ವರದಿ.ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು/ ಪಟ್ಟಣದಲ್ಲಿಂದು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 112 ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಸೇವಾ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿಲಾಯಿತು. * ಒಂದೇ ಭಾರತ, ಒಂದೇ ತುರ್ತು ಕರೆ ಸಂಖ್ಯೆ 112, 15 ಸೆಕೆಂಡುಗಳಲ್ಲಿ ಕರೆ ಸ್ವೀಕಾರ,* 15 ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕ ತಿಳಿಸಿದರು. ಪಟ್ಟಣದ ಬಸ್‌ಸ್ಟ್ಯಾಂಡ್ ಆವರಣದಲ್ಲಿ 112 ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಮತ್ತು ವಾಹನ ಉದ್ಘಾಟಿಸಿ ಮಾತನಾಡಿದರು. ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಬಹುದಾದಂತಹ 112 ಇಂಡಿಯಾ ಅಪ್ಲಿಕೇಷನ್ ಅತಿ ತುರ್ತು ಪರಿಸ್ಥಿತಿಯಲ್ಲಿ ಎಸ್.ಒ.ಎಸ್. ಸಿಗ್ನಲ್ ಅನ್ನು ಪ್ರಚೋದನೆ ಮಾಡಿ ತುರ್ತು ಸ್ಪಂದನಾ ಕೇಂದ್ರಕ್ಕೆ, ರಕ್ತಸಂಬಂಧಿಗಳಿಗೆ ಮತ್ತು ಸ್ವಯಂ ಸೇವಕರುಗಳಿಗೆ ತ್ವರಿತವಾಗಿ ಕಾರ್ಯೋನ್ಮುಖವಾಗುವಂತೆ ಎಚ್ಚರಿಸಲು ಸಹಾಯ ಮಾಡುತ್ತದೆ. ಮಹಿಳೆಯರು ಮತ್ತು ಮಕ್ಕಳಿಗೆ ಸಹಾಯ ಮಾಡುವ ದೃಷ್ಟಿಯಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ. 112 ಇಂಡಿಯಾ ಅಪ್ಲಿಕೇಷನ್‌ನಿಂದ ಪ್ರಚೋದಿಸಲ್ಪಡುವ ಎಚ್ಚರಿಕೆಯ ಸೇವಾ ವಿನಂತಿಯ ಸ್ಥಳ ಮತ್ತು ವಿವರಗಳನ್ನು ಪ್ರದರ್ಶಿಸುವುದಲ್ಲದೇ ಸ್ವಯಂಸೇವಕರ ಸ್ಮಾರ್ಟ್ ಫೋನಿನಲ್ಲಿ ಕೂಗು ಅಲಾರಂ ನುಡಿಸುವ ಮೂಲಕ ಅವರ ಗಮನ ಸೆಳೆಯುತ್ತದೆ ಎಂದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಾಲಿಂಗ ಬಿ ನಂದಗಾವಿ, ಚಳ್ಳಕೆರೆ ಉಪ ವಿಭಾಗದ ಡಿ.ವೈ. ಎಸ್.ಪಿ. ಶ್ರೀಧರ್, ಡಿ.ಎ.ಆರ್.ಡಿ.ಎಸ್.ಪಿ. ತಿಪ್ಪೇಸ್ವಾಮಿ, ಸಬ್ ಇನ್ಸ್‌ಪೆಕ್ಟರ್ ಸೋಮಲಿಂಗಪ್ಪ, ವೈರ್‌ಲೆಸ್ ಸಬ್ ಇನ್ಸ್‌ಪೆಕ್ಟರ್ ರವಿ, ಆರಕ್ಷಕ ವೃತ್ತ ನಿರೀಕ್ಷಕ ಜಿ.ಬಿ.ಉಮೇಶ್, ಸಬ್ ಇನ್ಸ್‌ಪೆಕ್ಟರ್ ಎಂ.ಕೆ. ಬಸವರಾಜ್, ಪ್ರಭು, ಭಾಷಾ, ಎ.ಎಸ್.ಐ.ಜಯಪ್ಪ, ರಮೇಶ್, ಶ್ರೀಧರ್, ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
