ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರ

ಲಾಟರಿ ಮೂಲಕ ಅಧ್ಯಕ್ಷರ ಆಯ್ಕೆ.
ಬಳ್ಳಾರಿ ಜಿಲ್ಲಾ ಕೊಟ್ಟೂರು ತಾಲ್ಲೂಕಿನ ಚಿರಬಿ ಗ್ರಾಮ ಪಂಚಾಯತಿ ಅಧ್ಯಕ್ಷ,ಉಪಾಧ್ಯಕ್ಷರ ಸ್ಥಾನಕ್ಕೆ ಗುರುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ದೇವಿರಮ್ಮ ಅಧ್ಯಕ್ಷರಾಗಿ, ಚಿನ್ಮಯನಂದ ಸ್ವಾಮಿ ಉಪಾಧ್ಯಕ್ಷರಾಗಿ ಲಾಟರಿ ಮೂಲಕ ಆಯ್ಕೆಯಾದರು.
10 ಸದಸ್ಯಬಲವುಳ್ಳ ಗ್ರಾಮ ಪಂಚಾಯತಿಗೆ ಒಬ್ಬ ಸದಸ್ಯ ಗೈರಾಗಿದ್ದರಿಂದ 9 ಜನರ ಸಂಖ್ಯಾಬಲದಲ್ಲು, ರೇಖಾ ಹಾಗೂ ಗಂಗಾಧರಪ್ಪ ಬಣದ 5 ಮತಗಳ ಪೈಕಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರೇಖಾ ಅವರ ಮತ ಬ್ಯಾಲೇಟ್ ಪತ್ರದಲ್ಲಿ ಸಹಿ ಮಾಡಿ ಮತಚಲಾಯಿಸಿದ್ದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಚಲಾಯಿಸಿದ ಎರಡು ಮತಗಳು ತಿರಸ್ಕತಗೊಂಡು 4 ಮತಗಳ ಸಮಬಲವಾದ್ದರಿಂದ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.
ಲಾಟರಿ ಮೂಲಕ ಅಧ್ಯಕ್ಷರಾಗಿ ದೇವಿರಮ್ಮ ಹಾಗೂ ಉಪಾಧ್ಯಕ್ಷರಾಗಿ ಚಿನ್ಮಯನಂದಸ್ವಾಮಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಮರಿಸ್ವಾಮಿ ಕಾರ್ಯನಿರ್ವಾಹಿಸಿದರು, ಸದಸ್ಯರಾದ ಪಿ ನಾಗರಾಜ, ಎಂ ಶಾಂತಮ್ಮ, ಚನ್ನಬಸವನಗೌಡ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಎಸ್ ಗುರುಮೂರ್ತಿ, ಪಿ ಎಚ್ ಕೊಟ್ರೇಶ್, ಬೂದಿ ನಾಗರಾಜ ಹನುಂಮತಪ್ಪ, ಅವಿನಾಶ್,ಮೂಗಪ್ಪ,ತೂಲಹಳ್ಲಿ ನಾಗರಾಜ,ರಂಗಪ್ಪ ತೂಪಕಹಳ್ಳಿ ರಮೇಶ,ಎನ್ ತಿಪ್ಪಣ್ಣ,ವಿಶ್ವನಾಥ ಸಂತೋಶ, ಚಿರಬಿ ಕೊಟ್ರೇಶ್, ಅರವಿಂದ ಇದ್ದರು….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
