ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಖಿಲ ಭಾರತ ಕಮ್ಯುನಿಸ್ಟ್ ಪಕ್ಷ , ದಲಿತ ಸಂಘರ್ಷ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಕಛೇರಿಯಲ್ಲಿ 5-6 ತಿಂಗಳುಗಳಿಂದಲೂ ಖಾಯಂ ತಹಶೀಲ್ದಾರ್ರವರು ಇಲ್ಲದೆ ರೈತರಿಗೆ ಕೂಲಿಕಾರ್ಮಿಕರಿಗೆ, ಮಹಿಳೆಯರಿಗೆ ಶಾಲಾಮಕ್ಕಳಿಗೆ ಸರ್ಕಾರ ಸೌಲಭ್ಯಕ್ಕೆ ಅಗತ್ಯ ದಾಖಲೆಗಳಿಗೆ ಪರದಾಡುವಂತಾಗಿದೆ ಎಂದು ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬೆಳಗಲ್ ಈಶ್ವರಯ್ಯ ತಿಳಿಸಿದರು ತಹಶೀಲ್ದಾರ್ರವರ ಕಛೇರಿಗೆ ಮುತ್ತಿಗೆ ಹಾಕಿ ಮಾತನಾಡಿದರು. ತಾಲ್ಲೂಕು ಕಛೇರಿಗೆ ಈಗಿನ ತಹಶೀಲ್ದಾರ್ 3-4 ದಿನಕ್ಕೊಮ್ಮೆ ಬಂದು ಹೋಗುತ್ತಾರೆ ಅವರು ಬರುವ ಸಮಯ ಸಾರ್ವಜನಿಕರಿಗೆ ತಿಳಿಯದೇ ಹಳ್ಳಿಗಳಿಂದ ಬರುವ ಜನರು ದಿನಾಲು ಕಛೇರಿಗಳಿಗೆ ಅಲೆದಾಡುವಂತಾಗಿದ್ದು, ಹಿಂದುಳಿದ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲ್ಲೂಕಿಗೆ ಅಧಿಕಾರಿಗಳ ನೇಮಕವಾಗದೆ ಇರುವುದರಿಂದ ಮತ್ತೆ ಹಿಂದುಳಿಯುವ ಬಾರಿ ಸಂಕಷ್ಟಕ್ಕೆ ಜನರನ್ನು ದೂಡಿದ್ದಾರೆ.

ತಹಶೀಲ್ದಾರ್ ಇಲ್ಲದೆ ತಾಲ್ಲೂಕಿನಲ್ಲಿ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಭೂಮಿ ದಾಖಲಾತಿಗಳು ಜಾತಿ ಪ್ರಮಾಣ ಪತ್ರ, ಬಗರ್ ಹುಕುಂ ಸರ್ವೆ ಕೆಲಸ , ಬೆಳೆ ವಿಮೆ, ವೃದ್ಧಾಪ್ಯ ವೇತನ, ಕಾರ್ಮಿಕರ ನೊಂದಣಿ ಕಾರ್ಡು, ಇನ್ನಿತರ ಕೆಲಸ ಸೌಲಭ್ಯಗಳನ್ನು ಪಡೆಯುವಲ್ಲಿ ಸಾರ್ವಜನಿಕರು ಪರದಾಡುವಂತಾಗಿದೆ ಆದ್ದರಿಂದ ತಕ್ಷಣವೇ ರಾಜ್ಯ ಸರ್ಕಾರ ಗಮನಹರಿಸಿ ತಾಲ್ಲೂಕು ಕಛೇರಿಗೆ ತಹಶೀಲ್ದಾರ್ ನೇಮಕ ಮಾಡಬೇಕೆಂದು ಒತ್ತಾಯಿಸಿ ಸಂಯುಕ್ತ ಸಂಘಟನೆಗಳು ತಾಲ್ಲೂಕು ಕಛೇರಿಗೆ ಮುತ್ತಿಗೆ ಹಾಕಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ಕೆರೆಕೊಂಡಾಪುರ ಪರಮೇಶ್ವರಪ್ಪ, ಕಾಂ.ಜಾಫರ್ ಶರೀಫ್, ಸೂರಮ್ಮನಹಳ್ಳಿ ರಾಜಣ್ಣ, ಪೆನ್ನಯ್ಯ, ಕಾಮಯ್ಯ, ಅಮುಕುಂದಿ ಈರಣ್ಣ, ದಡಗೂರು ವೆಂಕಟೇಶ್, ಬಸಣ್ಣ, ಜಯಮ್ಮ ಲಕ್ಷ್ಮದೇವಿ ಇನ್ನು ಮುಂತಾದವರು ಭಾಗವಹಿಸಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
