ನಿಧನ ವಾರ್ತೆ, ಕಾಯಿಕೇಡವ ಶರಣಪ್ಪ ಕೂಡ್ಲಿಗಿ…!!!

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*🪔ನಿಧನ ವಾರ್ತೆ-ಕಾಯಿಕೆಡವ ಶರಣಪ್ಪ ಕೂಡ್ಲಿಗಿ🪔*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶ್ರೀಪೇಟೆಬಸವೇಶ್ವರ ನಗರವಾಸಿ,ವೀರಶೈವ ಸಮುದಾಯದ ಹಿರಿಯ ಕಾಯಿಕೆಡವ ಶರಣಪ್ಪ(85).ಮಂಗಳವಾರ ನಿಧನರಾಗಿದ್ದಾರೆ.
ಅವರು ಬಹುದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದರು,ಮಂಗಳವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರು ವೃತ್ತಿಯಲ್ಲಿ ಕೃಷಿಕರು ಹಾಗೂ ದಲ್ಲಾಳಿಯಾಗಿದ್ದರು,ಹವ್ಯಾಸದಲ್ಲಿ ಹಿರಿಯ ರಂಗಕಲಾವಿದರು ಮತ್ತು ಹಿರಿಯ ಕುಸ್ಥಿ ಪೈಲ್ವಾನರಾಗಿ ತಾಲೂಕು ಹಾಗೂ ನೆರೆ ಹೊರೆಯ ತಾಲೂಕುಗಳಲ್ಲಿ ಹಿರಿಯ ಜಗಜಟ್ಟಿ ಎಂದೆನಿಸಿಕೊಂಡಿದ್ದರು.
ಹತ್ತಾರು ಪೌರಾಣಿಕ ನಾಟಕಗಳಲ್ಲಿ ಬಣ್ಣಹಚ್ಚಿ ನಟನೆಯ ಮೂಲಕ ಪರಕಾಶ ಪ್ರವೇಶ ಗೈದು, ಖ್ಯಾತ ರಂಗಕಲಾವಿದ ಎಂದೇ ಗುರುನಿಸಿಕೊಂಡಿದ್ದರು.ತಾಲೂಕಿನ ಬಹಿತೇಕ ಗ್ರಾಮೀಣ ಪ್ರದೇಶಗಳಲ್ಲಿ,ಎತ್ತಿನ ವ್ಯಾಪಾರದೊಂದಿಗೆ ಹಿರಿಯ ದಲ್ಲಾಳಿಗಳೆಂದು ಪರಗಣಿಸಲ್ಪಟ್ಟಿದ್ದರು.
ಇವರು ನಾಲ್ಕು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನ ಮತ್ತು ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.
*ಸಂತಾಪ-*
ಕಾಯಿಕೆಡವ ಶರಣಪ್ಪರ ಅಗಲಿಕೆಗೆ ವೀರಶೈವ ಲಿಂಗಾಯ್ತ ಹಾಗೂ ಪಂಚಮ ಸಾಲಿ ಸಮುದಾಯದ ಗಣ್ಯರು ಹಾಗೂ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರಿಪೇಟೆಬಸವೇಶ್ವರ ರಂಗ ಕಲಾವಿದರ ಸಂಘ,ಕೂಡ್ಲಿಗಿ ರಾಸುಗಳ ದಲ್ಲಾಲಿಗಳ ಸಂಘ,ತಾಲೂಕಿನ ಹಳೇ ಪೈಲ್ವಾನರ ಬಳಗ,ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ವಿವಿದ ಸಂಘಟನೆಗಳ ಪದಾಧಿಕಾರಿಗಳು.ವಿವಿದ ಜನಪ್ರತಿನಿಧಿಗಳ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾಯಿಕೆಡವ ಶರಣಪ್ಪರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
*ಅಂತ್ಯಕ್ರಿಯೆ-*<>ಮೃತ ಕಾಯಿಕೆಡವ ಶರಣಪ್ಪರ ಅಂತ್ಯ ಕ್ರಿಯೆ ಮಂಗಳವಾರ ಮಧ್ಯಹ್ನ,ಪಟ್ಟಣದ ಶ್ರಿವೀರಶೈವ ರುದ್ರಭೂಮಿಯಲ್ಲಿ ಜರುಗಲಿದೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend