ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಗಿರಿಯಮ್ಮನಹಳ್ಳಿ ಕ್ರಾಸ್:ಜೆಸಿಬಿ ಡಿಕ್ಕಿ ಓರ್ವ ಮೃತ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡುಮುಣುಗು ಗ್ರಾಮದ ಬೈಕ್ ಸವಾರನೋರ್ವ,ಬೈಕ್ ಜೆಸಿಬಿ ನಡುವೆ ಡಿಕ್ಕಿಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಜರುಗಿದೆ.ಮೃತಪಟ್ಟ ಬೈಕ್ ಸವಾರ ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮದ ಕೆ.ನಾಗರಾಜ(50) ಎಂದು ತಿಳಿದುಬಂದಿದೆ.ಈತನು ತನ್ನ ಸಂಬಂಧಿಕರೋಬ್ಬರ ಅಂತ್ಯಕ್ರಿಯೆ ಮುಗಿಸಿಕೊಂಡು,ಬೈಕ್ ನಲ್ಲಿ ಊರಿಗೆಹಿಂದಿರುಗುತಿದ್ದಾಗ ಅಪಘಾತ ಸಂಭವಿಸಿ ಮೃತಪಟ್ಟಿದ್ದಾನೆ.ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರದಿಂದ ಸ್ನೇಹಿತನ ಜೊತೆ ಬೈಕ್ ನಲ್ಲಿ ಸ್ವಗ್ರಾಮಕ್ಕೆ ಬರುತ್ತಿದ್ದಾಗ, ತಳಕು ಠಾಣಾ ವ್ಯಾಪ್ತಿಯ ಗಿರಿಮ್ಮನಹಳ್ಳಿ ಕ್ರಾಸ್ ಬಳಿ ಜೆಸಿಬಿ ಡಿಕ್ಕಿ ಹೊಡೆದಿದೆ.ನಾಗರಾಜ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ,ತೀವ್ರವಾಗಿಗಾಯಗೊಂಡಿದ್ದ ಆತಮ ಸ್ನೇಹಿತನನ್ನು ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.ಪ್ರಕರಣ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. *ಡಿ ಎಂ ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
