;

ಶೇಂಗಾ ಬಣವಿ, ಹಾಗೂ ಹುರುಳಿ ಬಣವಿಗೆ ಆಕಸ್ಮಿಕ ಬೆಂಕಿ: ಹಾನಿ..!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಬಳ್ಳಾರಿ: ಕೂಡ್ಲಿಗಿ ತಾಲ್ಲೂಕಿನ ಹುಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಟಯ್ಯನಹಟ್ಟಿ ಗ್ರಾಮದಲ್ಲಿ ಶೇಂಗಾ ಬಣವಿ ಹಾಗೂ ಹುರುಳಿ ಬಣವಿಗೆ ಭಾನುವಾರ ರಾತ್ರಿ 11 ಘಂಟೆಗೆ ಬೆಂಕಿ ಬಿದ್ದು ಒಟ್ಟು ಅಂದಾಜು 50.000 ಸಾವಿರ ನಷ್ಟ ಸಂಭವಿಸಿದೆ. ಶೇಂಗಾ ನಾಶವಾದ ಘಟನೆ ಜರುಗಿದೆ. ತಾಲ್ಲೂಕಿನ ಹುಡೇಂ ಗ್ರಾಮ ಪಂಚಾಯಿತಿಯ ಚೌಟಯ್ಯನಹಟ್ಟಿ ಗ್ರಾಮದ ಮುತ್ತಪ್ಪ ತಂದೆ ಚಿತ್ತಯ್ಯ, ಅವರ ತಮ್ಮ ಸ್ವಂತ ಜಮೀನಿನಲ್ಲಿ 4 ಎಕರೆ ಹೊಲದಲ್ಲಿ 2 ಲೋಡು ಶೇಂಗಾ ಬಣವಿ ಹಾಗೂ 1 ಲೋಡು ಹುರುಳಿ ಬಣವಿ ತಮ್ಮ ಸ್ವಂತ ಕಣದಲ್ಲಿ ಹಾಕಿದ್ದರು ಒಂದೆಡೆ ಬಣವಿ ಹಾಕಿ ಇನ್ನೇನು ಒಕ್ಕಲು ಮಾಡಬೇಕು ಎನ್ನುವ ಹೊತ್ತಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ರಾತ್ರಿ ಸಮಯದಲ್ಲಿ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ಸಂಶಯ ಮೂಡಿಸಿದೆ. ರಾತ್ರಿ ಬೆಂಕಿಯನ್ನು ದೂರದಿಂದಲೇ ಕಾಲೊನಿಯ ಜನರು ಅಗ್ನಿ ಶಾಮಕ ದಳದವರಿಗೆ ಸುದ್ದಿ ತಿಳಿಸಿದಾಗ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಮೊಳಕಾಲ್ಮೂರು ಅಗ್ನಿ ಶಾಮಕ ದಳ ಬೆಂಕಿ ನಂದಿಸುವಲ್ಲಿ ಪ್ರಯತ್ನಿಸಿದರಾದರೂ ಶೇಂಗಾ ಬಣವಿ ಹಾಗೂ ಹುರುಳಿ ಬಣವಿ ಪೂರ್ಣ ಬೆಂಕಿಗೆ ಆಹುತಿಯಾಗಿತ್ತು. ಘಟನೆ ನಡೆದ ಸ್ಥಳಕ್ಕೆ ಹುಡೇಂ ಗ್ರಾಮ ಪಂಚಾಯಿತಿಯ ಕಂದಾಯ ವೃತ್ತಿ ಗ್ರಾಮ ಲೆಕ್ಕಾಧಿಕಾರಿ ಮರುಳಸಿದ್ದಪ್ಪನವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಟ್ಟು ಅಂದಾಜು 50.000 ಸಾವಿರಕ್ಕಿಂತ ಹೆಚ್ಚಿನ ವೌಲ್ಯದ ಶೇಂಗಾ ಬಣವಿ ಹಾಗೂ ಹುರುಳಿ ಬಣವಿ ನಾಶವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ದಾಖಲಿಸಿಕೊಂಡು ತನಿಖೆ ಕೆಗೊಂಡಿದ್ದಾರೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;