ಕುತೂಹಲ ಮೂಡಿಸಿದ ಬಿ.ಜಿ ಕೆರೆ ಗ್ರಾ.ಪಂ ಅಂತೂ ಕಾಂಗ್ರೆಸ್ ತೆಕ್ಕೆಗೆ: ಅಧ್ಯಕ್ಷರು ಶ್ರೀಮತಿ ರಾಧಮ್ಮ.!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು: ತಾಲೂಕಿನ ಬಿ.ಜಿ.ಕೆರೆ ಗ್ರಾಪಂ ಆಡಳಿತ ಕಾಂಗ್ರೆಸ್ ಪಕ್ಷ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅಧ್ಯಕ್ಷರಾಗಿ ಬಿ.ರಾಧಮ್ಮ ನಾಗರಾಜ, ಉಪಾಧ್ಯಕ್ಷರಾಗಿ ಶಿವಾರೆಡ್ಡಿ ಆಯ್ಕೆಯಾಗಿದ್ದಾರೆ.
26 ಸದಸ್ಯ ಬಲ ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಿ.ರಾಧಮ್ಮ ನಾಗರಾಜ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಜ್ಯೋತಿ ಸುರೇಶ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಿವಾರೆಡ್ಡಿ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೇಶವ ಮೂರ್ತಿ ಸ್ಪರ್ಧಿಸಿದ್ದರು.ಈ ಪೈಕಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಧಮ್ಮ ನಾಗರಾಜ, ಉಪಾಧ್ಯಕ್ಷರಾಗಿ ಶಿವಾರೆಡ್ಡಿ 15 ಮತಗಳು ಪಡೆದು ಜಯಶೀಲರಾದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಜ್ಯೋತಿ, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕೇಶವ ಮೂರ್ತಿ 11 ಮತಗಳು ಪಡೆದು ಪರಾಭವಗೊಂಡರು. ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡ ಡಾ.ಬಿ.ಯೋಗೇಶ ಬಾಬು, ಮಹದೇವಪುರ ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಪನಾಯಕ, ಕಾರ್ಯದರ್ಶಿ ಶ್ರೀನಿವಾಸಲು, ಮುಖಂಡರಾದ ವೈ.ಡಿ.ಬಸವರಾಜ, ಜಿ.ಪಿ.ಸುರೇಶ, ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ದರ್ಶನ್, ರಾಯಾಪುರ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಮತ್ತಿತರರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend