಲೈಸನ್ಸ್ ಅರ್ಜಿ ವಿಲೇವಾರಿಗೆ ಏಕಗವಾಕ್ಷಿ ವ್ಯವಸ್ಥೆ ಜಾರಿ; ಲೈಸನ್ಸ್ ಸಂಬಂಧಿತ ಕುಂದುಕೊರತೆ ಪರಿಹಾರಕ್ಕೆ ವಿಭಾಗ ಮಟ್ಟದಲ್ಲಿ ಗಣಿ ಅದಾಲತ್ ಆರಂಭ. ಕಲಬುರಗಿ ಜಿಲ್ಲೆಯ ಫಿರೋಜಾಬಾದ್ನಲ್ಲಿ 500 ಮೆಗಾ ವ್ಯಾಟ್ ಸಾಮಥ್ರ್ಯದ ಸೌರಶಕ್ತಿ ಪಾರ್ಕ್‌ ಸ್ಥಾಪನೆ.
    • ಕೆಪಿಸಿಎಲ್ನ 400/220 ಕಿಲೋವ್ಯಾಟ್ ಉಪಕೇಂದ್ರಗಳ ಉಪಕರಣಗಳ ಬದಲಾವಣೆಯೊಂದಿಗೆ ನವೀಕರಣ ಮತ್ತು ಆಧುನೀಕರಣದ ಎರಡನೇ ಹಂತದ ಯೋಜನೆ 100 ಕೋಟಿ ರೂ. ವೆಚ್ಚದಲ್ಲಿ ಜಾರಿ. ಕೆಪಿಟಿಸಿಎಲ್ನ ಎಲ್ಲ ವಹಿವಾಟು ಮತ್ತು ಪ್ರಕ್ರಿಯೆಗಳನ್ನು ಸಮಸ್ತ್ ಯೋಜನೆಯಡಿ ಅಂತಜರ್‌ಜಾಲದ ಮೂಲಕ ಸಮನಯ್ವಯಗೊಳಿಸಲು ಕ್ರಮ.
    • ರಾಜ್ಯದಲ್ಲಿ 1,000 ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್‌ ಕೇಂದ್ರ ಸ್ಥಾಪನೆ
    • 1,000 ಮೆಗಾ ವ್ಯಾಟ್ Pumped Hydro Storage Plant ಯೋಜನೆ 4,000 ಕೋಟಿ ರೂ. ವೆಚ್ಚದ ಲ್ಲಿ ಅನುಷ್ಠಾನ. ಕರ್ನಾಟಕ ಸ್ಟಾರ್ಟ್‌ ಅಪ್ ನೀತಿ ಪರಿಷ್ಕರಣೆ. ಇ.ಎಸ್.ಡಿ.ಎಂ. ವಲಯದಲ್ಲಿ ವಿಶೇಷ ಪ್ರೋತ್ಸಾಹಕ ಯೋಜನೆ ಜಾರಿ;
      5 ವರ್ಷಗಳಲ್ಲಿ 43 ಸಾವಿರ ಉದ್ಯೋಗ ಮತ್ತು 5,000 ಕೋಟಿ ರೂ.
      ಹೂಡಿಕೆ ನಿರೀಕ್ಷೆ.
    • ಮೀನು ಮತ್ತು sea weed ಗಳಿಂದ ಲಭ್ಯವಾಗುವ bioactive compounds ಗಳನ್ನು ಉಪಯೋಗಿಸಿ ಲಘು ಆಹಾರಗಳ ತಯಾರಿಕೆಯನ್ನು ಉತ್ತೇಜಿಸಲು ಮಂಗಳೂರಿನಲ್ಲಿAdvanced Biotech Innovation Center for Aqua-Marine ಸ್ಥಾಪನೆ.
    • ನವೀನ, ಉದಯೋನ್ಮುಖ ತಂತ್ರಜ್ಞಾನದ ಸಂಸ್ಥೆಗಳಿಗೆ ಬೆಂಬಲ ನೀಡಲು 100 ಕೋಟಿ ರೂ.ಗಳ ಹೊಸVenture Capital Fund ಸ್ಥಾಪನೆ. ಸೈಬರ್ ಭದ್ರತ ಾ ಕಾರ್ಯನೀತಿ ಹಾಗೂ ದತ್ತಾಂಶ ಕೇಂದ್ರ ಕಾರ್ಯನೀತಿ ರೂಪಿಸಲು ಕ್ರಮ.ಇ.ಎಸ್.ಡಿ.ಎಂ. ವಲಯದಲ್ಲಿ ವಿಶೇಷ ಪ್ರೋತ್ಸಾಹಕ ಯೋಜನೆ ಜಾರಿ; 5 ವರ್ಷಗಳಲ್ಲಿ 43 ಸಾವಿರ ಉದ್ಯೋಗ ಮತ್ತು 5,000 ಕೋಟಿ ರೂ. ಹೂಡಿಕೆ ನಿರೀಕ್ಷೆ. ಶಿರಸಿಯಲ್ಲಿ ಏಳು ಕೋಟಿ ರೂ . ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ. 2021-22 ರಲ್ಲಿ ಎರಡು ಕೋಟಿ ರೂ. ಅನುದಾನ.
    • ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ನೀಡುವ ಉದ್ದೇಶಕ್ಕಾಗಿ 2021-22ನೇ ಸಾಲಿನಲ್ಲಿ ಒಟ್ಟಾರೆಯಾಗಿ 52,529 ಕೋಟಿ ರೂ. ಅನುದಾನ.
      ವಲಯ 4: ಬೆಂಗಳೂರು ಸಮಗ್ರ ಅಭಿವೃದ್ಧಿ
    • ಬೆಂಗಳೂರಿನ ಮಲ್ಲೇಶ್ವರದಲ್ಲಿ ಮೈಸೂ ರು ಲ್ಯಾಂಪ್ಸ್ ವರ್ಕ್‌ ನಿಯಮಿತಕ್ಕೆ ಸೇರಿದ ಪ್ರದೇಶದಲ್ಲಿ Experience Bengaluru ಕೇಂದ್ರ ಅಭಿವೃದ್ಧಿ.
    • ಬೈಯ್ಯಪ್ಪನಹ ಳ್ಳಿಯಲ್ಲಿರು ವ ಎನ್.ಜಿ.ಇ.ಎಫ್.ನಲ್ಲಿ ಹಾಗೂ ಇನ್ನೂ ಮೂರು ಕಡೆಗಳಲ್ಲಿ ವೃಕ್ಷೊದ್ಯಾನಗಳ ಅಭಿವೃದ್ಧಿ. ಬೆಂಗಳೂರು ನಗರದ ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಪ್ರಾರಂಭಿಸಲು ಕ್ರಮ.
    • 14,788 ಕೋಟಿ ರೂ.ಗಳ ಅಂದಾಜು ವೆಚ್ಚದ ಲ್ಲಿ 58.2 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆ-ಏರ್ಪೋಪೋಟ್‌ ಮೆಟ್ರೋ ಜಾಲ ಹಂತ 2ಎ ಮತ್ತು 2ಬಿ ಅನುಷ್ಠಾನ.
    • ಉಪ ನಗ ರ ರೈಲು ಯೋಜನೆಗೆ 2021-22ನೇ ಸಾಲಿಗೆ 850 ಕೋಟಿ
      ರೂ. ಅನುದಾನ.
    • ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟಮರ್ಿನಲ್ ಕಟ್ಟಡ ನಿರ್ಮಾಣ ಶೀಘ್ರ ಪೂರ್ಣ; ಗರಿಷ್ಠ ವಾರ್ಶಿಕ ಪ್ರಯಾಣಿಕರ ಸಾಮಥ್ರ್ಯ 60 ದಶ ಲಕ್ಷಕ್ಕೆ ಹಚ್ಚಳ ಕೋರಮಂಗಲ ಕಣಿವೆಯನ್ನು ಪ್ರವಾಸಿ ಆಕರ್ಷಣೆಯಾಗಿ ಅಭಿವೃದ್ಧಿ ಪಡಿಸುವ 169 ಕೋಟಿ ರೂ. ವೆಚ್ಚದಲ್ಲಿ ಕೋರಮಂಗಲ ಕಣಿವೆ ರಾಜಕಾಲುವೆ ಅಭಿವೃದ್ಧಿ ಮತ್ತು ನಿರ್ವಹಣೆ (ಕೆ-100) ಯೋಜನೆ ಅನುಷ್ಠಾನ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಅಂತಾರಾಷ್ಟ್ರೀಯ ವು ಟ್ಟದ ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್‌ ಅಭಿವೃದ್ದಿ
    • ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿ ವತಿಯಿಂದ ಬಿಬಿಎಂಪಿ ಸಹಯೋಗದೊಂದಿಗೆ 450 ಕೋಟಿ ವೆಚ್ಚದ ಲ್ಲಿ ಕೆ.ಸಿ.ವ್ಯಾಲಿ ಆವರ ಣದ 248 ಎಂ.ಎಲ್.ಡಿ ಸಾಮಥ್ರ್ಯದ ಎಸ್.ಟಿ.ಪಿ. ಪುನರುಜ್ಜೀವನ ಮತ್ತು ಉನ್ನತೀಕರಣಕ್ಕೆ ಕ್ರಮ.
    • ಆಗಸ್ಟ್ 2021 ರೊಳಗೆ ಒಂದು ರಾಷ್ಟ್ರ ಒಂದು ಕಾರ್ಡ್‌ ವ್ಯವಸ್ಥೆ ಜಾರಿಗೆ ಕ್ರಮ. ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬೆಂಗಳೂರು ಮಹಾನಗ ರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಈ ಕಾರ್ಡ್‌ ಬಳಕೆಗೆ ಅವಕಾಶ.
    • ಬೆಂಗಳೂರು ಮಹಾನಗ ರ ಸಾರಿಗೆ ಸಂಸ್ಥೆಯಲ್ಲಿAutomatic Fare Collection System ಯೋಜನೆ ಅನುಷ್ಠಾನ ಬೆಂಗಳೂರು ನಗರದ ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಮತ್ತು ಸಂಸ್ಕರಣೆಯನ್ನು ನಿರ್ವಹಿಸಲು ಪ್ರತ್ಯೇಕ ಕಂಪನಿ ಸ್ಥಾಪನೆ.
    • ಉತ್ತರ ಬೆಂಗಳೂರಿನಲ್ಲಿ ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ.
    • 28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಹಾಗೂ ಆರ್ಗನ್ ಟ್ರಾನ್ಸ್ಪ್ಲಾಂಟ್ ಸಂ ಸ್ಥೆ ಪ್ರಸಕ್ತ ಸಾಲಿನಲ್ಲಿ ಕಾರ್ಯರಂಭ
    • ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 20 ಕೋಟಿ ರೂ.ಗಳ ವೆಚ್ಚದ ಲ್ಲಿ ಜಯದೇವ ಹೃದಯರೋಗ ವಿಜ್ಞಾನ ಸಂ ಸ್ಥೆಯ 50 ಹಾಸಿಗೆ ಸಾಮಥ್ರ್ಯದ ಉಪಕೇಂದ್ರ
    • ಬಿಬಿಎಂಪಿಯ 57 ವಾರ್ಡ್‌ 10 ಕೋಟಿ ರೂ. ವೆಚ್ಚದ ಲ್ಲಿ ಜನಾರೋಗ್ಯ ಕೇಂದ್ರಗಳ ಸ್ಥಾಪನೆ. 33 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಲೆಗಳ ನವಿ ಕರಣ ಮತ್ತು ಪುನರ್ ನಿರ್ಮಾಣ.
    • ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಪ್ರತಿ ವಾರಾಂತ್ಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು 2 ಕೋಟಿ ರೂ. ಮೀಸಲು.
    • ಬೆಂಗಳೂರು ನಗರದ ಸಮಗ್ರ ಅಬಿವವೃದ್ದಿಗಾಗಿ 2021-22ನೇ ಸಾಲಿಲ್ಲಿ ಒಟ್ಟಾರೆಯಾಗಿ 7795 ಕೋಟಿ ರೂ. ಅನು ದಾನ.
