;

ಸೋಮಲಿಂಗಪ್ಪರಿಗೆ ಒಲಿಯದ ಮಂತ್ರಿ ಭಾಗ್ಯ ???

ವರದಿ. ವಿರೇಶ್ ಸಿರುಗುಪ್ಪ

ಎಚ್ಚರಿಕೆ ಕನ್ನಡ ನ್ಯೂಸ್ ಓದುಗರಿಗೆ ನಮಸ್ಕಾರಗಳು* ದಿವಂಗತ ಎಂ.ಸಿದ್ದಪ್ಪ ಸಿರುಗುಪ್ಪ ತಾಲೂಕು ತೆಕ್ಕಲಕೋಟೆಯ ಪ್ರಭಾವಿ ಮುಖಂಡ ಬಡವರ ಪರವಾಗಿ ಹೋರಾಟ ಮತ್ತು ಕಾಳಜಿಯಿದ್ದ ಧೀಮಂತ ನಾಯಕ.. ಅವರ ಮಗ ಸಿರುಗುಪ್ಪ ಕ್ಷೇತ್ರದ ಶಾಸಕರಾದ ಜನನಾಯಕ ಬಡವರು ಮತ್ತು ಶೋಷಿತರ ಪರವಾಗಿರುವ.ದಿನದಲಿತರ ಆಶಾಕಿರಣ.ಸರಳತೆಯ ನಾಯಕ ಸೋಮಲಿಂಗಪ್ಪ.ಬಳ್ಳಾರಿ ಜಿಲ್ಲೆಯ ಬಿಜೆಪಿಯ ಹಿರಿಯ ನಾಯಕರಲ್ಲಿ ಇವರು ಬಬ್ಬರು.ಸಿರುಗುಪ್ಪ ಕ್ಷೇತ್ರದಿಂದ್ದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಅದರೂ ಮಂತ್ರಿಭಾಗ್ಯದ ಅದೃಷ್ಟ ಕೂಡಿಬಂದಿಲ್ಲ. 2011ರಲ್ಲಿ ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಯಡ್ಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ್ದ ಪಲ್ಲಟವಾದ ನಂತರ ಸದಾನಂದಗೌಡ ಸಚಿವ ಸಂಪುಟ ಬಳ್ಳಾರಿ ಜಿಲ್ಲೆಯಯಿಂದ ಇಬ್ಬರಿಗೆ ಮಂತ್ರಿಯಾಗುವ ಭಾಗ್ಯವಿತ್ತು ಅದರಲ್ಲಿ ಶಾಸಕ ಸೋಮಲಿಂಗಪ್ಪಗೆ ಅದೃಷ್ಟದ ಬಾಗಿಲು ತೆಗೆದು ಮುಚ್ಚಿದಂತ್ತಾಯಿತು.ಅ ಸಮಯದಲ್ಲಿ ಕೂಡ ಸಚಿವರಾಗುವ ಅದೃಷ್ಟ ದೊರೆಯಲಿಲ್ಲ .2013-14 ರಲ್ಲಿ ಶ್ರೀರಾಮುಲು ಬಿಜೆಪಿ ಪಕ್ಷ ತ್ಯಜಿಸಿ ಬಿ.ಎಸ್. ಆರ್ ಪಕ್ಷ ಸ್ಥಾಪನೆ ಮಾಡಿ . 2017ರಲ್ಲಿ ಮತ್ತೆ ಮರಳಿ ಬಿಜೆಪಿ ಗೂಡಿಗೆ ಬಂದರು. ಒಂದು ಅಂಶವನ್ನು ಗಮನಿಸಬೇಕು ಸೋಮಲಿಂಗಪ್ಪರು.2014 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋತರು ಅದರೆ ಪಕ್ಷವನ್ನು ತ್ಯಜಿಸಿಲಿಲ್ಲ.ಸಂಘಟನೆ ಮಾಡಿ 2018ರಲ್ಲಿ ಶಾಸಕರಾಗಿ ಆಯ್ಕೆಯಾದರು.ನಿಷ್ಠಾವಂತ ಶಿಸ್ತಿನ ಸಿಪಾಯಿಗೆ ಮಂತ್ರಿಸ್ಥಾನ ದೊರೆಯಬೇಕಿತ್ತು ಎನ್ನುವುದು ಕ್ಷೇತ್ರದ ಜನರ ಆಶಯವಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರ ಪತನವಾದ ನಂತರ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಡಳಿತದ ಚುಕ್ಕಾಣಿ ಹಿಡಿಯಿತು ಅ ಸಮಯದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಭಾಜಪದಿಂದ ಇಬ್ಬರು ಶಾಸಕರು ಆಯ್ಕೆಯಾಗಿದ್ದರು .