;

ಎಂ,ಬಿ,ಅಯ್ಯನಹಳ್ಳಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ಆಯೋಜನೆ ಮತ್ತು ಸ್ಮರಣೆ…!!!

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು

ವಿದ್ವಾನ್ ಬಿ.ಎಂ. ಗುರುಸಿದ್ದಯ್ಯನವರ ಸ್ಮರಣೆ ಹಾಗೂ ದತ್ತಿ ಉಪನ್ಯಾಸ,ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಎಂ.ಬಿ.ಅಯ್ಯನಹಳ್ಳಿ ವಚನಸಾಹಿತ್ಯವು ಭೂತ ಭವಿಷ್ಯ ವರ್ತಮಾನ ಕಾಲ ಎಲ್ಲಾ ಕಾಲ ಘಟ್ಟದಲ್ಲಿಯೂ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬಲ್ಲ ವಸ್ತು ಸತ್ಯತೆಯನ್ನು ತನ್ನಲ್ಲಿ ಅಡಗಿಸಿಕೊಂಡಿದೆ .ಎಂದು ಶಿಕ್ಷಕ ಬಿ.ಎಂ. ರಾಜಶೇಖರ ನುಡಿದರು. ಎಂ ಬಿ ಅಯ್ಯನಹಳ್ಳಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ಕೂಡ್ಲಿಗಿ ಆಯೋಜಿಸಿದ್ದ ಸ್ಮರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಕಲುಷಿತ ಸಮಾಜವು ತಿಳಿದುಕೊಳ್ಳಲು ವಚನ ಸಾಹಿತ್ಯದ ಅಧ್ಯಯನ ಅರಿವು ಆಚರಣೆ ಹಿಂದಿಗಿಂತಲೂ ಇಂದು ಅತ್ಯವಶ್ಯಕ ವಾದದ್ದು. ವಿದ್ಯಾರ್ಥಿಗಳು ಯುವಜನತೆ ವಚನ ಸಾಹಿತ್ಯವನ್ನು ಹೆಚ್ಚಾಗಿ ಅಭ್ಯಾಸ ವಾಗಬೇಕು ಎಂದು ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಎನ್.ಎಂ. ರವಿಕುಮಾರ್ ನುಡಿದರು .ನಿವೃತ್ತ ಶಿಕ್ಷಕರಾದ ಕೆಎನ್ ಶರಣಬಸಯ್ಯ ನವರು ಅಧ್ಯಕ್ಷತೆ ವಹಿಸಿಕೊಂಡಿದ್ದ ವಹಿಸಿದ್ದು. ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ,ಎಚ್, ಚಿದಾನಂದಪ್ಪ ನವರು ಉದ್ಘಾಟಿಸಿದರು ,ನಿವೃತ್ತ ಶಿಕ್ಷಕರಾದ ಮಾಧವ ರೆಡ್ಡಿ ,ಸಾಹಿತಿ ಪ್ರಭುದೇವ್. ನಿವೃತ್ತ ಶಿಕ್ಷಕರಾದ ಸಾ,ಮ, ಸಂಗಮೇಶ್ವರ ಯ್ಯ, ನಾಗನಗೌಡ ಕೆ ,ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಶೇಖರಯ್ಯ ಗೆದ್ದಲಗಟ್ಟೆ, ಜಯಮೂರ್ತಿ ನಿ ವೃತ್ತ ಶಿಕ್ಷಕರು ಹುಲಿಕೆರೆ. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೆಚ್ ಅರುಣ್ ಕುಮಾರ್. ಬಿಎಂ ಶಿವಪ್ರಕಾಶ ಕೆಂಚಮ್ಮನಹಳ್ಳಿ. ಮುಂತಾದವರು ಉಪಸ್ಥಿತರಿದ್ದರು.
ಮತ್ತು ಶಿಕ್ಷಕ ವೃಂದಮತ್ತು ಮಕ್ಕಳು ,ನಿವೃತ್ತ ಶಿಕ್ಷಕರಾದ ಕೆ. ಬಸಯ್ಯ ಸ್ವಾಗತಿಸಿದರು ಕಾರ್ಯಕ್ರಮವನ್ನು ನಿರೂಪಿಸಿದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;