ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ

ಬಳ್ಳಾರಿ: ಕೂಡ್ಲಿಗಿ ತಾಲ್ಲೂಕಿನ ಹುಡೇಂ ಗ್ರಾಮ ಪಂಚಾಯಿತಿಯಲ್ಲಿ ಇಂದು 26.01.2021ರಂದು ಗ್ರಾಮ ಪಂಚಾಯಿತಿಯಲ್ಲಿ 72ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಹಾಂತೇಶ್ ಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜಕ್ಕೆ ಗೌರವ ನಮನ ಸಲ್ಲಿಸಲಾಯಿತು. ಡಾ|| ಬಿ ಆರ್ ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ರಾಷ್ಟ್ರಧ್ವಜಕ್ಕೆ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀಮತಿ ಕರಿಬಸಮ್ಮ-ದುರ್ಗಪ್ಪ, ಅಜ್ಜಣ್ಣ ಟಿ, ಶಶಿಕಲಾ-ಜಯಣ್ಣ, ರಾಮಚಂದ್ರಪ್ಪ ಬಿ, ಯಲ್ಲಪ್ಪ, ಪುಟ್ಟಮ್ಮ-ಮಲ್ಲಿಕಾರ್ಜುನ್, ಸುಂದರಮ್ಮ-ಮಲ್ಲಿಕಾರ್ಜುನ್,ಜೋಳ ಪಾಲಯ್ಯ, ಸಾಕಮ್ಮ ಮಾಳಿಗೆ, ಕಾಟಯ್ಯ, ಪರ್ವತಮ್ಮ, ಪ್ಯಾರಿ ಮಾಬಿ, ಅನು, ಗಂಗಮ್ಮ, ಚಿತ್ತಯ್ಯ, ನಾಗಮ್ಮ, ಕಾರ್ಯದರ್ಶಿ ಚಂದ್ರಪ್ಪ, ಬಿಲ್ ಕಲೆಕ್ಟರ್ ತಿಪ್ಪೇರುದ್ರಪ್ಪ, ಗ್ರಂಥಾಲಯ ಮೇಲ್ವಿಚಾರಕರು ಗುರುರಾಜ್ ಟಿ,ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಊರಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
