;

ಚಿಕ್ಕೊಬನಹಳ್ಳಿ: ಶ್ರೀ ಕಂಚಿ ಓಬಳೇಶ್ವರ ಸ್ವಾಮಿಯ ಜಾತ್ರೆ ಉತ್ಸವ ವಿಜೃಂಭಣೆ..!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕೊಬನಹಳ್ಳಿ ಗ್ರಾಮದಲ್ಲಿ ಇಂದು 28-02-2021ರ ಶ್ರೀ ಕಂಚಿ ಓಬಳೇಶ್ವರ ಸ್ವಾಮಿಯ ಪೂಜಾರಿಗಳು, ದಾಸಯ್ಯನವರು ದೇವರ ಮುಂದೆ ಕುಣಿತ ಪ್ರದರ್ಶಿಸಿದರು. ಚಿಕ್ಕೊಬನಹಳ್ಳಿ ಗ್ರಾಮದ ಶ್ರೀ ಕಂಚಿ ಓಬಳೇಶ್ವರ ಸ್ವಾಮಿ ದೀವಳಿಗೆಯು ಘಂಟೆ ನಾದಗಳ ಝೇಂಕಾರ, ಶಂಖ, ಜಾಗಟೆಯ ನಾದ, ತಮಟೆ ವಾದ್ಯಗಳ ದಾಸಯ್ಯರು, ಪೂಜಾರಿಗಳ ಕುಣಿತ ಭಕ್ತರ ಹರ್ಷೋದ್ಘಾರ, ಬೆಲ್ಲ ಬಾಳೆಹಣ್ಣಿನ ಸೇವೆಯು ನೋಡುಗರಿಗೆ ನಮ್ಮ ಬುಡಕಟ್ಟಿ ಸಂಸ್ಕೃತಿಯನ್ನು ಅನಾವರಣ ಮಾಡಿಸಿದಂತಿತ್ತು. ಇಂತಹ ಅಪರೂಪದ ಆಚರಣೆ ನಡೆದಿದ್ದು ಶನಿವಾರ ರಾತ್ರಿ ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದ ಚಿನ್ನಹಗರಿ ನದಿಯಲ್ಲಿ ಬುಡಕಟ್ಟು ಆಚರಣೆಗಳ ತಾಣವಾಗಿರುವ ಚಿಕ್ಕೋಬನಹಳ್ಳಿ ದೇವಸ್ಥಾನದ ಆವರಣದಲ್ಲಿ ಶ್ರೀಕಂಚಿ ಓಬಳೇಶ್ವರಸ್ವಾಮಿ ಸನ್ನಿಧಿಯಲ್ಲಿ ಭಾನುವಾರ ದೀವಳಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಇಂದು ಮಣೇವು ಕಾರ್ಯಕ್ರಮ ಜರುಗಿತು. ಈ ಜಾತ್ರೆಗೆ ಮೊಳಕಾಲ್ಲೂರು, ಚಳ್ಳಕೆರೆ ಅಜ್ಜನರು, ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಹೂಡೇಂ ಅಜ್ಜನರು, ಹಾಗೂ ಸೌಳಿಕೆರೆ ಅಜ್ಜನವರು, ಪೂಜಾರಿ ಅಜ್ಜನರು, ಮಾಳೆಹಳ್ಳಿ ಅಜ್ಜನರು, ಹಾಗೂ ಅಬ್ಬಯ್ಯನಹಳ್ಳಿ, ಮಳೆಹಳ್ಳಿ, ಮೂರು ಅಜ್ಜನರು ಭಕ್ತರು ಆಗಮಿಸಿದ್ದರು. ಧಾರ್ಮಿಕ ವಿಧಿ ವಿಧಾನಗಳು ನೋಡುಗರಿಗೆ ಅಚ್ಚರಿ ಮೂಡಿಸಿದವು. ದಾಸಯ್ಯ, ಪೂಜಾರಿಗಳ ಕುಣಿತವಂತೂ ಪೂರ್ವಜರ ಬದುಕಿನ ಸಂಸ್ಕೃತಿ ಮೌಲ್ಯಗಳನ್ನು ಬಿಂಬಿಸುವಂತಿತ್ತು. ಅಪಾರ ಭಕ್ತರು ಶನಿವಾರ ರಾತ್ರಿ ಇಲ್ಲಿಯ ಜಾತ್ರೆಯ ನೋಡಲು ಸಡಗರದಿಂದ ಆಗಮಿಸಿದ್ದರು. ಗಂಗೆ ಪೂಜೆಯ ನಂತರ ವಿಜ್ರಂಭಣೆಯಿಂದ ಕಳಸ, ಕುಂಭ, ವಿವಿಧ ವಾದ್ಯಗಳೊಂದಿಗೆ, ವಿದ್ಯುತ್ ಅಲಂಕಾರ, ನೋಡುಗರ ಕಣ್ಣು ಸುಂದರವಾಗಿ ಕಂಡಿತು. ಪೂಜಾರಿ, ದಾಸಯ್ಯಗಳು ಅಡಿಮುಡಿಯಿಂದ ತಮ್ಮ ಆಚರಣೆಯಲ್ಲಿ ಸುತ್ತಮುತ್ತಲಿನ ಸಾವಿರಾರು ಭಕ್ತರು ಆಗಮಿಸಿದ್ದರು. ಮಂಜುನಾಥ ಎಚ್ ಹೂಡೇಂ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;