      ವಲಯ 5: ಸಂಸ್ಕೃತಿ, ಪರಂಪರೆ ಹಾಗೂ ನೈಸಗಿರ್ ಕ ಸಂಪನ್ಮೂಲಗಳ ಸಂರಕ್ಷಣೆ
    • ಕಿತ್ತೂರಿನ ಕೋಟೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಪ್ರವಾಸಿ ಸೌಲಭ್ಯಗಳಿಗಾಗಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ಅನುದಾನ
    • ಬಸವಕಲ್ಯಾಣದಲ್ಲಿ 500 ಕೋಟಿ ರೂ. ವೆಚ್ಚದ ಲ್ಲಿ ಹೊಸ ಅನುಭವ ಮಂಟಪ ನಿರ್ಮಿಸುವ ಯೋಜನೆಗೆ 200 ಕೋಟಿ ರೂ. ಬಿಡುಗಡೆ; ಕಾಮಗಾರಿ ಶೀಘ್ರ ಪ್ರಾರಂಭ. ಜಗಜ್ಯೋತಿ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೆ ಶ್ವರ ಗ್ರಾಮದ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ.
    • ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಸ್ಥಾಪಿಸಲಾಗುತ್ತಿರುವ ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರಕ್ಕೆ ಸರ್ಕಾರದಿಂದ 10 ಕೋಟಿ ರೂ. ಸಹಾಯಾನುದಾನ.
    • ಅಯೋಧ್ಯೆಯಲ್ಲಿ ಸುಸಜ್ಜಿತ ಯಾತ್ರಿ ನಿವಾಸ ನಿರ್ಮಾಣಕ್ಕೆ ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಅನುದಾನ
      ರಾಜ್ಯಾದ್ಯಂತ ರಂಗಾಯಣಗಳ ಮೂಲಕ ಡಾ. ಎಸ್.ಎಲ್ ಭೈರಪ್ಪನವರ ಪರ್ವ ನಾಟಕದ ಪ್ರದರ್ಶನ. ಆದಿಕವಿ ಪಂಪನಿಂದ ಮುದ್ದಣನ ಕಾಲಘಟ್ಟದವರೆಗಿನ ಎಲ್ಲ ಕೃತಿಗಳ ಡಿಜಿಟಲೀಕರಣ; ಆನ್ಲೈನ್ನಲ್ಲಿ ಲಬ್ಯವಾಗಿಸಲು ಕ್ರಮ.
    • ಭಾರತರತ್ನ ಪಂಡಿತ್ ಭೀಮಸೇನ್ ಜೋಶಿಯವರ 100ನೆ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸಂಗೀತೋತ್ಸವ ಹಾಗೂ ವಿಚಾರ ಸಂಕಿರಣ ಆಯೋಜನೆ.
    • ಎರಡು ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾನ. ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀ ಡಾ ಮೂಲಸೌಲಭ್ಯ ಸೃಜನೆ. 10 ಕೋಟಿ ರೂ . ವೆಚ್ಚದಲ್ಲಿ ಮಂಡ್ಯ ನಗರದ ಕ್ರೀಡಾಂಗಣದ ಉನ್ನತೀಕರಣ. 2022ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ವಿಶ್ವವಿದ್ಯಾಲಯ ಕ್ರೀಡಾಕೂಟ ಆಯೋಜನೆ. ಆದಿಕವಿ ಪಂಪನಿಂದ ಮುದ್ದಣನ ಕಾಲಘಟ್ಟದವರೆಗಿನ ಎಲ್ಲ ಕೃತಿಗಳ ಡಿಜಿಟಲೀಕರಣ; ಆನ್ಲೈನ್ನಲ್ಲಿ ಲಬ್ಯವಾಗಿಸಲು ಕ್ರಮ. ಭಾರತರತ್ನ ಪಂಡಿತ್ ಭೀಮಸೇನ್ ಜೋಶಿಯವರ 100ನೆ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸಂಗೀತೋತ್ಸವ ಹಾಗೂ ವಿಚಾರ ಸಂಕಿರಣ ಆಯೋಜನೆ. ಎರಡು ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾನ.
    • ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀ ಡಾ ಮೂಲಸೌಲಭ್ಯ ಸೃಜನೆ.
    • 10 ಕೋಟಿ ರೂ . ವೆಚ್ಚದಲ್ಲಿ ಮಂಡ್ಯ ನಗರದ ಕ್ರೀಡಾಂಗಣದ ಉನ್ನತೀಕರಣ.
    • 2022ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ವಿಶ್ವವಿದ್ಯಾಲಯ ಕ್ರೀಡಾಕೂಟ ಆಯೋಜನೆ.
      ಉಡುಪಿ ಜಿಲ್ಲೆಯ ತ್ರಾಸಿ, ವು ರವಂತೆ, ಒತ್ತಿನೆಣೆ ಹಾಗೂ ಇತರೆ ಕಡಲ ತೀರಗಳನ್ನು ಅಂತಾರಾಷ್ಟ್ರೀಯ ದಜರ್ೆಗೇರಿಸಲು 10 ಕೋಟಿ ರೂ. ವೆಚ್ಚದ ಲ್ಲಿ ಸಮಗ್ರ ಅಭಿವೃದ್ಧಿ.
    • ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕು ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ.
    • ಐದು ಕೋಟಿ ರೂ. ವೆಚ್ಚದಲ್ಲಿ ನವ ಶಿಲಾಯುಗದಿಂದ ಕಬ್ಬಿಣಯುಗದ ತಾಣ ಕುಡು ತಿನಿ ಆಯಶ್ಮೌಂಡ್ (ಬೂದಿ ದಿಬ್ಬ) ಅಭಿವೃದ್ಧಿ. ಪ್ರಸಕ್ತ ಸಾಲಿನಲ್ಲಿ ಎರಡು ಕೋಟಿ ರೂ. ಅನುದಾನ.
    • ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿದಾ ಮ ಮತ್ತು ಚಿಕ್ಕಮಗಳೂರು ಜಿಲ್ಲೆ ಕೆಮ್ಮಣ್ಣುಗುಂಡಿ ತುಮಕೂರಿನಲ್ಲಿ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಸ್ಮರಣಾರ್ಥ ವು ತ್ತು ಉಡುಪಿಯಲ್ಲಿ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಗೌರವಾರ್ಥ ತಲಾ ಎರಡು ಕೋಟಿ ರೂ. ವೆಚ್ಚದ ಲ್ಲಿ ಸ್ಮೃತಿವನ ನಿರ್ಮಣ ಅಳಿವಿನಂಚಿನಲ್ಲಿರುವ ಲೆಸ್ಸರ್ ಫ್ಲೋರಿಕನ್ (ಐಜಜಡಿ ಈಟಠಡಿಛಿಚಿಟಿ) ಪಕ್ಷಿ ಪ್ರಬೇ ದ ಸಂರಕ್ಷಣೆ ಕಾರ್ಯಕ್ರಮಕ್ಕೆ 50 ಲಕ್ಷ ರೂ. ಅನುದಾನ.
    • ಮಾನವ -ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸಲು ವನ್ಯಜೀವಿಗಳ ಸುಗಮ ಮತ್ತು ಅಬಾಧಿತ ಚಲನವಲನಕ್ಕೆ ಅವಶ್ಯವಿರುವ ಎರಡು ಅರಣ್ಯ ಪ್ರದೇಶಗಳ ಮಧ್ಯದ ಕಾರಿಡಾರ್ ಪ್ರದೇಶವನ್ನು ಸರ್ಕಾರವು ಖರೀದಿಗೆ ನೀತಿ ರೂಪಿಸಲು ಕ್ರಮ.

      ವನ್ಯಜೀವಿಗಳ ಹಾವಳಿಯಿಂದ ಉಂಟಾಗುತ್ತಿರುವ ಹಾನಿ ಪ್ರಕರಣಗಳಲ್ಲಿ ತ್ವರಿತವಾಗಿ ದಯಾತ್ಮಕ ಧನ ಪಾವತಿಸುವ ನಿಟ್ಟಿನಲ್ಲಿ ಅರಣ್ಯ ಇ-ಪರಿಹಾರ ಯೋಜನೆ ಜಾರಿ. ರಾಜ್ಯದ ನಗರಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹಾಗೂ ಆಥರ್ಿಕ ಸಹಾಯದೊಂದಿಗೆ ಸ್ಮೃತಿ ವನಗಳ ನಿರ್ಮಾಣ

    • ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದ ರಾಜ್ಯದಲ್ಲಿರುವ ಅರಣ್ಯಗಳ ವಿಧ ಮತ್ತು ಸಾಂದ್ರತೆ ವಿವರಗಳನ್ನು 50 ಸೆಂಟಿ ಮೀಟರ್ ಸ್ಯಾಟ್ಲೈಟ್ ರೆಸಲ್ಯೂಷನ್ ಒಳಗೊಂಡ ನಕ್ಷೆ ತಯಾರಿಕೆ.
    • ಚಾಮರಾಜನಗರ ಜಿಲ್ಲೆಯ ಗೋಪಿನಾಥಂ ಪ್ರದೇಶದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ವನ್ಯಜೀವಿ ಸಫಾರಿಯನ್ನೊಳಗೊಂಡಂತೆ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ. ಚಾಮರಾಜನಗರ ಜಿಲ್ಲೆಯ ಬೂದಿಪಡಗಡದಲ್ಲಿ ಒಂದು ಕೋಟಿ ರೂ.
      ವೆಚ್ಚದ ಲ್ಲಿ ಆನೆ ಶಿಬಿರ ಪ್ರಾರಂಭ. ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನೂಲ್ಮಗಳ ರಕ್ಷಣೆಗೆ 2021-22ನೇ ಸಾಲಿನಲ್ಲಿ ಒಟ್ಟಾರೆಯಾಗಿ 2645 ಕೋಟಿ ರೂ ಅನುದಾನ ಒದಗಿಸಲಾಗಿದೆ.
      ವಲಯ 6: ಆಡಳಿತ ಸುಧಾರಣೆವು ತ್ತು ಸಾರ್ವಜನಿಕ ಸೇವೆ
    • ಅಶಕ್ತರು, ವೃದ್ಧರು, ವಿಧವೆಯರು ಮತ್ತು ವಿಶೇಷ ಚೆ ತನರಿಗೆ ಸರ್ಕಾರದ ದತ್ತಾಂಶ ಆಧರಿಸಿ ಪಿಂಚಣಿ ಸೌಲಬ್ಯ ನೀಡುವ ವು ನೆ ಬಾಗಿಲಿಗೇ ಮಾಸಾಶನ ಅಭಿಯಾನಕ್ಕೆ ಚಾಲನೆ.
    • ಕೃಷಿ ಭೂಮಿಯನ್ನು ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳೀಕರಿಸಲು ಭೂ ಕಂದಾಯ ಅಧಿನಿಯಮ ತಿದ್ದುಪಡಿಗೆ ಕ್ರಮ.
      ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಎಲ್ಲ ವ್ಯವಹಾರಗಳ ಗಣಕೀಕರಣಕ್ಕೆ ಕ್ರಮ.
    • ತ್ವರಿತವಾಗಿ ನಿಖರ ಭೂ-ದಾಖಲೆಗಳನ್ನು ಒದಗಿಸಲು ಗಣಕೀಕೃತ ಆಕಾರಬಂದ್ ಮಾಹಿತಿ ಮತ್ತು ಪಹ ಣಿ ಮಾಹಿತಿಯನ್ನು ಸಂಯೋಜಿಸಲು ಕ್ರಮ.
    • 25 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಜನ ವಸತಿ ಪ್ರದೇಶಗಳಿಗೆ ಹಕ್ಕು ದಾಖಲೆಗಳನ್ನು ವಿತರಿಸುವ ಸ್ವಾಮಿತ್ವ ಯೋಜನೆ ಅನು ಷ್ಠಾನ.
    • ನಗರ ಮಾಪನ ಜಾರಿಯಲ್ಲಿರುವ 48 ನಗರ ಮತ್ತು ಪಟ್ಟಣಗಳ ಎಲ್ಲಾ
      ನಗರಮಾಪನ ದಾಖಲೆಗಳ ಸಂರಕ್ಷಣೆಗೆ ಕ್ರಮ.