ಅದರಲ್ಲೂ ಎಂ ಎಸ್ ಎಸ್. ನಿಷ್ಠಾವಂತ ಹಿರಿಯ ಶಾಸಕರಾಗಿದ್ದಾರೆ.ಹಿರಿತನದ ಆಧಾರದ ಮೇಲೆ ಸಚಿವರಾಗುವ ಅದೃಷ್ಟ ದೊರೆಯುತ್ತದೆ ಎಂದು ಎಲ್ಲಾರು ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡಿದ್ದರು. ತುಪ್ಪ ರೋಟಿ ಮೇಲೆ ಬಿದ್ದು ಜಾರಿದ ಹಾಗೆಇತ್ತು .ಜನರ ಆಸೆಗೆ ತಣ್ಣಿರುಎರಿಚಿ ಮೊಣಕಾಲ್ಮೂರು(ಚಿತ್ರದುರ್ಗ) ಕ್ಷೇತ್ರದ ಶಾಸಕರಾದ ಶ್ರೀರಾಮುಲುಗೆ ಸಚಿವ ಸ್ಥಾನ ಕೊಟ್ಟು ನಿಮ್ಮ ಜಿಲ್ಲೆಯವರೆ ಮಂತ್ರಿ ಅಗಿದ್ದರೆಂದು ಸೂಕ್ಷ್ಮವಾಗಿ ಜಾರಿಕೊಂಡರು. ಅನರ್ಹ ಶಾಸಕರು ಅರ್ಹ ಶಾಸಕರಾದ ನಂತರ ಮಂತ್ರಿಮಂಡಳ ಪುನರ್ ರಚನೆಯಾಯಿತು .ಅವರು ಸಚಿವ ಸಂಪುಟ ಸೇರ್ಪಡೆಗೊಳ್ಳುವ ಸಂದರ್ಭದಲ್ಲಿ ಎಂ ಎಸ್ ಎಸ್ ರಿಗೆ ಮಂತ್ರಿ ಭಾಗ್ಯ ದೊರೆಯುತ್ತದೆಂದು ಕ್ಷೇತ್ರದ ಜನತೆ. ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಜಾಸ್ತಿಯಾಗಿತ್ತು ಅವಾಗ ಕೂಡ ನಿರಾಸೆಯಾಯಿತು. ಸೋಮಲಿಂಗಪ್ಪರು ಮಂತ್ರಿಸ್ಥಾನ ದೊರಯಲ್ಲಿಲ್ಲವೆಂದು ದೃತಿಗೆಡದೆ ಯಾವುದೇ ಅಧಿಕಾರಿದ ಅಸೆ ಪಡೆದೆ ಶಾಸಕರಾಗಿ ಉತ್ತಮವಾಗಿ ಅಡಳಿತವನ್ನು ಮಾಡುತ್ತಿದ್ದಾರೆ. ಮಕ್ಕಳಾದ ಎಂ ಎಸ್ ವೆಂಕಟಪ್ಪ.ಮತ್ತು ಎಂ ಎಸ್ ಸಿದ್ದಪ್ಪರವರು ತಂದೆಯ ಜೊತೆಗೆ ಕ್ಷೇತ್ರದಲ್ಲಿ ಉತ್ತಮ ಕೆಲಸ ಕಾರ್ಯಗಳ ಮಾಡುತ್ತ ಬಡವರು ಶೋಷಿತರ ಬಗ್ಗೆ ಕಾಳಜಿ ಹೊಂದಿದ್ದಾರೆ .ಸಿರುಗುಪ್ಪ ಕ್ಷೇತ್ರಕ್ಕೆ ಸುಮಾರು 25 ರಿಂದ30 ವರ್ಷಗಳ ಹಿಂದೆ ರಾಮಯ್ಯಶೆಟ್ಟಿ ಶಾಸಕರಾಗಿದಾಗ ಒಲಿದ ಬಂದ ಮಂತ್ರಿ ಭಾಗ್ಯ ಮತ್ತೆ ಕೂಡಿಬಂದಿಲ್ಲ .ಏನೇ ಅಗಲ್ಲಿ ಯಡಿಯೂರಪ್ಪ ಸಚಿವ ಸಂಪುಟ ಮತ್ತೆ ಪುನರ್ ರಚನೆಯಾದರೆ ಸೋಮಲಿಂಗಪ್ಪನವರ ಮೂಲಕ ಸಿರುಗುಪ್ಪ ಕ್ಷೇತ್ರಕ್ಕೆ ಮಂತ್ರಿ ಭಾಗ್ಯ ಒಲಿದು ಬರಲಿ ಎಂಬುದು ಜನರು ಮತ್ತು ಅಭಿಮಾನಿಗಳ ಬಹು ನಿರೀಕ್ಷೆಯಾಗಿದೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;