ವರದಿ. ಎಚ್ಚರಿಕೆ ಪತ್ರಿಕೆ ವರದಿಗಾರ

*ತುಂಬರಗುದ್ದಿ ಸ್ವಾಮಿಹಳ್ಳಿ:108ನಲ್ಲಿ ಮಗು ಜನನ*<->ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ತುಂಬರಗುದ್ದಿ ಸ್ವಾಮಿಹಳ್ಳಿ ಗ್ರಾಮದ,ತುಂಬು ಗರ್ಭಿಣಿ ರೇಣುಕಮ್ಮ ಎಂಬುವರು ಫೆ 5ರಂದು ಬೆಳಗಿನ ಜಾವ4:50ಗಂಟೆ ಯಲ್ಲಿ.ಚೋರನೂರು
108ಅಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ಸಂಡೂರು ತಾಲೂಕು
ತುಂಬರ ಗುದ್ದಿ ಸ್ವಾಮಿಹಳ್ಳಿ ಗ್ರಾಮದಲ್ಲಿದ್ದ ಅವರಿಗೆ,ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಾಗ 108ಸಂಪರ್ಕಿಸಿದ್ದಾರೆ.
ನೆರವಿಗೆ ಆಗಮಿಸಿದ ಚೋರನೂರು108 ಸಿಬ್ಬಂದಿ,ಗ್ರಾಮದಿಂದ ತುಂಬು ಗರ್ಭಿಣಿ ರೇಣುಕಮ್ಮಳನ್ನು ಚೋರನೂರು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ.ಮಾರ್ಗಮಧ್ಯ 108ವಾಹನ ಚಲಿಸುವಾಗ ವಾಹನದಲ್ಲಿಯೇ ಸುಲಭ ಹೆರಿಗೆಯಾಗಿದೆ.ಈ ಸಂದರ್ಭದಲ್ಲಿ108ಸಿಬ್ಬಂದಿ ಚಾಲಕ ಕೂಡ್ಲಿಗಿ ಪಂಪಾಪತಿಯೇ ಇ.ಎಮ್.ಟಿ.ಅವರ ಕಾರ್ಯನಿರ್ವಹಿಸಿದ್ದಾನೆ,ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಚಂದ್ರಕಲಾ ಸಹಕರಿಸಿದರು.ಈಮೂಲಕ ಪಂಪಾಪತಿ ಸಮಯ ಪ್ರಜ್ಞೆ ಮತ್ತು ಕರ್ಥವ್ಯ ನಿಷ್ಠೆ ಮೆರೆದಿದ್ದಾನೆ.ತಾಯಿ ರೇಣುಕಾ ಅವಳ ಮಗು ಕ್ಷೇಮವಿದ್ದು,ಅವರನ್ನು ಚೋರನೂರು ಅರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ರೇಣುಕಮ್ಮಳು ಹಾಗೂ ಅವರ ಕುಟುಂಬದವರು, 108ಸಿಬ್ಬಂದಿ ಪಂಪಾಪತಿ ಹಾಗೂ ಆಶಾ ಕಾರ್ಯಕರ್ತೆ ಚಂದ್ರಕಲಾ ರವರ ಕಾರ್ಯಕ್ಷಮತೆಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