    • ಮೂಲ ಗೇಣಿದಾರರು, ಕುಮ್ಕಿ ಜಮೀನು , ಖಾನೇ, ಬಾನೇ, ಡೀಮ್ಡ್ ಅರಣ್ಯ ಸಾಗುವಳಿದಾರರ ಸಮಸ್ಯೆಗಳ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ ರಚನೆ
    • ಊಖಒಖ-2 ಯೋಜನ ಅಡಿಯಲ್ಲಿ ಸರ್ಕಾರದ ರಾಜ್ಯದ ಎಲ್ಲಾ ಸರ್ಕಾರಿ ನೌಕರರ ಸೇವೆಗಳನ್ನು ಆನ್ಲೈನ್ ಮೂಲಕ ಜಾರಿಗೊಳಿಸಲು ಕ್ರಮ ಕೌಟುಂಬಿಕ ಗುರುತು ಸೃಜನೆ ಹಾಗೂ ಸ್ವಯಂ ಪ್ರೇರಣೆಯಿಂದ ನಾಗರಿಕರಿಗೆ ಸೇವೆ/ ಸೌಲಭ್ಯಗಳನ್ನು ಒದಗಿಸಲು ಸಾಮಾಜಿಕ ನೋಂದಣಿ ಪುಸ್ತಕ ಮತ್ತು ಅರ್ಹ ತಾ ನಿರ್ವಹಣಾ ವ್ಯವಸ್ಥೆ ಜಾರಿಗೆ 15 ಕೋಟಿ ರೂ. ಅನುದಾನ.
    • ಫಲಾನು ಬವಿ ಗಳಿಗೆ ಆರ್ಥಿಕ ನೆರವು ನೀಡುವ ಎಲ್ಲಾ ಯೋಜನೆಗಳಿಗೂ ನೇರ ಫಲಾನುಭವಿ ವರ್ಗಾವಣೆ (ಡಿಬಿಟಿ) ವೇದಿಕೆಯಡಿ ಪಾವತಿ ವ್ಯವಸ್ಥೆ ವಿಸ್ತರಣ ಆಸ್ತಿ ನೋಂದಣಿಯಲ್ಲಿ ವಂಚನೆ ಹಾಗೂ ದಾಖಲೆ ತಿರುಚುವುದನ್ನು ತಡೆಗಟ್ಟಲು ಬ್ಲಾಕ್ಚೈನ್ ತಂತ್ರಜ್ಞಾನ ಬಳಸಿ ಆಸ್ತಿ ನೋಂದಣಿ ಮಾಡುವ ಪ್ರಾಯೋಗಿಕ ಯೋಜನೆ.
    • ಸೆಂಟರ್ ಫಾರ್ ಸ್ಮಾಟರ್‌ ಗರ್ವನೆನ್ಸ್‌ ಮೂಲಕ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ ಜಾರಿ. ರಾಜ್ಯ ದತ್ತಾಂಶ ಕೇಂದ್ರದ ಸೈಬರ್ ಸುರಕ್ಷತೆ ಬಲಪಡಿಸಲು ಎರಡು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಭದ್ರತಾ ಕಾಯರ್ಾಚರಣೆ ಕೇಂದ್ರ ಸ್ಥಾಪನೆ
    • 35 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ದತ್ತಾಂಶ ಕೇಂದ್ರದ ವಿಪತ್ತು ಚೇತರಿಕೆ ಮತ್ತು ವ್ಯವಹಾರ ಮುಂದುವರಿಕೆ ತಾಣಕ್ಕೆ ಚಾಲನೆ.
      ಮೂರು ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಶೈಕ್ಷಣಿಕ ದಾಖಲೆಗಳು, ಪ್ರಶಸ್ತಿಗಳ ಮಾಹಿತಿಗಳನ್ನೊಳಗೊಂಡ ರಾಷ್ಟ್ರೀಯ ಶೈಕ್ಷಣಿಕ ಡೆಪಾಸಿಟರಿ ಅನುಷ್ಠಾನ