ಮೊಳಕಾಲ್ಮೂರು: 5 ಗ್ರಾಮ ಪಂಚಾಯಿತಿಗಳ ಪೈಕಿ ನಾಲ್ಕು ಬಿಜೆಪಿಗೆ ಸೇರ್ಪಡೆ…!!

ವರದಿ. ಮಂಜುನಾಥ್. ಎಚ್

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ 16 ಗ್ರಾಪಂಗಳ ಪೈಕಿ ಮಂಗಳವಾರ ನಡೆದ 5 ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಒಂದರಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಪಡೆದರೆ ನಾಲ್ಕು ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರು ಪಂಚಾಯಿತಿಯನ್ನು ತಮ್ಮ ದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಗ್ರಾಮ ಪಂಚಾಯಿತಿ ಆಡಳಿತವನ್ನು ತನ್ನದಾಗಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರ ನಡುವೆ ನಡೆದ ತೀವ್ರ ಪೈಪೋಟಿಯ ನಡುವೆ ರಾಂಪುರ, ಹಾನಗಲ್, ಸಂತೆಗುಡ್ಡ, ಚಿಕ್ಕರಹಳ್ಳಿ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬಂದಿದ್ದಾರೆ. ತುಮಕೂರಹಳ್ಳಿ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತರು ಮತ್ತು ಉಪಾಧ್ಯಕ್ಷರಾಗಿಆಯ್ಕೆಯಾಗಿದ್ದಾರೆ.

ತಾಲೂಕಿನ ರಾಂಪುರ ಪಂಚಾಯಿತಿ ಹೊರತುಪಡಿಸಿದರೆ ಉಳಿದ 4, ಪಂಚಾಯಿತಿಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಂಪುರ ಎಲ್.ಪರಮೇಶ ಅಧ್ಯಕ್ಷ (ಅನುಸೂಚಿತ ಉಪಾಧ್ಯಕ್ಷೆ ನಾಗವೇಣಿ ಯು (ಸಾಮಾನ್ಯ ಮಹಿಳೆ) ಸಂತೆ ಗುಡ್ಡ ಅಧ್ಯಕ್ಷೆ ನಾಗಮ್ಮ (ಅನುಸೂಚಿತ ಜಾತಿ)ಉಪಾಧ್ಯಕ್ಷೆ ಒ.ಶಿಲ್ಪ(ಅನುಸೂಚಿತ ಪಂಗಡ) ಚಿಕ್ಕೇರಹಳ್ಳಿ ಗ್ರಾಪಂ ಅಧ್ಯಕ್ಷೆ ಕೆ. ವನಿತಾ (ಅನುಸೂಚಿತ ಪಂಗಡ)ಉಪಧ್ಯಕ್ಷೆ ಎಂ.ಗೀತಾ(ಅನುಸೂಚಿತ ಪಂಗಡಮಹಿಳೆ) ಹಾನಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್.ಜಯಶೀಲ (ಅನಸೂಚಿತ ಪಂಗಡ ಮಹಿಳೆ)ಉಪಾಧ್ಯಕ್ಷೆ ಓಬಕ್ಕ (ಅನಸೂಚಿತ ಪಂಗಡ) ತುಮಕೂರಹಳ್ಳಿ ಅಧ್ಯಕ್ಷೆ ಲಕ್ಷ್ಮಿ ದೇವಿ(ಸಾಮಾನ್ಯ ಮಹಿಳೆ ) ಉಪಾಧ್ಯಕ್ಷೆ ಸಂಗಮ್ಮ ಮೇಗರಾಜ (ಅನಸೂಚಿತ ಜಾತಿ) ಆಯ್ಕೆಯಾಗಿದ್ದಾರೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend