ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ. 10 2 2021 ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು*
*ತಾಲೂಕಿನ ಗುಂಡುಮುಣುಗು ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು* ಈ ದಿನ ರಾಂಪುರ ದಲ್ಲಿರುವ ಮಾನ್ಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರ ನಿವಾಸಕ್ಕೆ ಹೋಗಿ ಮಾನ್ಯ ಶಾಸಕರನ್ನು ಅಭಿನಂದಿಸಿದರು.

ಮಾನ್ಯ ಶಾಸಕರು ಸದಸ್ಯರಿಗೂ ಹಾಗೂ ಅಧ್ಯಕ್ಷರಿಗೆ ಗ್ರಾಮ ಪಂಚಾಯಿತಿಗೆ ಬರುವ ಅನುದಾನಗಳನ್ನು ಸರಿಯಾದ ರೀತಿಯಲ್ಲಿ ಫಲಾನುಭವಿಗಳಿಗೆ ತಲುಪಿಸಿ ಯಾವುದೇ ಪಕ್ಷಬೇಧವಿಲ್ಲದೆ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿಕಾರ್ಮಿಕರಿಗೆ ಕೆಲಸಗಳನ್ನು ಕೊಡಿಸಿ ವಲಸೆ ಹೋಗುವುದನ್ನು ತಪ್ಪಿಸಿ. ಹಾಗೂ ಗ್ರಾಮದ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ಕೊಡಿರಿ ಎಂದು ಹೇಳಿದರು. ಶಾಸಕರು ಕ್ಷೇತ್ರಕ್ಕೆ ಮುಂಜೂರು ಮಾಡಿದ ವಸತಿ ನಿಲಯಗಳ ಕಟ್ಟಡ ವೈದ್ಯಾಧಿಕಾರಿಗಳ ಕಟ್ಟಡ ಹಾಗೂ ಸಿಬ್ಬಂದಿ ಕಟ್ಟಡ ಗ್ರಾಮದ ರಸ್ತೆಗಳ ಕಾಮಗಾರಿಗಳ ಬಗ್ಗೆ ಇನ್ನೂ ಅನೇಕ ಸೌಲಭ್ಯಗಳ ಕುರಿತು ಮಾತನಾಡಿದರು. ಈ ಒಂದು ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ರತ್ನಮ್ಮ ಪ್ರಕಾಶ್ ರವರು ಗುಂಡುಮುಣುಗು ಕೆಟಿ ತಿಪ್ಪೇಸ್ವಾಮಿ ಪ್ರಥಮ ದರ್ಜೆ ಗುತ್ತಿಗೆದಾರರು . ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
