ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು/ ಇಂದು ಫೆಬ್ರವರಿ-10-2021 ಕೋನಸಾಗರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಂಗಮ್ಮ- ಸಣ್ಣ ಕೊಲ್ಲರಪ್ಪ ಪರಿಶಿಷ್ಟ ಜಾತಿ ಕೋನಸಾಗರ. ಉಪಾಧ್ಯಕ್ಷರಾಗಿ ಪಿ ಸಣ್ಣ ಪಾಲಯ್ಯ ಪತ್ರಕರ್ತರು ಪರಿಶಿಷ್ಟ ಪಂಗಡ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಕೋನಸಾಗರ ಗ್ರಾಮ ಪಂಚಾಯಿತಿಯ ಒಟ್ಟು 21 ಸದಸ್ಯರ ಬಲ ಹೊಂದಿದ್ದು 8 ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳು, 13 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೈರಾಗಿದ್ದರು ಎಂದು ಚುನಾವಣಾ ಅಧಿಕಾರಿ ಇಓ ಪ್ರಕಾಶ್ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸಚಿವ ಶ್ರೀರಾಮುಲು ಆಪ್ತ ಕಾರ್ಯದರ್ಶಿಯಾದ ಪಾಪೇಶಿ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರು ಜಗದೀಶ್, ಹಾಗೂ ಮೊಳಕಾಲ್ಮೂರು ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್, ಹಾಗೂ ಪೊಲೀಸ್ ಠಾಣೆ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವೇಂದ್ರಪ್ಪ ಸಿ.ಎನ್, ಚಂದ್ರಣ್ಣ ಕಾರ್ಯದರ್ಶಿ, ಪಂಚಾಯತಿ ಸಿಬ್ಬಂದಿ ವರ್ಗದವರು ಹಾಗೂ 21, ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
